Google Map: ಈಗ ಇಂಟರ್ನೆಟ್ ಇಲ್ಲದೆ ಗೂಗಲ್ ಮ್ಯಾಪ್ ಬಳಸಬಹುದು, ನೆಟ್ವರ್ಕ್ ಇಲ್ಲದ ಜಾಗಕ್ಕೆ ಹೋಗುವ ಮುನ್ನ ಈ ಕೆಲಸ ಮಾಡಿ.

ಆಫ್ ಲೈನ್ ನಲ್ಲಿ ಗೂಗಲ್ ನಕ್ಷೆಯನ್ನು ಬಳಕೆ ಮಾಡುವುದು ಹೇಗೆ...?

Google Maps Without Internet Connection: ಗೂಗಲ್ ಮ್ಯಾಪ್ (Google Map) ಮೂಲಕ ಪರಿಚಯವಿಲ್ಲದ ಸ್ಥಳವನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ. ನೀವು ಇದರೊಂದಿಗೆ ಕಾಲ್ನಡಿಗೆ, ಬೈಕ್, ಕಾರ್, ಸೈಕಲ್, ವಾಯು ಹಾಗೂ ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಗೂಗಲ್ ಮ್ಯಾಪ್ ಇಂಟರ್ನೆಟ್ (Internet) ಸಂಪರ್ಕ ಲಭ್ಯವಾಗುವಾಗ ನೈಜ ಸ್ಥಳದ ಮಾಹಿತಿಯನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಪ್ರವಾಸಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ನೆಟ್ ವರ್ಕ್ (Network) ಸಮಸ್ಯೆ ಇರುತ್ತದೆ ಇಂತಹ ಸಮಯದಲ್ಲಿ ಉಪಯುಕ್ತವಾಗಲು Google Map ಗ್ರಾಹಕರರಿಗೆ ಹೊಸ ಸೇವೆಯನ್ನು ಪರಿಚಯಿಸಿದೆ. ಇದೀಗ ನಾವು Android ಅಥವಾ iOS ಬಳಕೆದಾರರು ಆಫ್ ಲೈನ್ ನಲ್ಲಿ ಗೂಗಲ್ ನಕ್ಷೆಯನ್ನು ಹೇಗೆ ಬಳಕೆ ಮಾಡುವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Google Map Offline
Image Credit: Hindustantimes

ಬಳಸುವ ವಿಧಾನ
* ಮೊದಲು Android ಅಥವಾ iOS ಸಾಧನದಲ್ಲಿ Google Map ಅಪ್ಲಿಕೇಶನ್ ತೆರೆಯಬೇಕು.

* ಇದನ್ನು ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಮಾಡಬೇಕು

* ನಿರ್ದಿಷ್ಟ ಪ್ರದೇಶವನ್ನು ಆಯ್ಕೆ ಮಾಡಲು ನಕ್ಷೆಯಲ್ಲಿ ಜೂಮ್ ಇನ್ ಅಥವಾ ಜೂಮ್ ಔಟ್ ಮಾಡಬಹುದಾಗಿದೆ.

Join Nadunudi News WhatsApp Group

* ಇದರ ವಿವರವನ್ನು ತಿಳಿಯಲು ಸ್ಥಳದ ಹೆಸರು ಅಥವಾ ವಿಳಾಸವನ್ನು ಆಯ್ಕೆ ಮಾಡಬೇಕು.

ನೆಟ್ ಇಲ್ಲದಿದ್ದರೂ ಮ್ಯಾಪ್ ನಲ್ಲಿ ನಕ್ಷೆ ಹುಡುಕುವ ವಿಧಾನ ಹೇಗೆ..?
*Google ನಕ್ಷೆಗಳು ಆಯ್ಕೆ ಮಾಡಿದ ಪ್ರದೇಶ ಮತ್ತು ಅದರ ಗಾತ್ರವನ್ನು ಪ್ರದರ್ಶಿಸುತ್ತದೆ. ನೀವು ನಕ್ಷೆಯಲ್ಲಿ ಪ್ರದೇಶವನ್ನು ಡ್ರ್ಯಾಗ್ ಮಾಡುವ ಮೂಲಕ ಪ್ರದೇಶವನ್ನು ಸರಿಹೊಂದಿಸಬಹುದು.

