Tirupati Ticket Offer: ತಿರುಪತಿಗೆ ಹೋಗುವ ಎಲ್ಲಾ ಮಹಿಳೆಯರಿಗೂ ಪುರುಷರಿಗೂ ಸಿಹಿಸುದ್ದಿ, ಟಿಕೆಟ್ ಬೆಲೆ 1 ರೂ ಮಾತ್ರ

ತಿರುಪತಿಗೆ ಪ್ರಯಾಣ ಮಾಡಲು ಯೋಚಿಸುತ್ತಿದ್ದರೆ ಲಭ್ಯವಿರುವ ಈ ಪ್ಲಾನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Bengaluru To Tirupati Ticket Offer: ಆಗಸ್ಟ್ 15 ರಂದು 76 ನೇ ಸ್ವಾತಂತ್ರ ದಿನಾಚರಣೆ (Independence Day) ಇಡೀ ದೇಶದಾದ್ಯಂತ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಈಗಾಗಲೇ ಸಾಕಷ್ಟು ರಿಯಾಯಿತಿಗಳು ಕೂಡ ಘೋಷಣೆ ಆಗಿವೆ. ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳು ವಿವಿಧ ವಸ್ತುಗಳ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ನೀಡಿವೆ. ಇದೀಗಾ ತಿರುಪತಿಗೆ ಪ್ರಯಾಣ ಬೆಳಸುವವರಿಗೂ ಕೂಡ ಸ್ವಾತಂತ್ರ ದಿನಾಚರಣೆಯ ಕೊಡುಗೆ ಸಿಗಲಿದೆ.

ವಿಶೇಷ ರಿಯಾಯಿತಿಯ ದರದಲ್ಲಿ ಪ್ರಯಾಣಿಕರು ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ನೀವು ತಿರುಪತಿಗೆ ಪ್ರಯಾಣ ಮಾಡಲು ಯೋಚಿಸುತ್ತಿದ್ದರೆ ಲಭ್ಯವಿರುವ ಈ ಪ್ಲಾನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ತಿರುಪತಿ ಪ್ರಯಾಣಿಕರಿಗಾಗಿ ಗ್ರೀನ್ ಸೆಲ್ ಮೊಬಿಲಿಟಿಯ ಇಂಟೆರ್ ಸಿಟಿ ಎಶಿ ಕೋಚ್ ಬಸ್ ಸೇವೆ ನ್ಯೂಗೋ ಹೊಸ ಅಭಿಯಾನವನ್ನು ಪ್ರಾರಂಭಿಸುವ ಬಗ್ಗೆ ಘೋಷಣೆ ಹೊರಡಿಸಿದೆ. ತಿರುಪತಿಗೆ ಪ್ರಯಾಣಿಸುವವರು ಈ ಆಫರ್ ಅನ್ನು ಸದುಪಯೋಗಪಡಿಸಿಕೊಳ್ಳಬಹುದು.

Bengaluru To Tirupati Ticket Offer
Image Source: Mint

ತಿರುಪತಿಗೆ ಕೇವಲ 1 ರೂ. ನಲ್ಲಿ ಪ್ರಯಾಣಿಸಬಹುದು
ಆಗಸ್ಟ್ 10 ರಿಂದ ಆಗಸ್ಟ್ 15 ರವರೆಗೆ ತಿರುಪತಿಗೆ ಪ್ರಯಾಣ ಮಾಡುವವರು ಕೇವಲ 1 ರೂ. ಗೆ ರಿಯಾಯಿತಿ ನೀಡಿರುವ ಮಾರ್ಗಳಿಗೆ ಟಿಕೆಟ್ ಗಳನ್ನೂ ಬುಕ್ ಮಾಡಬಹುದು ಎಂದು ನ್ಯೂಗೋ ಹೇಳಿದೆ. ಆಗಸ್ಟ್ 15 ರವರೆಗೆ ಲಭ್ಯವಿರುವ ಎಲ್ಲಾ ಸೀಟುಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು. ಇಂದೋರ್- ಭೋಪಾಲ್, ದೆಹಲಿ- ಚಂಡೀಗಢ, ದೆಹಲಿ- ಆಗ್ರಾ, ದೆಹಲಿ ಡೆಹ್ರಾಡೂನ್, ದೆಹಲಿ- ಜೈಪುರ, ಆಗ್ರಾ- ಜೈಪುರ್, ಬೆಂಗಳೂರು- ತಿರುಪತಿ, ಚೆನ್ನೈ- ತಿರುಪತಿ, ಚೆನ್ನೈ- ಪಾಂಡಿಚೇರಿ, ಹೈದರಾಬಾದ್- ವಿಜಯವಾಡ ಮಾರ್ಗಗಳಿಗೆ ಈ ರಿಯಾಯಿತಿಯನ್ನು ಪಡೆಯಬಹುದು.

1 ರೂ. ಗೆ ಟಿಕೆಟ್ ಬುಕ್ ಮಾಡುವ ವಿಧಾನ
*NueGo ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ 1 ರೂ. ಗೆ ಟಿಕೆಟ್ ಬುಕ್ ಮಾಡಬಹುದು.
*ಮೊದಲು Greencellmobility.com ವೆಬ್ ಸೈಟ್ ಗೆ ಭೇಟಿ ನೀಡಬೇಕು.
*ಈ ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ ಅಲ್ಲಿ ನ್ಯೂಗೋ ಇಂಟೆರ್ ಸಿಟಿ ಆಯ್ಕೆಯನ್ನು ಆರಿಸಿ.
*ನಂತರ ಅಲ್ಲಿ ನಿಮ್ಮ ಹೊರಡುವ ಮತ್ತು ಇಳಿಯುವ ವಿವರವನ್ನು ನಮೂದಿಸಿ.
*ಯಾವ ದಿನಾಂಕ ಮತ್ತು ಎಷ್ಟು ಸದಸ್ಯರು ಪ್ರಯಾಣ ಮಾಡುತ್ತೀರಿ ಎನ್ನುವುದನ್ನು ನಮೂದಿಸಬೇಕು.
*ಇನ್ನು ಆಗಸ್ಟ್ 10 ರಿಂದ 15 ರವರೆಗೆ ಮಾತ್ರ ಈ #Bus1RupeeMein ಆಫರ್ ಅನ್ನು ಬಳಸಿಕೊಳ್ಳಬಹುದು.

Bengaluru To Tirupati Ticket Offer
Image Source: Mint

Join Nadunudi News WhatsApp Group

Join Nadunudi News WhatsApp Group