Indian Gold: ಆಗಸ್ಟ್ ತಿಂಗಳ ಕೊನೆಯ ದಿನವು ಚಿನ್ನದ ಬೆಲೆಯಲ್ಲಿ ಏರಿಕೆ, ಚಿನ್ನ ಇನ್ನಷ್ಟು ದುಬಾರಿ.
ಆಗಸ್ಟ್ ತಿಂಗಳ ಕೊನೆಯ ದಿನವೂ ಚಿನ್ನದ ಬೆಲೆ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಬೇಸರ ನೀಡಿದೆ.
Gold Price Hike Today: ಹೊಸ ವರ್ಷದ ಆರಂಭದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸಾಲು ಸಾಲು ಏರಿಕೆಯ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡುತ್ತಿದೆ. ಜನರು ಯಾವುದೇ ರೀತಿಯ ಆಭರಣ ಖರೀದಿಗೆ ಮನಸ್ಸು ಮಾಡುತ್ತಿದ್ದರು ಚಿನ್ನದ ಬೆಲೆ ಅವರನ್ನು ಕಂಗಾಲು ಮಾಡುತ್ತಿತ್ತು. 2022 ರ ಅಂತ್ಯದಲ್ಲಿ 5000 ದ ಗಡಿಯಲ್ಲಿದ್ದ ಚಿನ್ನದ ಬೆಲೆ ಹೊಸ ಹಣಕಾಸು ವರ್ಷದ ಆರಂಭದಿಂದ 6,000 ರೂ ಗಡಿ ದಾಟಿತ್ತು.
ಆದರೆ ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಎರಡು ವಾರಗಳ ಕಾಲ ಇಳಿಕೆಯಾಗಿದೆ. ಈ ವೇಳೆ 6,000 ಗಡಿ ದಾಟಿದ್ದ ಚಿನ್ನದ ಬೆಲೆ 5,000 ಹಂತ ತಲುಪಲು ಪ್ರಾರಂಭಿಸಿತ್ತು. ಆದರೆ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಏರಿಕೆಯಾಗಿ ಇದೀಗ ಮತ್ತೆ 6,000 ರೂ ಗಡಿ ದಾಟಿದೆ. ಚಿನ್ನದ ಖರೀದಿ ಜನಸಾಮಾನ್ಯರಿಗೆ ಇನ್ನು ಕಷ್ಟವಾಗುತ್ತಿದೆ. ಜನರು ಚಿನ್ನ ಖರೀದಿಯತ್ತ ಮುಖ ಮಾಡದಂತಾಗಿದೆ. ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಾಣುವ ಮೂಲಕ ತಿಂಗಳ ಕೊನೆಯ ದಿನವೂ ಆಭರಣ ಪ್ರಿಯರಿಗೆ ಬೇಸರ ನೀಡಿದೆ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 5,500 ರೂ. ತಲುಪಿದೆ. ಇಂದು 44120 ರೂ. ಎಂಟು ಗ್ರಾಂ ಚಿನ್ನದ ಬೆಲೆಯಾಗಿದೆ. ಇನ್ನು ಇಂದು ಹತ್ತು ಗ್ರಾಂ ಚಿನ್ನದ ಬೆಲೆ 55,150 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,51,500 ರೂ. ತಲುಪಿದೆ.
330 ರೂ. ಏರಿಕೆ ಕಂಡ 10 ಗ್ರಾಂ 24 ಕ್ಯಾರೆಟ್ ಚಿನ್ನ
ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 16 ರೂ. ಏರಿಕೆಯಾಗುವ ಮೂಲಕ 6,016 ರೂ. ತಲುಪಿದೆ. ಇಂದು 48,128 ರೂ. ಎಂಟು ಗ್ರಾಂ ಚಿನ್ನಕ್ಕೆ ನೀಡಬೇಕಾಗಿದೆ. ಇನ್ನು ಇಂದು ಹತ್ತು ಗ್ರಾಂ ಚಿನ್ನದ ಬೆಲೆ 60,10 ರೂ. ಆಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 6,01,600 ರೂ. ತಲುಪಿದೆ.