Gold Live: ಒಂದೇ 350 ರೂ ಏರಿಕೆಯಾದ ಚಿನ್ನದ ಬೆಲೆ, 6000 ರೂ ಗಡಿಯತ್ತ ಚಿನ್ನದ ಬೆಲೆ ಬೇಸರದಲ್ಲಿ ಜನರು.
ಇಂದು ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ, ಕಂಗಾಲಾದ ಆಭರಣ ಪ್ರಿಯರು.
Gold Price Hike July 2023: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿದ್ದಂತೆ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನಾ ದುಬಾರಿಯಾಗುತ್ತಿದೆ. ಪ್ರತಿ ನಿತ್ಯ ಚಿನ್ನದ ಬೆಲೆಯಲ್ಲಿ (gold Price) ಸತತ ಏರಿಕೆ ಕಾಣುತ್ತಿರುವ ಕಾರಣ ಆಭರಣ ಪ್ರಿಯರು ಕಂಗಾಲಾಗಿದ್ದಾರೆ. ದಿನ ಕಳೆಯುತ್ತಿದ್ದಂತೆ ಚಿನ್ನದ ಬೆಲೆ 300 ರಿಂದ 400 ರೂ. ಏರಿಕೆಯಾಗುತ್ತಿದೆ.
ಚಿನ್ನದ ಖರೀದಿ ಗ್ರಾಹಕರಿಗೆ ಇನ್ನೂ ಕಷ್ಟ
ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿತ್ತು. ಇಂದು ಮತ್ತೆ ಹತ್ತು ಗ್ರಾಂ ಚಿನ್ನದಲ್ಲಿ 350 ರೂ. ಏರಿಕೆ ಆಗುವ ಮೂಲಕ ಆಭರಣ ಪ್ರಿಯರನ್ನು ನಿರಾಶೆಗೊಳಿಸಿದೆ. ಜುಲೈ ತಿಂಗಳ ಪ್ರಾರಂಭದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ತಿಂಗಳಿನಲ್ಲಿ ಒಂದೆರಡು ಬಾರಿ ಮಾತ್ರ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಇನ್ನು ಮತ್ತೆ ಚಿನ್ನ ಬೆಲೆಯಲ್ಲಿ ಏರಿಕೆಯಾಗಿದ್ದು ಚಿನ್ನದ ಖರೀದಿ ಗ್ರಾಹಕರಿಗೆ ಇನ್ನಷ್ಟು ಕಷ್ಟವಾಗುತ್ತಿದೆ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,465 ಆಗಿದ್ದು, ಇಂದು 5500 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 35 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 280 ಏರಿಕೆಯಾಗಿದೆ.
ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 55000 ರೂ. ಆಗಿದೆ. ನಿನ್ನೆ ಹತ್ತು ಚಿನ್ನ 54,650 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,720 ಇದ್ದು, ಇಂದು 44000 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 35000 ರೂ. ಏರಿಕೆಯಾಗಿದೆ. ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,50,000 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (24 Carat Gold Rate)
ನಿನ್ನೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,962 ರೂ. ಇದ್ದು ಇಂದು 6000 ರೂ. ತಲುಪಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,620 ಇದ್ದು, ಇಂದು 60000 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,696 ಇದ್ದು, ಇಂದು 48000 ರೂ. ಆಗಿದೆ.
ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 304 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3800 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 600000 ರೂ. ಗಡಿ ತಲುಪಿದೆ.