Gold Limits: ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ, ಕೇಂದ್ರದ ಹೊಸ ನಿಯಮ.

ಇದೀಗ ಚಿನ್ನ ಸಂಗ್ರಹಣೆಯ ಮಿತಿಯಲ್ಲಿ ಸರ್ಕಾರ ಹೊಸ ನಿಯಮವನ್ನು ತಂದಿದೆ.

Gold Storage Limit At Home: ಸಾಮಾನ್ಯವಾಗಿ ಭಾರತೀಯರ ಮನೆಯಲ್ಲಿ ಸ್ವಲ್ಪವಾದರೂ ಚಿನ್ನ(Gold) ಇದ್ದೆ ಇರುತ್ತದೆ. ಚಿನ್ನ ಖರೀದಿಯು ಒಂದು ರೀತಿಯ ಹೂಡಿಕೆ ಎಂದರೆ ತಪ್ಪಾಗಲಾರದು. ಹೀಗಾಗಿ ಜನರು ತಮ್ಮ ಉಲಿತ್ಯದ ಹಣವನ್ನು ಚಿನ್ನದ ಖರೀದಿಗೆ ವ್ಯಯಿಸಲು ಬಯಸುತ್ತಾರೆ. ಇನ್ನು ಚಿನ್ನವನ್ನು ಎಲ್ಲರೂ ಇಷ್ಟಪಡುತ್ತಾರೆ ಅದರಲ್ಲೂ ಚಿನ್ನದ ಮೇಲೆ ಮಹಿಳೆಯರು ಹೆಚ್ಚಿನ ಒಲವನ್ನು ತೋರಿಸುತ್ತಾರೆ.

ಇದೀಗ ಚಿನ್ನ ಸಂಗ್ರಹಣೆಯ ಮಿತಿಯಲ್ಲಿ ಸರ್ಕಾರ ಹೊಸ ನಿಯಮವನ್ನು ತಂದಿದೆ. ನಿಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಇದೀಗ ಹಳದಿ ಲೋಹದ ಸಂಗ್ರಹಣೆಯ ಕುರಿತು ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ.

gold storage limit at home
Image Credit: Informalnewz

ಚಿನ್ನ ಖರೀದಿಯಲ್ಲಿ ಹಾಲ್ ಮಾರ್ಕ್ ಕಡ್ಡಾಯ
ಇನ್ನು ಭಾರತೀಯ ಕಾನೂನಿನಲ್ಲಿ ಚಿನ್ನ ಮಾರಾಟ ಹಾಗು ಖರೀದಿಗೆ ಅನೇಕ ನಿಯಮಗಳಿವೆ. ಇತ್ತೀಚೆಗಷ್ಟೇ ಸರ್ಕಾರ ಚಿನ್ನ ಖರೀದಿಯಲ್ಲಿ Hallmark ಅನ್ನು ಕಡ್ಡಾಯಗೊಳಿಸಿದೆ. ಕಾನೂನಿನ ನಿಯಮದಲ್ಲಿ ಚಿನ್ನ ಖರೀದಿಯಲ್ಲಿ ಮಿತಿಯನ್ನು ಅಳವಡಿಸಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನದ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ರೀತಿಯ ಮಿತಿಯನ್ನು ಸರ್ಕಾರ ವಿಧಿಸಿದೆ. ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ. ಇನ್ನು ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಸರ್ಕಾರ ಅನುಮತಿಸಿದೆ. ಇನ್ನು ಪುರುಷರು ತಮ್ಮ ಬಳಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಲು ಸರ್ಕಾರ ಅನುಮತಿಯನ್ನು ನೀಡಿದೆ.

Gold limit latest update
Image Credit: Punjabijagran

ಆದಾಯ ಇಲಾಖೆಯ ಪ್ರಕಾರ ಚಿನ್ನಗಳಿಗೆ ಎಷ್ಟು ತೆರಿಗೆ ಪಾವತಿಸಬೇಕು
ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ನೀವು ಚಿನ್ನವನ್ನು ಖರೀದಿಸಿ ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group