Gold Update: ಗಣೇಶ ಹಬ್ಬದ ಮರುದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಚಿನ್ನದ ಅಂಗಡಿ ಮುಂದೆ ಜನಸಂದಣಿ.
ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.
Gold Price Down Today: ದೇಶದಲ್ಲಿ ಗಣೇಶ ಹಬ್ಬದ ಶುಭ ದಿನದಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿರಲಿಲ್ಲ. ಈ ಬಾರಿ ಯಾವುದೇ ಹಬ್ಬದ ವಿಶೇಷಕ್ಕೂ ಚಿನ್ನದ ದರ ಇಳಿಕೆಯಾಗಿಲ್ಲ. ಚಿನ್ನದ ದರದ ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ. ಚಿನ್ನ ಖರೀದಿ ಜನಸಮಾನ್ಯರಿಗೆ ಕಷ್ಟವಾಗುತ್ತಿದೆ ಎನ್ನಬಹುದು.
ನಿನ್ನೆಯ ಏರಿಕೆಯ ನಡುವೆ ಇದೀಗ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ್ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಈ ಮೂಲಕ ಜನಸಮಾನ್ಯರ ಮುಖದಲ್ಲಿ ನಗು ತರಿಸಿದೆ. ಮೊನ್ನೆಯಷ್ಟೇ 55,000 ದಲ್ಲಿ ಲಭ್ಯವಿದ್ದ ಚಿನ್ನದ ಬೆಲೆ ನಿನ್ನೆ 150 ರೂ. ಏರಿಕೆಯಾಗುವ ಮೂಲಕ 55,200 ರ ಗಡಿ ತಲುಪಿತ್ತು. ಆದರೆ 150 ರೂ. ಇಳಿಕೆಯ ಮೂಲಕ 5050 ರೂ. ತಲುಪಿದೆ.
ಇಂದು 150 ರೂ. ಇಳಿಕೆ ಕಂಡ ಚಿನ್ನದ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ ಇಳಿಕೆಯಾಗಿ 5,505 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,520 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ ಇಳಿಕೆಯಾಗಿ 44,040 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 44,160 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ ಇಳಿಕೆಯಾಗಿ 55,050 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 55,200 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂ ಇಳಿಕೆಯಾಗಿ 550500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,52,000 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 18 ರೂ ಇಳಿಕೆಯಾಗಿ 6,005 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,023 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 144 ರೂ ಇಳಿಕೆಯಾಗಿ 48,040 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,184 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 180 ರೂ ಇಳಿಕೆಯಾಗಿ 60,050 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,230 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರೂ ಇಳಿಕೆಯಾಗಿ 6,00,500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,02,300 ರೂ. ಗೆ ಲಭ್ಯವಿತ್ತು.