*ದೊಡ್ಡ ನಕ್ಷೆಗಳಿಗೆ ಹೆಚ್ಚಿನ ಸಂಗ್ರಹಣೆಯ ಅಗತ್ಯವಿರುತ್ತದೆ. ಹಾಗಾಗಿ ನಿಮ್ಮ ಫೋನ್ ನಲ್ಲಿರುವ Storage ಬಗ್ಗೆ ಗಮನ ಹರಿಸಬೇಕಾಗುತ್ತದೆ.

*ನಂತರ ಆಫ್‌ಲೈನ್ ನಕ್ಷೆಯನ್ನು ಡೌನ್‌ಲೋಡ್ ಮಾಡಿ.

*ನೀವು ಬಯಸುವ ಆಫ್‌ಲೈನ್ ಮ್ಯಾಪ್‌ಗೆ ನೀವು ಹೆಸರನ್ನು ಆರಿಸಬೇಕಾಗುತ್ತದೆ ಮತ್ತು ಡೌನ್‌ಲೋಡ್ ಅನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

Google Maps Without Internet Connection
Image Credit: Groovypost

ನಕ್ಷೆಗೆ ಪ್ರವೇಶ
*ಡೌನ್ಲೋಡ್ ಮಾಡಿದ ನಕ್ಷೆಯನ್ನು ಪ್ರವೇಶಿಸಲು ನೀವು ಗೂಗಲ್ ಅಪ್ಲಿಕೇಶನ್ ಗೆ ಭೇಟಿನೀಡಬೇಕು.

*ಮೇಲೆ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ನೀವು ಡೌನ್ಲೋಡ್ ಮಾಡಿದ ನಕ್ಷೆಗಳ ಪಟ್ಟಿ ದೊರೆಯುತ್ತದೆ.

*ಈಗ ನಕ್ಷೆಯನ್ನು ಅನ್ವೇಷಿಸಬಹುದು ಹಾಗೆ ದಿಕ್ಕುಗಳನ್ನು ವೀಕ್ಷಿಸಬಹುದು.

*ಇಂಟರ್ನೆಟ್ ಸಂಪರ್ಕವಿಲ್ಲದೆ ಹತ್ತಿರದ ಸ್ಥಳಗಳನ್ನು ಹುಡುಕಬಹುದು.

*ಆದರೆ ನೈಜ ಸಮಯದ ಟ್ರಾಫಿಕ್ ಮಾಹಿತಿ ಲಭ್ಯವಾಗುದಿಲ್ಲ.

ನಕ್ಷೆಯ ನವೀಕರಣ
*ನಿರ್ದಿಷ್ಟ ಅವಧಿಯ ನಂತರ ಆಫ್‌ಲೈನ್ ನಕ್ಷೆಗಳು ಮುಕ್ತಾಯಗೊಳ್ಳುತ್ತವೆ. ಹಾಗಾಗಿ ಆಫ್‌ಲೈನ್ ನಕ್ಷೆ ಅನ್ನು ನವೀಕರಣ ಮಾಡಬೇಕಾಗುತ್ತದೆ.

*ಇದಕ್ಕಾಗಿ ನೀವು ಗೂಗಲ್ ಮ್ಯಾಪ್ ಅಪ್ಲಿಕೇಶನ್ ಗೆ ಹೋಗಿ ನವೀಕರಿಸಲು ಬಯಸುವ ನಕ್ಷೆಯನ್ನು ಆಯ್ಕೆಮಾಡಿ ಅಪ್ಡೇಟ್ ಮಾಡಬೇಕು.

*ಇನ್ನುಮುಂದೆ ಸಂಗ್ರಹಣೆಯ ಸ್ಥಳವನ್ನು ಮುಕ್ತಗೊಳಿಸುವ, ಅಗತ್ಯವಿಲ್ಲದ ನಕ್ಷೆಗಳನ್ನು ಅಳಿಸುವ ಮೂಲಕ ಡೌನ್‌ಲೋಡ್ ಮಾಡಿದ ನಕ್ಷೆಗಳನ್ನು ಸಹ ನೀವು ನಿರ್ವಹಿಸಬಹುದು.

Join Nadunudi News WhatsApp Group