Gold Limits: ಮದುವೆಯಾಗದ ಮಹಿಳೆಯರು ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ, ಕೇಂದ್ರದ ಆದೇಶ.

ಕೇಂದ್ರ ಸರ್ಕಾರ ಮನೆಯಲ್ಲಿ ಇರಿಸುವ ಆಭರಣಗಳ ಮೇಲೆ ಮಿತಿಯನ್ನ ವಿಧಿಸಿದೆ.

Gold Storage Limit For Unmarried Women: ಸಾಮಾನ್ಯವಾಗಿ ಭಾರತೀಯರ ಮನೆಯಲ್ಲಿ ಸ್ವಲ್ಪವಾದರೂ ಚಿನ್ನ(Gold) ಇದ್ದೆ ಇರುತ್ತದೆ. ಕಷ್ಟದ ಸಮಯದಲ್ಲಿ, ಚಿನ್ನವು ಆರ್ಥಿಕ ಬೆಂಬಲವಾಗಿ ನೆರವಾಗುತ್ತದೆ.  ಆದ್ದರಿಂದ ಇದನ್ನು ಆಭರಣಗಳ ಜೊತೆಗೆ ಹೂಡಿಕೆಯ ಆಯ್ಕೆಯಾಗಿ ನೋಡಲಾಗುತ್ತದೆ.

ಹೀಗಾಗಿ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಖರೀದಿಗೆ ಖರ್ಚು ಮಾಡುತ್ತಾರೆ. ಇನ್ನು ಚಿನ್ನವನ್ನು ಎಲ್ಲರೂ ಇಷ್ಟಪಡುತ್ತಾರೆ ಅದರಲ್ಲೂ ಚಿನ್ನದ ಮೇಲೆ ಮಹಿಳೆಯರು ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಇದೀಗ ಕೇಂದ್ರ ಸರ್ಕಾರ ಮನೆಯಲ್ಲಿ ಇರಿಸುವ ಆಭರಣಗಳ ಮೇಲೆ ಮಿತಿಯನ್ನ ವಿಧಿಸಿದೆ.

Gold storage Limit
Image Credit: Khaleejtimes

ಮದುವೆಯಾಗದ ಮಹಿಳೆಯರು ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
ಭಾರತೀಯ ಕಾನೂನಿನಲ್ಲಿ ಚಿನ್ನ ಮಾರಾಟ ಹಾಗು ಖರೀದಿಗೆ ಅನೇಕ ನಿಯಮಗಳಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ಮಿತಿಯನ್ನ ಸರ್ಕಾರ ಜಾರಿಗೊಳಿಸಿದೆ. ಹಾಗೆ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನ ಸಂಗ್ರಹಣೆಯಲ್ಲಿ ಬೇರೆ ಬೇರೆ ಮಿತಿಯನ್ನ ಇರಿಸಲಾಗಿದೆ.

*ವಿವಾಹಿತ ಮಹಿಳೆ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು,
*ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು.
*ಒಬ್ಬ ವ್ಯಕ್ತಿ 100 ಗ್ರಾಂ ಚಿನ್ನವನ್ನು ಮಾತ್ರ ತನ್ನ ಬಳಿ ಇಟ್ಟುಕೊಳ್ಳಬಹುದು.

ಪರಿಶೀಲನೆ ವೇಳೆ ಅಧಿಕಾರಿಗಳು ಚಿನ್ನವನ್ನ ವಶಪಡಿಸಿಕೊಳ್ಳಬಹುದೇ..?
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ, ಯಾವುದೇ ಪುರಾವೆಗಳನ್ನು ತೋರಿಸದೆ ಚಿನ್ನದ ಆಭರಣಗಳನ್ನು ಇಡಲು ಮಿತಿ ಇದೆ. ಸರ್ಕಾರ ನಿಗದಿಪಡಿಸಿದ ಮಿತಿಯಲ್ಲಿ ಚಿನ್ನ ಇಟ್ಟುಕೊಂಡಿದ್ದರೆ ದಾಳಿಯ ಸಮಯದಲ್ಲಿ ಅಧಿಕಾರಿಗಳು ಮನೆಯಿಂದ ಚಿನ್ನಾಭರಣ ಅಥವಾ ಆಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನಿಯಮಗಳು ಹೇಳುತ್ತದೆ.

Join Nadunudi News WhatsApp Group

Gold storage Limit For Unmarried Women
Image Credit: Paytm

ಚಿನ್ನ ಇಟ್ಟುಕೊಳ್ಳುದಕ್ಕೆ ತೆರಿಗೆ ವಿಧಿಸಬೇಕಾಗುತ್ತದೆಯೇ..?
ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರಿಂದ ಪಡೆದ ಚಿನ್ನಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಚಿನ್ನದ ಮಾರಾಟದಿಂದ ಬರುವ ಆದಾಯವು ತೆರಿಗೆಗೆ ಒಳಪಟ್ಟಿರುತ್ತದೆ. ಮೂರು ವರ್ಷಗಳಿಗಿಂತ ಕಡಿಮೆ ಕಾಲ ಚಿನ್ನವನ್ನು ಇಟ್ಟುಕೊಂಡರೆ STCG ಅನ್ವಯಿಸುತ್ತದೆ, ಆದರೆ ನೀವು ಅದನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡು ನಂತರ ಅದನ್ನು ಮಾರಾಟ ಮಾಡಲು ಬಯಸಿದರೆ LTCG ಅನ್ವಯಿಸುತ್ತದೆ.

Join Nadunudi News WhatsApp Group