1990 Gold Price Indian History: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಚಿನ್ನದ ಬೆಲೆ ಏರಿಕೆಯತ್ತ ಮುಖಮಾಡಿರುವುದು ಸದ್ಯ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಭಾರತೀಯರಿಗೆ ಚಿನ್ನ ಸಂಸ್ಕ್ರತಿಯ ಒಂದು ಭಾಗ ಆಗಿದೆ. ಚಿನ್ನದ ಬೆಲೆ ಎಷ್ಟೇ ಏರಿಕೆ ಆದರೂ ಚಿನ್ನದ ಮೇಲಿನ ಒಲವು ಕಡಿಮೆ ಆಗುವುದಿಲ್ಲ. ಚಿನ್ನದ ಬೆಲೆ ಏರಿಕೆ ನಮ್ಮ ಹಣಕಾಸು ಮತ್ತು ಸಂಸ್ಕೃತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈಗಿನ ಕಾಲಕ್ಕೆ ಹೋಲಿಕೆ ಮಾಡಿದರೆ 1990 ರ ದಶಕದಲ್ಲಿ ಚಿನ್ನದ ಬೆಲೆ ಬಹಳ ಅಗ್ಗವಾಗಿತ್ತು. 30 ವರ್ಷಗಳ ಹಿಂದೆ ಅಂದರೆ ಸುಮಾರು 1990 ರ ದಶಕದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದ್ದೇ.
1990 ರಲ್ಲಿ ಬಂಗಾರದ ಬೆಲೆ ಎಷ್ಟಿತ್ತು?
ಭಾರತದಲ್ಲಿ ಸುಮಾರು 1990 ರ ದಶಕದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ ಗೆ 3,200 ರೂಪಾಯಿ ಆಗಿತ್ತು ಮತ್ತು ಆ ವರ್ಷದಲ್ಲಿ ಸ್ಥಿರವಾದ ಬೆಲೆ ಆಗಿತ್ತು. 1990 ರಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದು ಕುಟುಂಬದ ಒಂದು ತಿಂಗಳ ಆದಾಯಕ್ಕೆ ಸಮಾನವಾಗಿತ್ತು. 1991 ರ ಆರ್ಥಿಕ ಸುಧಾರಣೆಗಳ ಮೊದಲು ಚಿನ್ನದ ಬೆಲೆಯು ಸ್ಥಿರವಾಗಿತ್ತು, ಆದರೆ ದೇಶದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳು ಅದರ ಮೇಲೆ ಪರಿಣಾಮ ಉಂಟುಮಾಡಿದ ನಂತರ ಚಿನ್ನದ ಬೆಲೆ ಏರಿಕೆಯಾಗಲು ಪ್ರಾರಂಭಿಸಿತು.
1990 ರಿಂದ ಚಿನ್ನದ ಬೆಲೆ ಏರಿಕೆಯಾದ ಹಿನ್ನಲೆ
ಭಾರತದ ಆರ್ಥಿಕ ಸ್ಥಿತಿಯಿಂದಾಗಿ 1990 ರಲ್ಲಿ ಚಿನ್ನದ ಬೆಲೆ ತೀರಾ ಕಡಿಮೆಯಾಗಿತ್ತು. ರೂಪಾಯಿ ಮೌಲ್ಯ ಕಡಿಮೆಯಾಗುತ್ತು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಾಲರ್ ಗೆ ಸಂಬಂಧಿಸಿದ್ದು ಸುಮಾರು $ 350-400 ಪ್ರತಿ ಔನ್ಸ್ ಇತ್ತು. ಭಾರತದಲ್ಲಿ ಚಿನ್ನವು ಕೇವಲ ಅಲಂಕಾರವಲ್ಲ, ಬದಲಿಗೆ ಸುರಕ್ಷಿತ ಹೂಡಿಕೆಯಾಗಿತ್ತು. ಕುಟುಂಬಗಳು ವಿವಾಹ ಅಥವಾ ಹಬ್ಬಗಳಿಗಾಗಿ ಚಿನ್ನ ಖರೀದಿಸುತ್ತಿದ್ದವು. ಆದರೆ, ಬೆಲೆಯು ಇಂದಿಗಿಂತ 20 ರಿಂದ 30 ಪಟ್ಟು ಕಡಿಮೆ ಆಗಿತ್ತು. ಹೋಲಿಕೆಯಲ್ಲಿ ನೋಡುವುದಾದರೆ, 1989 ರಲ್ಲಿ ಚಿನ್ನದ ಬೆಲೆ 3,140 ರೂಪಾಯಿ ಇತ್ತು ಮತ್ತು 1991 ರಲ್ಲಿ 3,466 ರುಪಾಯಿಗೆ ಏರಿಕೆ ಆಗಿದೆ. ಇದು ಚಿನ್ನದ ಬೆಲೆಯು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. 1991 ರ ನಂತರ ದೇಶದಲ್ಲಿ ಚಿನ್ನದ ಬೆಲೆ ಹಂತವಾಗಿ ಹಂತವಾಗಿ ಬೆಳೆದು ಇಂತೂ ಈ ಮಟ್ಟಕ್ಕೆ ಬಂದಿರುವುದನ್ನು ನಾವು ಗಮನಿಸಬಹುದು.
2025 ರ ಚಿನ್ನದ ಬೆಲೆ ಹೋಲಿಕೆ ಮಾಡಿದರೆ
2025 ರಲ್ಲಿ 10 ಗ್ರಾಂ ಚಿನ್ನದ ಬೆಲೆ 70,000-80,000 ರೂಪಾಯಿ ಆಗಿದೆ. 1990 ರಿಂದ ಇಲ್ಲಿಯವರೆಗೆ ಬೆಲೆ 20 ಪಟ್ಟು ಏರಿಕೆಯಾಗಿದೆ. ಬೆಲೆ ಏರಿಕೆ, ರೂಪಾಯಿಯ ದುರ್ಬಲತೆ, ಮತ್ತು ಅಂತರರಾಷ್ಟ್ರೀಯ ಸಂಘರ್ಷಗಳು ಇದಕ್ಕೆ ಮುಖ್ಯ ಕಾರಣ ಆಗಿದೆ. ಅಂದು ಭಾರತದ ರೂಪಾಯಿ ಮೌಲ್ಯಕ್ಕೆ ಸಮಾನವಾಗಿ ಚಿನ್ನದ ಬೆಲೆ ನಿಗದಿ ಮಾಡಲಾಗಿತ್ತು, ಆದರೆ ಈಗ ಭಾರತದ ರೂಪಾಯಿ ಮೌಲ್ಯ ಕೂಡ ಡಾಲರ್ ಎದುರು ಕುಸಿತವಾದ ಕಾರಣ ಚಿನ್ನದ ಬೆಲೆ ಮತ್ತಷ್ಟು ಏರಿಕೆಯತ್ತ ಸಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

