Indian Gold Price: ಒಂದೇ ದಿನದಲ್ಲಿ 100 ರೂ ಏರಿಕೆಯಾದ ಚಿನ್ನದ ಬೆಲೆ, ಇನ್ನುಮುಂದೆ ಚಿನ್ನ ಮತ್ತಷ್ಟು ದುಬಾರಿ.
22 ಹಾಗೂ 24 ಕ್ಯಾರಟ್ ಚಿನ್ನದ ಇಂದಿನ ಬೆಲೆ.
Indian Gold Price Hike Today: 2023 ರ ಆರಂಭದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸಾಲು ಏರಿಕೆಯ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡುತ್ತಿತ್ತು. ಜನರು ಯಾವುದೇ ರೀತಿಯ ಆಭರಣ ಖರೀದಿಗೆ ಮನಸ್ಸು ಮಾಡುತ್ತಿದ್ದರು ಚಿನ್ನದ ಬೆಲೆ ಅವರ ಕಂಗಾಲು ಮಾಡುತ್ತಿತ್ತು. 2022 ರ ಅಂತ್ಯದಲ್ಲಿ 5000 ದ ಗಡಿಯಲ್ಲಿದ್ದ ಚಿನ್ನದ ಬೆಲೆ ಹೊಸ ಹಣಕಾಸು ವರ್ಷದ ಆರಂಭದಿಂದ 6000 ರೂ ಗಡಿ ದಾಟಿತ್ತು.
ಏಪ್ರಿಲ್ ತಿಂಗಳಿನಿಂದ ಆಭರಣದ ಬೆಲೆ ಗಗನಕೇರಿತ್ತು. ಜುಲೈ ತಿಂಗಳಿನಲ್ಲಂತೂ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ 300 ರಿಂದ 700 ರೂ. ತನಕ ಏರಿಕೆ ಕಂಡಿತ್ತು. ಆದರೆ ಆಗಸ್ಟ್ ಆರಂಭ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಸತತ ಎರಡು ವಾರಗಳ ಇಳಿಕೆ ಕಂಡಿರುವ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯತ್ತ ಸಾಗುತ್ತಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಇಂದು ಹತ್ತು ಗ್ರಾಂ ಚಿನ್ನದಲ್ಲಿ 100 ರೂ. ಏರಿಕೆ ಕಂಡ ಚಿನ್ನ
ಜುಲೈ ನಲ್ಲಿ ಚಿನ್ನ ಬಹುತೇಕ ಏರಿಕೆ ಕಂಡಿದೆ. ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ಬೆಲೆಯೂ ಸ್ಥಿರತೆ ಕಂಡು ಬಂದಿತ್ತು. ಆದರೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ ಮತ್ತೆ 100 ರೂ. ಏರಿಕೆಯಾಗಿದೆ. ಇದೀಗ ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5923 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ಏರಿಕೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 54,300 ರೂ. ಆಗಿದೆ.
ನಿನ್ನೆ ಹತ್ತು ಚಿನ್ನ 54,200 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,360 ಇದ್ದು, ಇಂದು 43,440 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,43,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5923 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,130 ಇದ್ದು, ಇಂದು 59,230 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,304 ಇದ್ದು, ಇಂದು 47,384 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 5,92,300 ರೂ. ತಲುಪಿದೆ.