Google Update: ಯಾವುದೇ ಕ್ಷಣದಲ್ಲಿ ಡಿಲೀಟ್ ಆಗಬಹುದು ಇಂತಹವರ ಜಿಮೇಲ್ ಖಾತೆ, ಕೂಡಲೇ ಈ ಕೆಲಸ ಮಾಡಿ
ಇಂತಹ ಜಿಮೈಲ್ ಖಾತೆಗಳನ್ನ ಡಿಲೀಟ್ ಮಾಡು ಈಗ ಗೂಗಲ್ ಮುಂದಾಗಿದೆ.
Google New Update: ಇದೀಗ ಗೂಗಲ್ (Google) ಹೊಸ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಕೆಲವು ಖಾತೆಗಳನ್ನು ಗೂಗಲ್ ಡಿಲೀಟ್ ಮಾಡಲು ಮುಂದಾಗಿದೆ. ಅಂದರೆ ಗೂಗಲ್ ತನ್ನ ನಿಷ್ಕ್ರಿಯ ಖಾತೆಗಳನ್ನು ತೆಗೆದು ಹಾಕಲು ಮುಂದಾಗಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳೋಣ.
ಬಳಕೆದಾರರಿಗೆ ಎಚ್ಚರಿಕೆ ನೀಡಿದ ಗೂಗಲ್
ಟೆಕ್ ದೈತ್ಯ ಈ ಹಿಂದೆ ತನ್ನೆಲ್ಲಾ ಬಳಕೆದಾರರಿಗೆ ಎಚ್ಚರಿಕೆಯೊಂದನ್ನು ನೀಡುವ ಮೂಲಕ ಈಗಲೇ ನಿಮ್ಮ ಖಾತೆಗಳಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಕೆಲವೇ ದಿನಗಳಲ್ಲಿ ಅವುಗಳನ್ನು ಗೂಗಲ್ ಅಳಿಸಿ ಹಾಕುತ್ತೇವೆ ಎಂದು ಮಾಹಿತಿ ನೀಡಿತ್ತು. ಈಗ ಗೂಗಲ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗ್ ಇನ್ ಮಾಡಲು ಹಾಗು ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಹೇಳಿತ್ತು, ಆದರೆ ಈಗ ಇಡೀ ಖಾತೆಯನ್ನೇ ಅಳಿಸಿ ಹಾಕುವುದಾಗಿ ಗೂಗಲ್ ಎಚ್ಚರಿಸಿದೆ.
ಇನ್ನು ಈ ವರ್ಷದ ನಂತರ 2 ವರ್ಷಗಳ ವರೆಗೆ ಗೂಗಲ್ ಖಾತೆಯನ್ನು ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ ನಾವು ಖಾತೆಯನ್ನು ಅದರಲ್ಲಿರುವ ಡೇಟಾಗಳನ್ನು ಅಳಿಸಬಹುದು, ಅವುಗಳಲ್ಲಿ ಗೂಗಲ್ ವರ್ಕ್ ಸ್ಪೇಸ್, ಜಿಮೇಲ್, ಡಾಕ್ಸ್, ಡ್ರೈವ್ ಕ್ಯಾಲೆಂಡರ್, ಯೂಟ್ಯೂಬ್ ಹಾಗು ಗೂಗಲ್ ಫೋಟೋಸ್ ಸೇರಿರುತ್ತದೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.
ಮೊಬೈಲ್ ಬಳಕೆದಾರರು ಈ ಮಾಹಿತಿಯನ್ನು ತಿಳಿದುಕೊಳ್ಳಿ
ಈ ಹೊಸ ನೀತಿಯ ಬಗ್ಗೆ ಬಳಕೆದಾರರು ಈ ವರ್ಷದ ಡಿಸೆಂಬರ್ ವರೆಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜಿಮೇಲ್ ನಲ್ಲಿ ಸಕ್ರಿಯವಾಗಿಲ್ಲದ ಬಳಕೆದಾರರು ತಮ್ಮ ಹಳೆಯ ಖಾತೆಯನ್ನು ಹಿಂಪಡೆಯಲು ಇನ್ನೂ ಸಮಯವಿದೆ. ಆದರೆ ಒಂದು ಬಾರಿ ಡಿಲೀಟ್ ಆದ ಖಾತೆಯನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಬಳಕೆದಾರರು ಈ ನೀತಿಯ ಬದಲಾವಣೆ ಬಗ್ಗೆ ತಿಳಿದುಕೊಂಡಿರುವುದು ಹಾಗೂ ತಮ್ಮ ನಿಷ್ಕ್ರಿಯ ಗೂಗಲ್ ಖಾತೆಗಳನ್ನು ಅಳಿಸದಂತೆ ತಡೆಯಲು ಕ್ರಮ ಕೈಗೊಳ್ಳುವುದು ಅಗತ್ಯ. ಇದಕ್ಕಾಗಿ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಪರಿಶೀಲಿಸುವುದು ಹಾಗೂ ವಿವಿಧ ಚಟುವಟಿಕೆಯನ್ನು ನಿರ್ವಹಿಸುವುದರಿಂದ ಖಾತೆಗಳನ್ನು ಅಳಿಸದಂತೆ ತಪ್ಪಿಸಬಹುದು.