Google Learning: ಇಂಗ್ಲಿಷ್ ಬರಲ್ಲ ಅಂದರೆ ಭಯಪಡುವ ಅಗತ್ಯ ಇಲ್ಲ, ಇಂಗ್ಲಿಷ್ ಕಲಿಯುವವರಿಗೆ ಗೂಗಲ್ ನಿಂದ ಹೊಸ ಫೀಚರ್.

English ಕಲಿಬೇಕು ಅಂದುಕೊಂಡವರಿಗೆ ಗೂಗಲ್ ನ ಹೊಸ ಫೀಚರ್

Google New Feature For English learner’s: Google ಬಗ್ಗೆ ಎಲ್ಲರಿಗು ತಿಳಿದೇ ಇದೆ. ಜಗತ್ತಿನಲ್ಲಿ ನಡೆಯುವ ಎಲ್ಲ ಮಾಹಿತಿಯನ್ನು ನೀಡುವ ಏಕೈಕ ವೆಬ್ ಸೈಟ್ ಅಂದರೆ ಅದು Google ಎನ್ನಬಹುದು.

Google ನಲ್ಲಿ ನಮಗೆ ತಿಳಿದಿರದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. Google ಯಾವುದೇ ರೀತಿಯ ತಪ್ಪಾದ ಮಾಹಿತಿಯನ್ನು ನೀಡುವುದಿಲ್ಲ. ಇದೀಗ ಗೂಗಲ್ ಶೀಘ್ರದಲ್ಲೇ ಒಂದು ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ.

Google New Feature
Image Credit: Livemint

English ಕಲಿಯಬೇಕು ಅಂತ ಇದ್ದವರಿಗೆ ಗುಡ್ ನ್ಯೂಸ್
ಈಗಿನ ಕಾಲದಲ್ಲಿ ಇಂಗ್ಲಿಷ್ ಮಾತನಾಡುವ ಕೌಶಲ್ಯ ಅತ್ಯಗತ್ಯವಾಗಿದೆ. ಇತರರೊಂದಿಗೆ ಮಾತನಾಡಲು, ಉದ್ಯೋಗವನ್ನು ಪಡೆದುಕೊಳ್ಳಲು ಇಂಗ್ಲಿಷ್ ಮುಖ್ಯವಾಗಿದೆ. ಇಂಗ್ಲಿಷ್ ಅನ್ನು ಕರಗತ ಮಾಡಿಕೊಳ್ಳಲು ಬಯಸುವವರಿಗೆ ಇದೀಗ ಉತ್ತಮ ಅವಕಾಶ ಒದಗಿಬಂದಿದೆ. ಹೌದು ಇದೀಗ ಗೂಗಲ್ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸಲು ಬಯಸುವ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದೆ.

English ಕಲಿಬೇಕು ಅಂದುಕೊಂಡವರಿಗೆ ಗೂಗಲ್ ನ ಹೊಸ ಫೀಚರ್
Google ನ ಈ ಹೊಸ ಫೀಚರ್ ಇಂಗ್ಲಿಷ್ ಕಲಿಯಲು ಒಂದು ಮೋಜಿನ, ಸಂವಾದಾತ್ಮಕ ಮಾರ್ಗವಾಗಿದೆ. ಪದಗಳನ್ನು ಅಥವಾ ವಾಕ್ಯಗಳನ್ನು ಇಂಗ್ಲಿಷ್‌ ಗೆ ಸ್ಥಳೀಯ ಭಾಷೆಯಿಂದ Android ಫೋನ್‌ಗಳಲ್ಲಿ ಅನುವಾದಿಸಬಹುದಾಗಿದೆ. ಉದಾಹರಣೆಗೆ ಗೂಗಲ್ ನಲ್ಲಿ Kitab in English ಎಂದು ಟೈಪ್ ಮಾಡಿದರೆ Book ಎಂಬ ಪದ ಬರುತ್ತದೆ.

Google New Feature For English learner's
Image Credit: Thehansindia

ಕೆಳಗೆ Practice Book ಎಂಬ ಫೀಚರ್ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡುವ ಮೂಲಕ ಇಂಗ್ಲಿಷ್‌ನಲ್ಲಿನ ಪದ ಪುಸ್ತಕಕ್ಕೆ ಸಂಬಂಧಿಸಿದಂತೆ ಉತ್ತರಿಸಲು Google ಬಳಕೆದಾರರನ್ನು ಕೇಳುತ್ತದೆ. ಉತ್ತರ ಕೊಟ್ಟ ನಂತರ ವ್ಯಾಕರಣದ ತಪ್ಪು ಇದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡುತ್ತದೆ ಮತ್ತು ತಿದ್ದುಪಡಿಗಳನ್ನು ಸೂಚಿಸುತ್ತದೆ. ಯಾವುದೇ ತಪ್ಪುಗಳಿಲ್ಲದಿದ್ದರೆ ಬಹಳ ಸ್ಪಷ್ಟವಾದ ಪ್ರತಿಕ್ರಿಯೆಯನ್ನು ನೀಡುತ್ತದೆ.

Join Nadunudi News WhatsApp Group

ಇಂಗ್ಲಿಷ್ ಮಾತನಾಡುವವರು ಹಿಂದಿ ಕಲಿಯಲು ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ. ಇದು ಶೀಘ್ರದಲ್ಲೇ Argentina, Colombia, India (Hindi), Indonesia, Mexico, Venezuelan ದಲ್ಲಿ ಲಭ್ಯವಿರುತ್ತದೆ. ನಂತರ ಮತ್ತಷ್ಟು ದೇಶಗಳಿಗೆ ವಿಸ್ತರಿಸಲಿದೆ. ಹಾಗೆ ತೆಲುಗು ಮತ್ತು ತಮಿಳಿನಂತಹ ಹೆಚ್ಚಿನ ಭಾಷೆಗಳನ್ನು ಸೇರಿಸಲು ಗೂಗಲ್ ಚಿಂತನೆ ನೆಡೆಸುತ್ತಿದೆ.

Join Nadunudi News WhatsApp Group