Indian Gold: ಚಿನ್ನ ಖರೀದಿ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆ.
ಸತತ ನಾಲ್ಕೈದು ದಿನದಿಂದ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ, ಚಿನ್ನ ಖರೀದಿಸಲು ಇದು ಉತ್ತಮ ಸಮಯ.
Gold Price Down: ಚಿನ್ನದ ಬೆಲೆಯಲ್ಲಿ ಇತ್ತೀಚಿಗೆ ಗಣನೀಯ ಏರಿಕೆಯಾಗುತ್ತಿದೆ. ಚಿನ್ನ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಚಿನ್ನ(Gold) ಖರೀದಿಸಲು ಜನರು ಬಯಸಿದರು ಚಿನ್ನದ ಬೆಲೆ ಕೇಳಿ ಖರೀದಿಗೆ ಹಿಂದೇಟು ಹಾಕುತ್ತಾರೆ. ಇನ್ನು ಕಳೆದ ವರ್ಷದಲ್ಲಿ ಚಿನ್ನದ ಬೆಲೆ 4000 ಗಡಿಯಲ್ಲಿತ್ತು. ಕಳೆದ ಆಗಸ್ಟ್ ನಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ.
ಹೊಸ ಹಣಕಾಸು ವರ್ಷದ ಆರಂಭದ ವೇಳೆ ಚಿನ್ನದ ದರ 5,000 ಗಡಿ ತಲುಪಿತ್ತು. ನಂತರ ದಿನೇ ದಿನೇ ಚಿನ್ನದ ದರ ಏರಿಕೆ ಕಾಣುತ್ತ ಬಂದಿದೆ. ಚಿನ್ನದ ದರ ಏರಿಕೆಯಾದರೆ ಬರೋಬ್ಬರಿ 400 ರಿಂದ 600 ರೂ. ಏರಿಕೆಯಾಗುತ್ತದೆ. ಆದರೆ ಚಿನ್ನದ ಇಳಿಕೆಯ ಪ್ರಮಾಣ ಕಡಿಮೆಯಿರುತ್ತದೆ. 2023 ಆರಂಭದಿಂದ ಚಿನ್ನದ ಬೆಲೆ ಏರಿಕೆಯಾಗಿ 5,000 ಗಡಿಯಲ್ಲಿದ್ದ ದರ 6,000 ಗಡಿ ತಲುಪುವ ಹಂತಕ್ಕೆ ಬಂದಿತ್ತು. ಜುಲೈ ಅಂತ್ಯದವರೆಗಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ
ಆಗಸ್ಟ್ ನ ಎರಡನೇ ವಾರದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಸತತ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಕೂಡ ಹತ್ತು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 350 ರೂ. ಇಳಿಕೆಯಾಗಿದೆ. ಈ ಮೂಲಕ 6000 ಗಡಿದಾಟಿದ್ದ ಚಿನ್ನದ ಬೆಲೆ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ಆಭರಣ ಖರೀದಿಗೆ ಜನರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇಂದಿನ ದರದ ಚಿನ್ನದ ಖರೀದಿ ಜನರಿಗೆ ಹೆಚ್ಚಿನ ಲಾಭ ನೀಡಲಿದೆ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,445 ರೂ. ಆಗಿದೆ. ನಿನ್ನೆಗಿಂತ ಇಂದು 35 ರೂ ಕಡಿಮೆಯಾಗಿ ಇಂದು 5,410 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,560 ರೂ. ಇದ್ದು ಇಂದು 43,280 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 280 ರೂ. ಇಳಿಕೆಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,450 ಇದ್ದು ಇಂದು 54,100 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 350 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,44,500 ಇದ್ದು ಇಂದು 5,41,000 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 3500 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ನಿನ್ನೆ 5,940 ರೂ. ಆಗಿದೆ. ನಿನ್ನೆಗಿಂತ ಇಂದು 38 ರೂ ಕಡಿಮೆಯಾಗಿ ಇಂದು 5,902 ರೂ. ತಲುಪಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 47,520 ಇದ್ದು, ಇಂದು 47,216 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 304 ರೂ. ಇಳಿಕೆಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 59,400 ಇದ್ದು, ಇಂದು 59,020 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 380 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,94,000 ಇದ್ದು, ಇಂದು 5,90,200 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 3800 ರೂ. ಇಳಿಕೆಯಾಗಿದೆ.