Google Map: ಈಗ ಗೂಗಲ್ ಮ್ಯಾಪ್ ನಲ್ಲಿ ತಿಳಿದುಕೊಳ್ಳಿ ಟ್ರಾಫಿಕ್ ಪೊಲೀಸರು ಎಲ್ಲಿದ್ದಾರೆ ಎಂದು, ಹೊಸ ಸೇವೆ

ಸಂಚಾರ ಪೊಲೀಸರು ಇರುವ ಬಗ್ಗೆ ಮಾಹಿತಿ ನೀಡುತ್ತೆ ಗೂಗಲ್ ಮ್ಯಾಪ್...!

Google Map New Update: ಗೂಗಲ್ ಮ್ಯಾಪ್ ನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಬಳಸುವ ಸಾಮಾನ್ಯ ಅಪ್ಪ್ಲಿಕೇಶನೆಂದರೆ ಅದು ಗೂಗಲ್. ಇನ್ನು ಗೂಗಲ್ ಬಳಸುವ ಪ್ರತಿಯೊಬ್ಬರೂ ಕೂಡ Google Map ಅನ್ನು ಬಳಸೆ ಬಳಸುತ್ತಾರೆ. ಗೂಗಲ್ ಮ್ಯಾಪ್ ನ ಸಹಾಯದಿಂದ ಜನರು ತಮಗೆ ಬೇಕಾದ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ನಮಗೆ ತಿಳಿದಿರದ ವಿಳಾಸವನ್ನು ಗೂಗಲ್ ಮ್ಯಾಪ್ ನಲ್ಲಿ ಸರ್ಚ್ ಮಾಡಿದರೆ ಮ್ಯಾಪ್ ನಮಗೆ ಕ್ಷಣಾರ್ಧದಲ್ಲಿ ಮಾಹಿತಿಯನ್ನು ನೀಡುತ್ತದೆ. ಯಾವುದೇ ಸ್ಥಳದ ಬಗ್ಗೆ ಮಾಹಿತಿ ಪಡೆಯಲು ಗೂಗಲ್ ಮ್ಯಾಪ್ ಬಳಕೆದಾರರಿಗೆ ಸಹಾಯವಾಗುತ್ತದೆ. ನಿಮಗೆ ಗೊತ್ತೇ ಗೂಗಲ್ ಮ್ಯಾಪ್ ನಲ್ಲಿ ಟ್ರಾಫಿಕ್ ಪೋಲೀಸರ ಬಗ್ಗೆ ಕೂಡ ಮಾಹಿತಿ ತಿಳಿದುಕೊಳ್ಳಬಹುದು. ಹೌದು, ಗೂಗಲ್ ನಲ್ಲಿ ಈ ರೀತಿಯಾಗಿ ನೀವು ಸರ್ಚ್ ಮಾಡಿದರೆ ಯಾವ ಯಾವ ಸ್ಥಳದಲ್ಲಿ ಪೊಲೀಸ್ ಇದ್ದಾರೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ.

Google Map New Update
Image Credit: Express

ಸಂಚಾರ ಪೊಲೀಸರು ಇರುವ ಬಗ್ಗೆ ಮಾಹಿತಿ ನೀಡುತ್ತೆ ಗೂಗಲ್ ಮ್ಯಾಪ್…!
ನೀವು ಗೂಗಲ್ ಮ್ಯಾಪ್ ನ ಸಹಾಯದಿಂದ ಲೊಕೇಶನ್ ಹುಡುಕುವುದರ ಜೊತೆಗೆ ಸಂಚಾರ ಪೊಲೀಸರು ಎಲ್ಲೆಲ್ಲಿ ಇದ್ದಾರೆ ಎನ್ನುವ ಬಗ್ಗೆ ಕೂಡ ಮಾಹಿತಿ ತಿಳಿದುಕೊಳ್ಳಬಹುದು. ಹೌದು, Police Irtare ಅಂತ ಸರ್ಚ್ ಮಾಡಿದರೆ ಗೂಗಲ್ ಮ್ಯಾಪ್ ನಲ್ಲಿ ಇಂತಹ ಹಲವು ಹೆಸರಿನ ಸ್ಥಳಗಳು ಸಿಗುತ್ತವೆ.

