Loan Updates: ಬ್ಯಾಂಕ್ ಸಾಲ ಮಾಡುತ್ತೀರಾ…? ಎಚ್ಚರ… ಈ ರೀತಿ ಸಾಲ ಮಾಡಿದರೆ ಮನೆ ಮಾರಿಕೊಳ್ಳಬೇಕಾಗುತ್ತದೆ.

ಈ ರೀತಿ ಸಾಲ ಅಪಾಯಕಾರಿಯಾಗಿದೆ...?

Good Loan v/s Bad Loan: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಎದುರಾದಾಗ ಪ್ರತಿಯೊಬ್ಬರೂ ಕೂಡ ಸಾಲದ ಮೊರೆ ಹೋಗುತ್ತಾರೆ. ದೇಶದ ಎಲ್ಲ ಜನಪ್ರಿಯ ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ನೀಡುತ್ತದೆ. ಇನ್ನು ಬ್ಯಾಂಕ್ ನಿಂದ ಸಾಲ ಪಡೆದ ಮಾತ್ರಕ್ಕೆ ಎಲ್ಲ ಸಮಸ್ಯೆಗಳು ತಿರುತ್ತದೆ ಎಂದಲ್ಲ. ಸಾಲ ಪಡೆದ ಮೇಲು ಸಮಸ್ಯೆ ದುಪ್ಪಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಾರಣ ಕೆಲವೊಮ್ಮೆ ತೆಗೆದುಕೊಂಡ ಸಾಲದ ಹೊರೆಯೇ ಹೆಚ್ಚಾಗಿ ಬಿಡುತ್ತದೆ. ಸಾಲವನ್ನು ತೆಗೆದುಕೊಳ್ಳುವಾಗ ಅದಕ್ಕೆ ಬಡ್ಡಿ ಅನ್ವಯವಾಗುವುದರಿಂದ ಸಾಲ ಪಡೆಯುವ ಪ್ರತಿಯೊಬ್ಬರು ಕೂಡ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ನಾವೀಗ ಈ ಲೇಖನದಲ್ಲಿ ಸಾಲ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಸಾಲವನ್ನು ಪಡೆಯುವ ಯೋಜನೆಯಲ್ಲಿದ್ದರೆ ಈ ಲೇಖನದಲ್ಲಿನ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Good Loan vs Bad Loan
Image Credit: Poonawallafincorp

ಬ್ಯಾಂಕ್ ಸಾಲ ಮಾಡುತ್ತೀರಾ…? ಎಚ್ಚರ… ಈ ರೀತಿ ಸಾಲ ಮಾಡಿದರೆ ಮನೆ ಮಾರಿಕೊಳ್ಳಬೇಕಾಗುತ್ತದೆ
ಹೌದು, ಸಾಲವನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ಕೆಲವೊಮ್ಮೆ ಸಾಲ ತೆಗೆದುಕೊಳ್ಳುವಾಗ ಮಾಡುವ ಕೆಲವು ತಪ್ಪುಗಳಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ತಪ್ಪಿಸಲು ನಾವು ಉತ್ತಮ ಸಾಲಗಳು ಮತ್ತು ಕೆಟ್ಟ ಸಾಲಗಳ ಬಗ್ಗೆ ತಿಳಿದಿರುವುದು ಮುಖ್ಯ.

•ಉತ್ತಮ ಸಾಲ ಯಾವುದು ಗೊತ್ತಾ..?
ಉತ್ತಮ ಸಾಲವು ಸಾಲಗಾರನ ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಸಾಲವಾಗಿದೆ. ಅಂತಹ ಸಾಲದಲ್ಲಿ, ಸಾಲದ ಮೇಲಿನ ಬಡ್ಡಿಗಿಂತ ವ್ಯಕ್ತಿಗೆ ಲಾಭವು ಹೆಚ್ಚು. ಅಂತಹ ಸಾಲಗಳು ವ್ಯಕ್ತಿಯ ಪ್ರಗತಿಗೆ ಸಹಾಯ ಮಾಡುತ್ತವೆ. ಭವಿಷ್ಯದಲ್ಲಿ ಉತ್ತಮ ಹೂಡಿಕೆ ಎಂದು ಸಾಬೀತುಪಡಿಸುತ್ತದೆ. ಹಣಕಾಸು ತಜ್ಞರ ಪ್ರಕಾರ, ಗೃಹ ಸಾಲ, ಶಿಕ್ಷಣ ಸಾಲ, ವ್ಯಾಪಾರ ಸಾಲಗಳನ್ನು ಉತ್ತಮ ಸಾಲಗಳ ವರ್ಗದಲ್ಲಿ ಸೇರಿಸಲಾಗಿದೆ.

•ಈ ರೀತಿಯ ಸಾಲ ಅಪಾಯಕಾರಿಯಾಗಿದೆ
ಕೆಟ್ಟ ಅಥವಾ ಅಪಾಯಕಾರಿ ಸಾಲವು ನಮ್ಮ ಅಗತ್ಯಗಳನ್ನು ಪೂರೈಸಲು ಯಾವುದೇ ಭವಿಷ್ಯದ ಆಲೋಚನೆಯಿಲ್ಲದೆ ಇರುವ ಸಾಲವಾಗಿದೆ. ಅಂತಹ ಸಾಲಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ. ಅಷ್ಟೇ ಅಲ್ಲ, ಸಾಲ ಮತ್ತು ಅದಕ್ಕೆ ವಿಧಿಸುವ ಬಡ್ಡಿ ಸಾಲಗಾರನನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ವೈಯಕ್ತಿಕ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಸಾಲದಂತಹ ಸಾಲಗಳು ಅಪಾಯಕಾರಿ/ಕೆಟ್ಟ ಸಾಲದ ವರ್ಗದ ಅಡಿಯಲ್ಲಿ ಬರುವ ಸಾಲಗಳಾಗಿವೆ.

Join Nadunudi News WhatsApp Group

Loan Latest Updates
Image Credit: Resurgentindia

Join Nadunudi News WhatsApp Group