Google Pay: ಗೂಗಲ್ ಪೆ ಲೈಟ್ ಬಳಸುವುದು ಹೇಗೆ, ಪಿನ್ ಇಲ್ಲದೆ ಎಷ್ಟು ಹಣವನ್ನ ಕಳುಹಿಸಬಹುದು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಗೂಗಲ್ ಪೆ ಲೈಟ್ ಬಳಸಿಕೊಂಡು ಪಿನ್ ಹಾಕದೆ ಎಷ್ಟು ಹಣವನ್ನ ವರ್ಗಾವಣೆ ಮಾಡಬಹುದು ತಿಳಿದುಕೊಳ್ಳಿ.
Google Pay Lite: ದೇಶದಲ್ಲಿ ಇತ್ತೀಚಿಗೆ ಆನ್ಲೈನ್ ವಹಿವಾಟುಗಳು ಹೆಚ್ಚುತ್ತಿವೆ. ಇತ್ತೀಚೆಗಂತೂ ಯುಪಿಐ ವಹಿವಾಟುಗಳಲ್ಲಿ ಅನೇಕ ರೀತಿಯ ಸೌಲಭ್ಯಗಳು ಬಿಡುಗಡೆಗೊಳ್ಳುತ್ತಲೇ ಇದೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿವೆ.
ಇದೀಗ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಆದ ಗೂಗಲ್ ಪೇ (Google Pay) ಬಳಕೆದಾರರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೊಳಿಸಿದೆ. ಗೂಗಲ್ ಪೇ ಬಳಕೆದಾರರು ಈ ಹೊಸ ಸೌಲಭ್ಯದ ಲಾಭವನ್ನು ಪಡೆಯಬಹುದಾಗಿದೆ.
ಗೂಗಲ್ ಪೇನಲ್ಲಿ ಯುಪಿಐ ಲೈಟ್ ಸೌಲಭ್ಯ
ಈ ವರ್ಷದ ಮಾರ್ಚ್ ನಲ್ಲಿ ಪೆಟಿಎಂ ಆಪ್ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಪ್ರಾರಂಭಿಸಿತ್ತು. ಇನ್ನು ಈಗಾಗಲೇ ಫೋನ್ ಪೇ ಕೂಡ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಪ್ರಾರಂಭಗೊಳಿಸಲಿದೆ. ಇದೀಗ ಗೂಗಲ್ ಪೇನಲ್ಲಿ ಯುಪಿಐ ಲೈಟ್ (Google Pay Lite) ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಗೂಗಲ್ ಪೇ ಹೊಸ ಆಪ್ ಅನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಪ್ರತಿ ಬಾರಿ ಯುಪಿಐ PIN ಬಳಕೆಯನ್ನು ಕಡಿಮೆ ಮಾಡಲಿದೆ.
ಗೂಗಲ್ ಪೆನಲ್ಲಿ ಹೊಸ ಹೊಸ ಸೇವೆ
ಸಣ್ಣ ಮೌಲ್ಯದ ವಹಿವಾಟುಗಳೊಂದಿಗೆ ಬ್ಯಾಂಕ್ ಸ್ಟೇಟ್ ಮೆಂಟ್ ಗಳು ಅಥವಾ ಪಾಸ್ ಬುಕ್ ಗಳನ್ನೂ ಡಿಕ್ಲರ್ ಮಾಡಲು ಯುಪಿಐ ಲೈಟ್ ಸಹಾಯವಾಗಲಿದೆ. ಗೂಗಲ್ ಪೇನಲ್ಲಿ ಯುಪಿಐ ಲೈಟ್ ಬಳಕೆಯು ಬಳಕೆದಾರರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಿದೆ. ಬಳಕೆದಾರರು ಮುಂದಿನ ದಿನಗಳಲ್ಲಿ ಯುಪಿಐ ಲೈಟ್ ನ ಲಾಭವನ್ನು ಪಡೆಯಬಹುದು.
ಯುಪಿಐ ಲೈಟ್ ನ ಮೂಲಕ ಬಳಕೆದಾರರು ಪಿನ್ ಅನ್ನು ನಮೂದಿಸದೆಯೇ ತಮ್ಮ ಯುಪಿಐ ಲೈಟ್ ಖಾತೆಯಿಂದ ಪಾವತಿಗಳನ್ನು ಮಾಡಬಹುದಾಗಿದೆ. ಈ ಹೊಸ ಸೌಲಭ್ಯವು ಬಳಕೆದಾರರಿಗೆ 24 ಗಂಟೆಗಳಲ್ಲಿ ಎರಡು ಬಾರಿ 2000 ರೂ. ಗಳನ್ನೂ ಸೇರಿಸಲು ಅನುಮತಿಸುತ್ತದೆ ಮತ್ತು ಒಂದೇ ಕ್ಲಿಕ್ ನಲ್ಲಿ 200 ರೂ. ವರೆಗಿನ ತ್ವರಿತ ವಹಿವಾಟುಗಳಿಗೆ ಗರಿಷ್ಟ 4000 ರೂ. ಅನ್ನು ಅನುಮತಿಸುತ್ತದೆ.
ಗೂಗಲ್ ಪೆನಲ್ಲಿ ಗೂಗಲ್ ಪೆ ಲೈಟ್ ಬಳಸುವುದು ಹೇಗೆ
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಮೇಲೆ ಕ್ಲಿಕ್ ಮಾಡಿದರೆ UPI ಲೈಟ್ ಆಯ್ಕೆ ಕಾಣಿಸುತ್ತದೆ. ಯುಪಿಐ ಲೈಟ್ ಪೇ ಪಿನ್ ಫ್ರೀ ಮೇಲೆ ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಬೇಕು. ಹಣವನ್ನು ಸೇರಿಸಲು ಯುಪಿಐ ಲೈಟ್ ಅನ್ನು ಬೆಂಬಲಿಸುವ ಅರ್ಹ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
ನೀವು UPI ಪಿನ್ ನಮೂದಿಸಿದ ತಕ್ಷಣ UPI Lite ಖಾತೆಯನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ. ಗೂಗಲ್ ಪೇ ನಲ್ಲಿ ನೀವು ಕೇವಲ ಒಂದು ಯುಪಿಐ ಲೈಟ್ ಖಾತೆಯನ್ನು ಮಾತ್ರ ರಚಿಸಬಹಹುದು.