Purchase Limit: ಚಿನ್ನ ಖರೀದಿಸುವವರಿಗೆ ಕೇಂದ್ರದಿಂದ ಹೊಸ ನಿಯಮ, ಇದಕ್ಕಿಂತ ಹೆಚ್ಚು ಹಣಕೊಟ್ಟು ಚಿನ್ನ ಖರೀದಿಸುವಂತಿಲ್ಲ.
ಇನ್ನುಮುಂದೆ ಇದಕ್ಕಿಂತ ಹೆಚ್ಚು ಹಣಕೊಟ್ಟು ಚಿನ್ನ ಖರೀದಿ ಮಾಡುವಂತಿಲ್ಲ.
Gold Purchase In Cash Limit: ಸದ್ಯ ಹಬ್ಬದ ಸೀಸನ್ ಪ್ರರಂಭಗೊಂಡಿದೆ. ಈ ಹಬ್ಬದ ಸೀಸನ್ ನಲ್ಲಿ ಹೆಚ್ಚಾಗಿ ಚಿನ್ನದ ಮೇಲೆ ಹೆಚ್ಚಿನ ಬೇಡಿಕೆ ಇರುತ್ತದೆ. ಜನರು ಹೆಚ್ಚು ಹೆಚ್ಚು ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಇನ್ನು ಭಾರತೀಯ ಕಾನೂನಿನಲ್ಲಿ ಚಿನ್ನ ಖರೀದಿಗೆ ಮಿತಿಯನ್ನು ನಿಗದಿಪಡಿಸಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರವು ಚಿನ್ನ ಖರೀದಿಯಲ್ಲಿ Hallmark ಅನ್ನು ಕೂಡ ಕಡ್ಡಾಯಗೊಳಿಸಿದೆ. ಸದ್ಯ ದೇಶದಲ್ಲಿ ಹಾಲ್ ಮಾರ್ಕ್ ಇಲ್ಲದ ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಇನ್ನು ಭಾರತೀಯ ಕಾನೂನಿನಲ್ಲಿ ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಲು ಕೂಡ ಮಿತಿಯನ್ನು ಅಳವಡಿಸಲಾಗಿದೆ. ಇದೀಗ ನಗದು ರೂಪದ ಚಿನ್ನ ಖರೀದಿಯ ಬಗ್ಗೆ ಮಾಹಿತಿ ತಿಳಿಯೋಣ.
ಚಿನ್ನ ಖರೀದಿಸುವವರಿಗೆ ಕೇಂದ್ರದಿಂದ ಹೊಸ ನಿಯಮ
ಜನರು ಹೆಚ್ಚಾಗಿ ನಗದು ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಎಷ್ಟು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಬಹುದು..? ಎನ್ನುವ ಬಗ್ಗೆ ಹೆಚ್ಚಿನ ಜನರಲ್ಲಿ ಪ್ರಶ್ನೆ ಮೂಡಿರಬಹುದು. ಇದೀಗ ನಾವು ನಗದು ರೂಪದಲ್ಲಿ ಚಿನ್ನ ಖರೀದಿಸಲು ಮಿತಿ (Gold Purchase Limit) ಇದೆಯೇ? ಇಲ್ಲವೇ? ಎಂದು ತಿಳಿಯೋಣ.
ಇದಕ್ಕಿಂತ ಹೆಚ್ಚು ಹಣಕೊಟ್ಟು ಚಿನ್ನ ಖರೀದಿಸುವಂತಿಲ್ಲ
ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಚಿನ್ನವನ್ನು ನಗದು ರೂಪದಲ್ಲಿ ಖರೀದಿ ಮಾಡಲು ಯಾವುದೇ ಮಿತಿ ವಿಧಿಸಿಲ್ಲ, ಆದರೆ ಯಾವುದೇ ಒಂದು ವಹಿವಾಟಿನಲ್ಲಿ ಸ್ವೀಕರಿಸುವವರು ರೂ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಬಾರದು ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಲು ನೀವು ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು, ಆದರೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಮಾರಾಟಗಾರರಿಂದ ಸ್ವೀಕರಿಸಲಾಗುವುದಿಲ್ಲ. ಚಿನ್ನಾಭರಣ ಮಾರಾಟಗಾರರು 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದ ಮೊತ್ತಕ್ಕೆ ದಂಡವನ್ನು ವಿಧಿಸಬಹುದು.
ಮಿತಿಗಿಂತ ಹೆಚ್ಚು ಚಿನ್ನ ಖರೀದಿಸಿದರೆ ಈ ಪುರಾವೆಯನ್ನು ನೀಡಬೇಕು
ನೀವು ಆಭರಣ ಖರೀದಿಸುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಮಾರಾಟಗಾರರಿಗೆ ನೀಡುವಂತಿಲ್ಲ. ಒಂದುವೇಳೆ 2 ಲಕ್ಷ ರೂ. ಗಿಂತ ಹೆಚ್ಚಿನ ನಗದು ನೀಡುವುದಾದರೆ ಗುರುತಿನ ಪುರಾವೆಗಳಾದ ಆಧಾರ್, ಪಾನ್ ಕಾರ್ಡ್, ಅನ್ನು ಮಾರಾಟಗಾರರಿಗೆ ನೀಡಬೇಕಾಗುತ್ತದೆ. ಆಭರಣ ಖರೀದಿಯು 2 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಅನ್ನು ನೀಡುವ ಅಗತ್ಯ ಇಲ್ಲ.