Google Passkey: ಇನ್ನುಮುಂದೆ ಪಾಸ್ ಕೀ ಇಲ್ಲದೆ ಗೂಗಲ್ ಖಾತೆ ಬಳಸಲು ಸಾಧ್ಯವಿಲ್ಲ, Gmail ಖಾತೆ ಇದ್ದವರಿಗೆ ಹೊಸ ರೂಲ್ಸ್.
ಗೂಗಲ್ ಸೈನ್ ಇನ್ ಗೆ Pass Key ಕಡ್ಡಾಯ.
Passkey For Google Sign In: ಸಾಮಾನ್ಯವಾಗಿ ಮೊಬೈಲ್ ಬಳಕೆದಾರರು Google ಅನ್ನು ಬಳಸೆ ಬಳಸುತ್ತಾರೆ. Google ತನ್ನ ಬಳಕೆದಾರರಿಗೆ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿದೆ. ಬಳಕೆದಾರರಿಗೆ Google ಹೆಚ್ಚಿನ ಪ್ರಯೋಜನಕಾರಿಯಾಗಿದೆ ಎಂದರೆ ತಪ್ಪಾಗಲಾರದು. Google ಅನ್ನು ದೇಶದಲ್ಲಿ ಶತಕೋಟಿ ಜನರು ಬಳಕೆ ಮಾಡುತ್ತಾರೆ.
ಸದ್ಯ Google ಬಳಕೆಯಲ್ಲಿ ಮಹತ್ವದ ಬದಲಾವಣೆಯನ್ನು ಪರಿಚಯಲಿಸಲಾಗಿದೆ. ಇನ್ನುಮುಂದೆ Google ಸೈನ್ ಇನ್ ಗೆ ಹೊಸ ನಿಯಮ ಅಳವಡಸಲಾಗುತ್ತದೆ. ಮುಂದಿನ ದಿನಗಳಲ್ಲಿ Google ಬಳಸುವವರು ಈ ಹೊಸ ನಿಯಮದ ಪ್ರಕಾರವೇ Google Sign In ಮಾಡಬೇಕಿದೆ.
Google Sign In ಗೆ Pass Key ಕಡ್ಡಾಯ
ಈ ಹಿಂದೆ ಬಳಕೆದಾರರು Google Account ಗೆ Sign In ಮಾಡಲು Password ಬಳಕೆ ಮಾಡಬೇಕಿತ್ತು. ಸದ್ಯ ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ Google Sign In ಗೆ Pass Key ಕಡ್ಡಾಯವಾಗಲಿದೆ. ಗೂಗಲ್ ಅಕೌಂಟ್ ನಲ್ಲಿ ಸೈನ್ ಇನ್ ಮಾಡಲು ಇನ್ನುಮುಂದೆ ಪಾಸ್ ವರ್ಡ್ ನ ಬದಲಾಗಿ ಪಾಸ್ ಕೀ ಅಗತ್ಯವಾಗಲಿದೆ. ಪಾಸ್ ವರ್ಡ್ ಗೆ ಪರ್ಯಾಯ ಮಾರ್ಗವಾದ ಪಾಸ್ ಕೀ ಮೂಲಕ ಸೈನ್ ಇನ್ ಮಾಡುವುದು “ಡಿಫಾಲ್ಟ್ ಸೈನ್ ಇನ್” ಪ್ರಕಿಯೆ ಆಗಲಿದೆ ಎಂದು Google ಹೇಳಿದೆ.
Password ಬದಲಾಗಿ ಇವುಗಳನ್ನು ಬಳಸಬಹುದು
ಕೆಲವೊಮ್ಮೆ ಗೂಗಲ್ ಅಕೌಂಟ್ ನ ಪಾಸ್ ವರ್ಡ್ ಮರೆತುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ ಈ ಪಾಸ್ ಕೀ ಸೌಲಭ್ಯ ಸಹಾಯವಾಗುತ್ತದೆ. ಪಾಸ್ ಕೀ ಸೌಲಭ್ಯದಿಂದ ನಿಮ್ಮ ಗೂಗಲ್ ಅಕೌಂಟ್ ಸೈನ್ ಇನ್ ಇನ್ನುಮುಂದೆ ಸರಳವಾಗಲಿದೆ. ನೀವು ಗೂಗಲ್ ಅಕೌಂಟ್ ಸೈನ್ ಇನ್ ಗೆ Password ಬದಲಾಗಿ ಫಿಂಗರ್ ಫ್ರಿನ್ಟ್, ಫೇಸ್ ರೆಕಗ್ನಿಷನ್, ಪಿನ್, ಪ್ಯಾಟರ್ನ್ ಅನ್ನು ಬಳಸಬಹುದು. ಯಾವುದೇ ಪಾಸ್ ಕೀ ಅನ್ನು ಬಳಸುವ ಮೂಲಕ ನೀವು ಗೂಗಲ್ ಅಕೌಂಟ್ ಗೆ ಸುಲಭವಾಗಿ ಸೈನ್ ಇನ್ ಆಗಬಹುದು.