ಇದು ಟ್ರಾಫಿಕ್ ಪೊಲೀಸರು ಹೆಚ್ಚು ಇರುವ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಇತರ ವಾಹನ ಚಾಲಕರಿಗೆ ಸಹಾಯ ಮಾಡುತ್ತದೆ. ಗೂಗಲ್ ಮ್ಯಾಪ್ ನಲ್ಲಿ Police Irtare ಎಂದು ಹುಡುಕಿದರೆ ರಾಜ್ಯದ ಹಲವು ಸ್ಥಳಗಳನ್ನು ತೋರಿಸುತ್ತದೆ. ‘ಪೊಲೀಸರು ಇದ್ದಾರೆ ನೋಡ್ಕೊಂಡ್ ಹೋಗಿ’, ‘ಪೊಲೀಸರು ಇದ್ದಾರೆ’, ‘ಪೊಲೀಸರು ಇದ್ದಾರೆ ಹುಷಾರಾಗಿರಿ’ ಹೀಗೆ ಹಲವು ಸ್ಥಳಗಳನ್ನು ನೋಡಬಹುದು.

Google Map Latest News
Image Credit: Searchenginejournal

ಪೊಲೀಸ್ ಇರ್ತಾರೆ ಹೆಲ್ಮೆಟ್ ಹಾಕಿಕೊಂಡು ಹೋಗಿ
ಹಲವು ಕಡೆ ಗಾಡಿಗಳನ್ನು ಪರಿಶೀಲಿಸುವುದು, ತಪಾಸಣೆ ಮಾಡುವ ಸ್ಥಳಗಳನ್ನು ಕಿಡಿಗೇಡಿಗಳು ಮ್ಯಾಪ್‌ ನಲ್ಲಿ ಈ ರೀತಿ ಗುರುತಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಂಗಳೂರಿನ ಹಲವೆಡೆ ಈ ರೀತಿ ಗುರುತಿಸಲಾಗಿದೆ. ಪೊಲೀಸ್ ಇರ್ತಾರೆ ಹೆಲ್ಮೆಟ್ ಹಾಕಿಕೊಂಡು ಹೋಗಿ ಎನ್ನುವುದನ್ನು ಮ್ಯಾಪ್ ನಲ್ಲಿ ನೋಡಬಹುದು.

Join Nadunudi News WhatsApp Group

ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು, ಹಿರಿಯೂರು, ದಾವಣಗೆರೆ, ಕೊಟ್ಟಿಗೆಹಾರ-ಚಿಕ್ಕಮಗಳೂರು ರಸ್ತೆ, ಪೊಲೀಸ್ ಚೆಕ್ ಪಾಯಿಂಟ್ ಗಳನ್ನು ಗೂಗಲ್ ಮ್ಯಾಪ್ ನಲ್ಲಿ ಗುರುತಿಸಲಾಗಿದೆ. ಹೀಗೆ ಮಾಡುವುದರಿಂದ ತಪ್ಪಿತಸ್ಥರೂ ಪಾರಾಗುವ ಅಪಾಯವಿದೆ. ಪೊಲೀಸರು ಈ ಬಗ್ಗೆ ಗಮನ ಹರಿಸಿ ಗೂಗಲ್ ಮ್ಯಾಪ್ ನಿಂದ ಡಿಲೀಟ್ ಮಾಡುವ ಕಾರ್ಯದಲ್ಲಿದ್ದಾರೆ. ಸದ್ಯ ಗೂಗಲ್ ಮ್ಯಾಪ್ ನಲ್ಲಿನ ಈ ಫೀಚರ್ ವಾಹನ ಸವಾರರಿಗೆ ಸಹಾಯವಾಗಿದೆ ಎನ್ನಬಹುದು.

Google Map New feature
Image Credit: Oneindia

Join Nadunudi News WhatsApp Group