Ads By Google

Gold Purchase Limit: ಇನ್ಮುಂದೆ ಪಾನ್ ಕಾರ್ಡ್ ಇಲ್ಲದೆ ಇಷ್ಟು ಚಿನ್ನವನ್ನ ಮಾತ್ರ ಖರೀದಿ ಮಾಡಬಹುದು, ತೆರಿಗೆ ಇಲಾಖೆಯ ಆದೇಶ

Gold Purchase Limit In Without PAN Card

Image Source: Mint

Ads By Google

Gold Purchase Limit In Without PAN Card: ಇತ್ತೀಚಿಗೆ ಕೇಂದ್ರ ಸರ್ಕಾರ ಚಿನ್ನದ ಖರೀದಿ ಮತ್ತು ಮಾರಾಟದಲ್ಲಿ Hallmark ಅನ್ನು ಕಡ್ಡಾಗೊಳಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಚಿನ್ನ ಖರೀದಿಸುವಾಗ ಹಾಲ್ಮಾರ್ಕ್ ಚಿನ್ನವನ್ನೇ ಖರೀದಿಸುವುದು ಕಡ್ಡಾಯ. ಇನ್ನು ಚಿನ್ನ ಖರೀದಿಸುವವರು ಚಿನ್ನದ ಪ್ರತಿ ನಿಯಮಗಳ ಬಗ್ಗೆ ತಿಳಿದಿರಬೇಕು.

ಚಿನ್ನ ಖರೀದಿಯ ಸಮಯದಲ್ಲಿ ನಗದು ಮಿತಿಯನ್ನು ಕೂಡ ಅಳವಡಿಸಲಾಗುತ್ತದೆ. ಚಿನ್ನವನ್ನು ಮಿತಿಗಿಂತ ಹೆಚ್ಚಿನ ನಗದು ರೂಪದಲ್ಲಿ ಖರೀದಿಸಿದರೆ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದರ ಬಗ್ಗೆ ನಿಮಗೆ ಅರಿವಿರಲಿ. ಸದ್ಯ ಕೇಂದ್ರ ಸರ್ಕಾರ ಪಾನ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನವನ್ನ ಖರೀದಿ ಮಾಡಬಹುದು ಎನ್ನುವುದಕ್ಕೆ ನಿಯಮವನ್ನು ಜಾರಿಗೊಳಿಸಿದೆ.

Image Credit: Tataaia

ಇನ್ಮುಂದೆ ಪಾನ್ ಕಾರ್ಡ್ ಇಲ್ಲದೆ ಇಷ್ಟು ಚಿನ್ನವನ್ನ ಮಾತ್ರ ಖರೀದಿ ಮಾಡಬಹುದು
ಚಿನ್ನವನ್ನು ಖರೀದಿಸಲು ನೀವು ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು, ಆದರೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಮಾರಾಟಗಾರರಿಂದ ಸ್ವೀಕರಿಸಲಾಗುವುದಿಲ್ಲ. ಚಿನ್ನಾಭರಣ ಮಾರಾಟಗಾರರು 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದ ಮೊತ್ತಕ್ಕೆ ದಂಡವನ್ನು ವಿಧಿಸಬಹುದು.

ನೀವು ಆಭರಣ ಖರೀದಿಸುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಮಾರಾಟಗಾರರಿಗೆ ನೀಡುವಂತಿಲ್ಲ. ಒಂದುವೇಳೆ 2 ಲಕ್ಷ ರೂ. ಗಿಂತ ಹೆಚ್ಚಿನ ನಗದು ನಿಡುದಾದರೆ ಗುರುತಿನ ಪುರಾವೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅನ್ನು ಮಾರಾಟಗಾರರಿಗೆ ನೀಡಬೇಕಾಗುತ್ತದೆ. ಆಭರಣ ಖರೀದಿಯು 2 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅನ್ನು ನೀಡುವ ಅಗತ್ಯ ಇಲ್ಲ.

Image Credit: Sewardjohnsonatelier

ಚಿನ್ನ ಖರೀದಿಯ ಮೇಲಿನ ತೆರಿಗೆ
ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ನೀವು ಚಿನ್ನವನ್ನು ಖರೀದಿಸಿ ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನದ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ರೀತಿಯ ಮಿತಿಯನ್ನು ಸರ್ಕಾರ ವಿಧಿಸಿದೆ.

ಚಿನ್ನ ಖರೀದಿಸುವ ಮಿತಿ ಎಷ್ಟು..?
•ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ.

•ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಸರ್ಕಾರ ಅನುಮತಿಸಿದೆ.

•ಪುರುಷರು ತಮ್ಮ ಬಳಿ 100 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಲು ಸರ್ಕಾರ ಅನುಮತಿಯನ್ನು ನೀಡಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in