Gold Update: ತಿಂಗಳ ಮೊದಲ ವಾರವೇ ದಾಖಲೆಯ ಏರಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ, ಚಿನ್ನ ಮತ್ತಷ್ಟು ದುಬಾರಿ.
ಸೆಪ್ಟೆಂಬರ್ ತಿಂಗಳ ಮೊದಲ ವಾರೇ ಚಿನ್ನದ ಬೆಲೆ ಏರಿಕೆ.
Today Gold Price Hike Update: ಪ್ರತಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ನಡುವೆ ಚಿನ್ನದ ಬೆಲೆ ಕೂಡ ದಿನೇ ದಿನೇ ಬದಲಾಗುತ್ತಿದೆ. ಚಿನ್ನದ ಖರೀದಿ (Gold Purchase) ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಇನ್ನು ಹೆಚ್ಚಾಗಿ ಮಧ್ಯಮ ವರ್ಗದ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಖರೀದಿಗೆ ಮೀಸಲಿಡುತ್ತಾರೆ.
ಚಿನ್ನದ ಖರೀದಿ ಮುಂದಿನ ದಿನದಲ್ಲಿ ಹೆಚ್ಚಿನ ಲಾಭ ನೀಡುತ್ತದೆ. ಹೀಗಾಗಿ ಜನರು ತಮ್ಮ ಕೈಯಲ್ಲಿ ಸ್ವಲ್ಪ ಹಣ ಇದ್ದರು ಕೂಡ ಚಿನ್ನದ ಖರಿದಿಗೆ ಮನಸ್ಸು ಮಾಡುತ್ತಿದ್ದಾರೆ. ಆದರೆ ಹಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಾಣುತ್ತಿದೆ. ಇದರಿಂದಾಗಿ ದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಚಿನ್ನ ಮಾರಾಟವಾಗುತ್ತಿಲ್ಲ. ಒಂದು ವಿಧದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆಯು ದೇಶಿಯ ಮರುಕಟ್ಟೆಯ್ಲಲಿ ಚಿನ್ನ ಮೇಲಿನ ಏರಿಕೆಗೆ ಕಾರಣವಾಗುತ್ತಿದೆ.
ಸೆಪ್ಟೆಂಬರ್ ನ ಮೊದಲ ವಾರದಲ್ಲೇ ಚಿನ್ನದ ಬೆಲೆಯಲ್ಲಿ ಏರಿಕೆ
ಚಿನ್ನ ಖರೀದಿಗೆ ಇನ್ನು ಕೂಡ ಉತ್ತಮ ಸಮಯ ಬಂದಿಲ್ಲ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಕೆಲ ಹಬ್ಬದ ವಿಶೇಷಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಹಬ್ಬದ ವಿಶೇಷಕ್ಕೂ ಚಿನ್ನದ ಬೆಲೆ ಇಳಿಕೆಯಾಗಿಲ್ಲ. ಇನ್ನು ಗಣೇಶ ಚರ್ತುರ್ಥಿಯ ಹಬ್ಬದ ದಿನದಂದು ಜನರು ಚಿನ್ನದ ಇಳಿಕೆಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ 5,530 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,520 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ ಏರಿಕೆಯಾಗಿ 44,240 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 44,160 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಏರಿಕೆಯಾಗಿ 55,300 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 55,200 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ ಏರಿಕೆಯಾಗಿ 5,53,000 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,52,000 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ 6,032 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,022 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ ಏರಿಕೆಯಾಗಿ 48,256 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,177 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಏರಿಕೆಯಾಗಿ 60,320 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,220 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,700 ರೂ ಏರಿಕೆಯಾಗಿ 6,03,200 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,02,200 ರೂ. ಗೆ ಲಭ್ಯವಿತ್ತು.