Gold Purchase Rules: ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿ ಮಾಡಬಹುದು…? ಕೇಂದ್ರದಿಂದ ಹೊಸ ರೂಲ್ಸ್.

ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿ ಮಾಡಬಹುದು...?

Gold Purchase Limit Buy Using Pan And Aadhaar: ಸದ್ಯ ಈ ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಿರುತ್ತದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಈ ನವೆಂಬರ್ ತಿಂಗಳಿನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣುತ್ತಿದೆ. ಹೀಗಾಗಿ ಜನರು ಹೆಚ್ಚಾಗಿ ಚಿನ್ನ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಇನ್ನು ಚಿನ್ನ ಖರೀದಿಗೆ ಕೂಡ ಸರ್ಕಾರ ವಿವಿಧ ನಿಯಮವನ್ನು ಪರಿಚಯಿಸಿದೆ. ಈ ಹಬ್ಬದ ಸಮಯದಲ್ಲಿ ನೀವು ಚಿನ್ನವನ್ನು ಖರೀದಿಸುವ ಮುನ್ನ ಚಿನ್ನ ಖರೀದಿಯ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

ಇನ್ನು ಚಿನ್ನ ಖಾರೀದಿಸಲು ಮತ್ತು ಮನೆಯಲ್ಲಿ ಇರಿಸಿಕೊಳ್ಳಲು ಅದರದ್ದೇ ಆದ ನಿಯಮಗಳಿವೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿದರೆ ತೆರಿಗೆ ಇಲಖೆಯಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಚಿನ್ನ ಖರೀದಿಸುವಾಗ ಪಾನ್ (Pan) ಮತ್ತು ಆಧಾರ್ ಕಾರ್ಡ್ (Aadhaar Card) ಮಾಹಿತಿ ಅಗತ್ಯವಾಗಿದೆ. ಇದೀಗ ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿ ಮಾಡಬಹುದು…?ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gold Purchase Limit
Image Credit: India TV News

ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿ ಮಾಡಬಹುದು…?
ಚಿನ್ನವನ್ನು ಖರೀದಿಸಲು ನೀವು ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು, ಆದರೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಮಾರಾಟಗಾರರಿಂದ ಸ್ವೀಕರಿಸಲಾಗುವುದಿಲ್ಲ. ಚಿನ್ನಾಭರಣ ಮಾರಾಟಗಾರರು 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದ ಮೊತ್ತಕ್ಕೆ ದಂಡವನ್ನು ವಿಧಿಸಬಹುದು.

ನೀವು ಆಭರಣ ಖರೀದಿಸುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಮಾರಾಟಗಾರರಿಗೆ ನೀಡುವಂತಿಲ್ಲ. ಒಂದುವೇಳೆ 2 ಲಕ್ಷ ರೂ. ಗಿಂತ ಹೆಚ್ಚಿನ ನಗದು ನಿಡುದಾದರೆ ಗುರುತಿನ ಪುರಾವೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅನ್ನು ಮಾರಾಟಗಾರರಿಗೆ ನೀಡಬೇಕಾಗುತ್ತದೆ. ಆಭರಣ ಖರೀದಿಯು 2 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅನ್ನು ನೀಡುವ ಅಗತ್ಯ ಇಲ್ಲ.

Gold Purchase Limit Buy Using Pan And AadhaarGold Purchase Limit Buy Using Pan And Aadhaar
Image Credit: Business Today

ಚಿನ್ನ ಖರೀದಿಸುವ ಮಿತಿ ಎಷ್ಟು..?
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನದ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ರೀತಿಯ ಮಿತಿಯನ್ನು ಸರ್ಕಾರ ವಿಧಿಸಿದೆ. ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ. ಇನ್ನು ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಸರ್ಕಾರ ಅನುಮತಿಸಿದೆ. ಇನ್ನು ಪುರುಷರು ತಮ್ಮ ಬಳಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಲು ಸರ್ಕಾರ ಅನುಮತಿಯನ್ನು ನೀಡಿದೆ.

Join Nadunudi News WhatsApp Group

ಚಿನ್ನ ಖರೀದಿಯ ಮೇಲಿನ ತೆರಿಗೆ
ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ನೀವು ಚಿನ್ನವನ್ನು ಖರೀದಿಸಿ ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.

Join Nadunudi News WhatsApp Group