Central Government: ಇಂತಹ ಮಹಿಳೆಯರಿಗೆ ಹೆಚ್ಚುವರಿಯಾಗಿ ಸಿಗಲಿದೆ 500 ರೂ ಹಣ, ಮಹಿಳೆಯರಿಗೆ ಇನ್ನೊಂದು ಭಾಗ್ಯ

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಅಧಿಕವಾಗಿ ಸಿಗಲಿದೆ 500 ರೂಪಾಯಿ.

Central Government New Update: ಕರ್ನಾಟಕದಲ್ಲಿ ಸದ್ಯ ಹೊಸ ಕಾಂಗ್ರೆಸ್ ಸರ್ಕಾರ ಅನೇಕ ಗ್ಯಾರಂಟಿಗಳನ್ನು ಈಡೇರಿಸುತ್ತಲೇ ಬಂದಿದೆ. ರಾಜ್ಯದಲ್ಲಿ ಪ್ರಮುಖವಾಗಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ  4 ಗ್ಯಾರಂಟಿಗಳನ್ನು ಈಡೇರಿಸಿದೆ ಹಾಗೆಯೆ ಇನ್ನೊಂದು ಗ್ಯಾರಂಟಿಗೆ ಸ್ವಲ್ಪ ಸಮಯಾವಕಾಶ ಕಾಯ್ದುಕೊಂಡಿದೆ.

ಇದರ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಕೂಡ ಬಗೆ ಹರಿಸುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು ಆದರೆ ಅದರ ಬಗ್ಗೆ ಯಾವುದುಈ ಅಧಿಕ್ರತ ನಿರ್ಧಾರ ಪ್ರಕಟ ಮಾಡಿರಲಿಲ್ಲ.

Central government gave good news to Anganwadi workers
Image Credit: Csrbox

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಸದ್ಯ ಇದೀಗ ಅಂಗನವಾಡಿ ಕಾರ್ಯಕರ್ತೆ (Anganwadi Worker)ಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಹೌದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮ್ರತಿ ಇರಾನಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ ಹೆಚ್ಚಿನ ಪ್ರೋತ್ಸಹ ಧನ ನೀಡುವುದಾಗಿ ಪ್ರಕಟಿಸಿದ್ದಾರೆ. ಒಟ್ಟಾರೆಯಾಗಿ ಈ ನಿರ್ಧಾರ ಮಹಿಳೆಯರಲ್ಲಿ ಸಂತಸ ಹೊರಹಾಕಿದೆ.

ರಾಜ್ಯ ಸರ್ಕಾರ ತಮ್ಮನ್ನು ಬೆಂಬಲಿಸುವ ಮೊದಲೇ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದ್ದೂ ಮಹಿಳೆಯರಲ್ಲಿ ಹೊಸ ಸಂಭ್ರಮಕ್ಕೆ ಕಾರಣವಾಗಿದೆ. ಈಗಾಗಲೇ ಹಲವಾರು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಕೂಡ ಸಾಗುತ್ತಿದೆ ಎಂದು ಸ್ಮ್ರತಿ ಇರಾನಿ ತಿಳಿಸಿದ್ದಾರೆ. ಇದರ ನಡುವೆ 11 ಲಕ್ಷ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿರುವ ಬಗ್ಗೆ ಕೂಡ ಉಲ್ಲೇಖ ಮಾಡಿದ್ದಾರೆ.

Join Nadunudi News WhatsApp Group

Central Government New Update
Image Credit: Vidhilegalpolicy

ಒಟ್ಟಾರೆಯಾಗಿ ಕೊರೋನಾ ಹಾಗು ಇನ್ನಿತರ ಸಮಯಗಳಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಸರ್ಕಾರ ಗುರುತಿಸಿ ಪ್ರೋತ್ಸಾಹ ನೀಡಿರುವುದು ಎಲ್ಲರಿಗು ಸಂತಸ ನೀಡಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಇಂತಹುದೇ ಉತ್ತಮ ನಿರ್ಧಾರಗಳನ್ನು ಮಾಡುವ ಮೂಲಕ ಮತ್ತೆ ಅಂಗನವಾಡಿ ಕಾರ್ಯಕರ್ತೆಯರ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವುದು ಹಲವು ಮಹಿಳೆಯರ ಆಕಾಂಕ್ಷೆಯಾಗಿದೆ.

Join Nadunudi News WhatsApp Group