Govt Employees: ಹಬ್ಬದ ಸಮಯದಲ್ಲೇ ಸರ್ಕಾರಿ ಸಂಬಳ ಪಡೆಯುವ ನೌಕರರಿಗೆ ಸಿಹಿಸುದ್ದಿ

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದು, ನೌಕರರ ತುಟ್ಟಿ ಹೆಚ್ಚಿಸುವುದಾಗಿ ಮಾಹಿತಿ ನೀಡಿದೆ.

Govt Employees Salary Hike: ಸರಕಾರಿ ಉದ್ಯೋಗ ಗಳಿಸಬೇಕೆಂಬ ಕನಸು ಹೆಚ್ಚಿನವರದ್ದು ಆಗಿರುತ್ತದೆ.‌ ಅದರೆ ಸುಲಭದಲ್ಲಿ ಸರಕಾರಿ ಉದ್ಯೋಗ ಪಡೆದು ಕೊಳ್ಳಲು ಸಹ ಸಾಧ್ಯ ‌ವಿಲ್ಲ. ಇಂದು ಸರಕಾರಿ ನೌಕರಿಗಾಗಿ ಸರಕಾರ ಹಲವು ರೀತಿಯ ನಿಯಮಗಳಲ್ಲಿ ಬದಲಾವಣೆ ಮಾಡ್ತಾ ಇದೆ. ಇದೀಗ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದು, ನೌಕರರ ತುಟ್ಟಿ ಹೆಚ್ಚಿಸುವುದಾಗಿ ಮಾಹಿತಿ ನೀಡಿದೆ. ಈ ಸುದ್ದಿಗಾಗಿ ಕೆಲವು ದಿನಗಳಿಂದ ಸರ್ಕಾರಿ ನೌಕರರು ಕಾದು ಕುಳಿತ್ತಿದ್ದರು. ಹಬ್ಬದ ಸಂದರ್ಭದಲ್ಲಿ ಇದು ಅವರಿಗೆ‌ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.

Govt Employees DA Hike
Image Source: News18

ಎಷ್ಟು ಏರಿಕೆ ಆಗಲಿದೆ

ಇದೇ ತಿಂಗಳು ಸರಕಾರಿ ನೌಕರರ ವೇತನದಲ್ಲಿ ಏರಿಕೆ ಆಗಲಿದ್ದು ಇದು ಖುಷಿಯ ವಿಚಾರ ಆಗಿದೆ. 7 ನೇ ವೇತನ ಆಯೋಗದ ಪ್ರಕಾರ 4% ರಷ್ಟು ಡಿಎ ಹೆಚ್ಚಳವಾಗಲಿದ್ದು ನವರಾತ್ರಿ ದೀಪಾವಳಿ ಸಂದರ್ಭದಲ್ಲಿ ಬಂಪರ್ ಕೊಡುಗೆ ಎನ್ನಬಹುದು. ನೌಕರರ ಮಾಸಿಕ ವೇತನವು ಕನಿಷ್ಠ 8,280 ರೂ. ಹೆಚ್ಚಾಗಲಿದೆ.

ಎಷ್ಟು ವರ್ಷಕೊಮ್ಮೆ ಏರಿಕೆ ಮಾಡುತ್ತದೆ?

ಕೇಂದ್ರ ಹಾಗೂ ರಾಜ್ಯ ಸರಕಾರ ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚುಮಾಡುತ್ತದೆ. ಕೇಂದ್ರ ಸರಕಾರ ಮಾಸಿಕ ವೇತನ ಮತ್ತು ಪಿಂಚಣಿಯ ಆಧಾರದ ಮೇಲೆ ಪ್ರತೀ ಆರು ತಿಂಗಳಿಗೊಮ್ಮೆ ಹೆಚ್ಚಳ ಮಾಡುತ್ತದೆ. ಸರ್ಕಾರದ ಈ ನಿರ್ಧಾರದಿಂದ ಹೆಚ್ಚು ಉದ್ಯೋಗಿಗಳಿಗೆ ಅನುಕೂಲ ಕೂಡ ಆಗಿದೆ. ಈ ಮೂಲಕ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಬದಲಾವಣೆಯಾಗುವುದು ಪಕ್ಕಾ ವಾಗಿದೆ.

Join Nadunudi News WhatsApp Group

Govt Employees DA Hike
Image Source: Mint

ಉಲ್ಲೇಖಿಸಲಾಗಿದೆ

ತುಟ್ಟಿಭತ್ಯೆಯ ಮೂಲವಾಗಿ ಮೂಲ ವೇತನದ ಜೊತೆಗೆ ಅದರ ಸ್ಥಗಿತ ವೇತನ ಬಡ್ತಿ, ಇತರೆ ವೈಯಕ್ತಿಕ ವೇತನ ಇದ್ದಲ್ಲಿ ಅವುಗಳು ಸೇರುತ್ತವೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಯುಜಿಸಿ / ಎಐಸಿಟಿಇ ಎನ್‌ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಸಿಬಂದಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸ ಲಾಗುವುದು ಎನ್ನಲಾಗಿದೆ.

ಒಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಸರಕಾರಿ ಉದ್ಯೋಗ ಮಾಡುವವರಿಗೆ ಇದು ಸಿಹಿ ಸುದ್ದಿಯನ್ನು ನೀಡಿದಂತಾಗಿದೆ. ಮಾರ್ಚ್ 2023 ರಲ್ಲಿ, ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿ ಅನುಮೋದನೆ ಕೂಡ ಸಲ್ಲಿಸಿತ್ತು.

Join Nadunudi News WhatsApp Group