ಚಿನ್ನ ಪ್ರಿಯರಿಗೆ ಬಂದಿದೆ ವಿಜಯದಶಮಿ ಗಿಫ್ಟ್, ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6000 ಇಳಿಕೆ, ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ.
ದೇಶದಲ್ಲಿ ಎರಡು ದಿನಗಳಿಂದ ಬಹಳ ಸುದ್ದಿಯಲ್ಲಿ ಇರುವ ವಿಷಯಗಳು ಏನು ಅಂದರೆ ಅದು ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕೋಟಿಗೊಬ್ಬ 3 ಮತ್ತು ಸಲಗ ಚಿತ್ರ ಮತ್ತು ಇಂದು ಭರ್ಜರಿಯಾಗಿ ಇಳಿಕೆಯನ್ನ ಕಂಡ ಚಿನ್ನದ ಬೆಲೆಯ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹಬ್ಬ ಕಳೆದ ಮರುದಿನವೇ ದಿಣ್ಣದ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಆಗಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಒಂದೇ ದಿನದಲ್ಲಿ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಕಂಡಿದ್ದು ಜನರು ಚಿನ್ನದ ಅಂಗಡಿಗಳ ಬಳಿ ಹೆಚ್ಚು ಹೆಚ್ಚು ಹೋಗುತ್ತಿದ್ದಾರೆ ಎಂದು ಹೇಳಬಹುದು. ತಿಂಗಳ ಆರಂಭದಿಂದಲೂ ಕೂಡ ಭರ್ಜರಿಯಾಗಿ ಏರಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿದಿದ್ದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು.
ಹಾಗಾದರೆ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಇಳಿಕೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 60 ರೂಪಾಯಿ ಇಳಿಕೆ ಆಗಿದ್ದು ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 4420 ರೂಪಾಯಿ ಆಗಿದೆ. ನಿನ್ನೆ 4480 ರೂಪಾಯಿ ಇದ್ದ ಚಿನ್ನದ ಬೆಲೆಯಲ್ಲಿ ಇಂದು 60 ರೂಪಾಯಿ ಇಳಿಕೆ ಆಗಿದ್ದು ಇಂದು 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4420 ರೂಪಾಯಿ ಆಗಿದೆ ಎಂದು ಹೇಳಬಹುದು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಡೀರ್ ಆಗಿ ಚಿನ್ನದ ಬೆಲೆ ಇಳಿಕೆ ಆದಕಾರಣ ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ ಎಂದು ಹೇಳಬಹುದು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 6000 ರೂಪಾಯಿ ಇಳಿಕೆ ಆಗಿದ್ದು ಇಂದು ಚಿನ್ನವನ್ನ ಖರೀದಿ ಮಾಡುವವರಿಗೆ ಇದು ಖುಷಿಯ ವಿಚಾರವಾಗಿದೆ ಎಂದು ಹೇಳಬಹುದು. ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44200 ರೂಪಾಯಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದ್ದು ಈ ಸಮಯ ಚಿನ್ನವನ್ನ ಖರೀದಿ ಮಾಡಲು ಉತ್ತಮ ಸಮಯ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತದೆ ಎಂದು ಕಾದು ಕುಳಿತ್ತಿದ್ದ ಜನರಿಗೆ ಇಂದು ಸಿಹಿಸುದ್ದಿ ಬಂದಿದೆ ಎಂದು ಹೇಳಬಹುದು. ಇಂದು ಹತ್ತು ಗ್ರಾಂ ಚಿನ್ನದಾ ಬೆಲೆಯಲ್ಲಿ ಸುಮಾರು 600 ರೂಪಾಯಿ ಇಳಿಕೆ ಆಗಿದ್ದು ನಾಳೆ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ತಜ್ಞರಿಗೆ ಚಿನ್ನದ ಬೆಲೆಯನ್ನ ಅಂದಾಜು ಮಾಡಲು ಸದ್ಯಾಗುತ್ತಿಲ್ಲ. ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಈ ಏರುಪೇರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.