Gold Price: ಸತತ ಇಳಿಕೆ ಕಂಡ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಏರಿಕೆ, ಚಿನ್ನ ಮತ್ತೆ ದುಬಾರಿ.
ದೇಶದಲ್ಲಿ ಇಂದು ಚಿನ್ನದ ಬೆಲೆ ಕೊಂಚ ಅಧಿಕವಾಗಿದೆ.
Gold Price Hike: ಆಗಸ್ಟ್ ತಿಂಗಳ ಆರಂಭ ಆಭರಣ ಪ್ರಿಯರಿಗೆ ಖುಷಿ ನೀಡಿತ್ತು. ಏಕೆಂದರೆ ಆಗಸ್ಟ್ ಮೊದಲ ವಾರದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದರೂ ನಂತರದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿತ್ತು.
ಎರಡು ವಾರದ ಬೆಲೆಯ ಇಳಿಕೆಯ ಪರಿಣಾಮವಾಗಿ 6,000 ಸಾವಿರ ಗಡಿ ದಾಟಿದ್ದ ಚಿನ್ನದ ಬೆಲೆ ಮತ್ತೆ 5,000 ತಲುಪಿತ್ತು. ಆಭರಣ ಖರೀದಿಗೆ ಜನರು ಹೆಚ್ಚಾಗಿ ಬೆಲೆ ಇಳಿಕೆಯನ್ನು ನಿರೀಕ್ಷಿಸುತ್ತಾರೆ. ಆದರೆ ಚಿನ್ನದ ಬೆಲೆ (Gold Price) ಇಳಿಕೆ ಕಂಡ ಬೆನ್ನಲ್ಲೇ ಏರಿಕೆಯಾಗುತ್ತಿದೆ.
ಇಂದು ಹತ್ತು ಗ್ರಾಂ ಚಿನ್ನದಲ್ಲಿ 50 ರೂ. ಏರಿಕೆ ಕಂಡ ಚಿನ್ನ
ಜುಲೈ ನಲ್ಲಿ ಚಿನ್ನ ಬಹುತೇಕ ಏರಿಕೆ ಕಂಡಿದೆ. ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ಬೆಲೆಯೂ ಸ್ಥಿರತೆ ಕಂಡು ಬಂದಿತ್ತು. ಆದರೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ ಮತ್ತೆ 50 ರೂ. ಏರಿಕೆಯಾಗಿದೆ. ಇಷ್ಟು ದಿನಗಳ ಬೆಲೆಯ ಏರಿಕೆಗೆ ಹೋಲಿಸಿದರೆ ಇಂದು ಸ್ವಲ್ಪ ಪ್ರಮಾಣದಲ್ಲಿ ಚಿನ್ನ ಏರಿಕೆಯಾಗಿದೆ. ಇದೀಗ ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,415 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 5 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 40 ಏರಿಕೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 54,150 ರೂ. ಆಗಿದೆ.
ನಿನ್ನೆ ಹತ್ತು ಚಿನ್ನ 54,100 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,280 ಇದ್ದು, ಇಂದು 43,320 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,41,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5907 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,020 ಇದ್ದು, ಇಂದು 59070 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,216 ಇದ್ದು, ಇಂದು 47256 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 5,90,700 ರೂ. ತಲುಪಿದೆ.