Gold Rate Hike: ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಬಡವರ ಕೈಗೆ ಸಿಗದಂತಾದ ಚಿನ್ನದ ಬೆಲೆ.
ಸತತ ನಾಲ್ಕನೇ ದಿನವೂ ಚಿನ್ನದ ಬೆಲೆ ಏರಿಕೆಯಾಗಿದ್ದು ದೇಶದಲ್ಲಿ ಚಿನ್ನದ ವಹಿವಾಟು ಕುಸಿದಿದೆ.
October 10th Gold Price: ಸದ್ಯ ದೇಶದಲ್ಲಿ ಚಿನ್ನದ ದಿನೇ ದಿನೇ ಬದಲಾಗುತ್ತಿದೆ. ಚಿನ್ನದ ಬೆಲೆಯ (Gold Price) ಇಳಿಕೆಯ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೊಸ ವರ್ಷದಿಂದ ಚಿನ್ನದ ಬೆಲೆ ಏರಿಕೆಯಾಗುತ್ತ ಜನಸಮಾನ್ಯರಿಗೆ ಬೇಸರ ನೀಡುತ್ತಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಈ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮಾರಾಟ ನಡೆದಿಲ್ಲ ಎನ್ನಬಹುದು. ಈ ನಿಟ್ಟಿನಲ್ಲಿ ಒಮ್ಮೊಮ್ಮೆ ಚಿನ್ನದ ಬೆಲೆ ಇಳಿಕೆ ಕಾಣುತ್ತದೆ.
ಕಳೆದ Septembar ನವರೆಗೆ ಚಿನ್ನದ ಬೆಲೆಯಲ್ಲಿ ಏರಿಕೆಯ ಪ್ರಮಾಣವೇ ಹೆಚ್ಚಿತ್ತು. ಆದರೆ October ತಿಂಗಳ ಮೊದಲ 5 ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದೀಗ ಮತ್ತೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಸತತ ಮೂರು ದಿನಗಳಿಂದ ಚಿನ್ನದ ಬೆಲೆ ಗಣನೀಯ ಏರಿಕೆಯತ್ತ ಸಾಗುತ್ತಿದೆ ಎನ್ನಬಹುದು. ಇನ್ನು ನಿನ್ನೆ 200 ರೂ. ಏರಿಕೆ ಕಂಡಿರುವ ಚಿನ್ನದ ಬೆಲೆ ಇಂದು ಮತ್ತೆ 300 ರೂ. ಏರಿಕೆಯಾಗಿದೆ. ಸದ್ಯ 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ವಿವರ ಇಲ್ಲಿದೆ.
ಇಂದು ಚಿನ್ನದ ಬೆಲೆಯಲ್ಲಿ ಮತ್ತೆ 300 ರೂ. ಏರಿಕೆ
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,365 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,335 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 42,920 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 42,680 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 53,650 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 53,350 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,36,500 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,33,500 ರೂ. ಗೆ ಲಭ್ಯವಾಗಿತ್ತು.
24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,853 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,820 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 46,824 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 46,560 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 58,530 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 58,200 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,85,300 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,82,000 ರೂ. ಗೆ ಲಭ್ಯವಾಗಿತ್ತು.