Ads By Google

UPI Lite: ಗೂಗಲ್ ಪೆ ಬಳಸುವವರಿಗೆ ಇನ್ನೊಂದು ಹೊಸ ಸೇವೆ, ಎಲ್ಲರ ಫೋನ್ ನಲ್ಲಿ ಲಭ್ಯ

New news from Google for mobile users

Image Credit: India TV news

Ads By Google

Google Pay Lite: ಡಿಜಿಟಲ್ ಪಾವತಿ ಪ್ಲಾಟ್ ಫೋರ್ಮ್ ಗಳಲ್ಲಿ ಯುಪಿಐ (UPI) ಕೂಡ ಒಂದಾಗಿದೆ. ದೇಶದಲ್ಲಿ ಇತ್ತೀಚಿಗೆ ಆನ್ಲೈನ್ ವಹಿವಾಟುಗಳು ಹೆಚ್ಚುತ್ತಿವೆ. ಇತ್ತೀಚೆಗಂತೂ ಯುಪಿಐ ವಹಿವಾಟುಗಳಲ್ಲಿ ಅನೇಕ ರೀತಿಯ ಸೌಲಭ್ಯಗಳು ಬಿಡುಗಡೆಗೊಳ್ಳುತ್ತಲೇ ಇದೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿವೆ.

ಇದೀಗ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಆದ ಗೂಗಲ್ ಪೇ (Google Pay) ಬಳಕೆದಾರರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೊಳಿಸಿದೆ. ಇದೀಗ ಗೂಗಲ್ ಪೇ ಹೊಸ ಆಪ್ ಅನ್ನು  ಪರಿಚಯಿಸಲಿದೆ. ಗೂಗಲ್ ಪೇ ಬಳಕೆದಾರರು ಈ ಹೊಸ ಸೌಲಭ್ಯದ ಲಾಭವನ್ನು ಪಡೆಯಬಹುದಾಗಿದೆ. ಗೂಗಲ್ ಪೇ ಪರಿಚಯಿಸಲಿರುವ ಆಪ್ ನ ಬಗ್ಗೆ ಮಾಹಿತಿ ತಿಳಿಯೋಣ.

Image Credit: Keralakaumudi

ಗೂಗಲ್ ಪೇನಲ್ಲಿ ಯುಪಿಐ ಲೈಟ್ ಸೌಲಭ್ಯ
ಈ ವರ್ಷದ ಮಾರ್ಚ್ ನಲ್ಲಿ ಪೆಟಿಎಂ ಆಪ್ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಪ್ರಾರಂಭಿಸಿತ್ತು. ಇನ್ನು ಈಗಾಗಲೇ ಫೋನ್ ಪೇ ಕೂಡ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಪ್ರಾರಂಭಗೊಳಿಸಲಿದೆ. ಇದೀಗ ಗೂಗಲ್ ಪೇನಲ್ಲಿ ಯುಪಿಐ ಲೈಟ್ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

ಗೂಗಲ್ ಪೆ ಬಳಸುವವರಿಗೆ ಇನ್ನೊಂದು ಹೊಸ ಸೇವೆ
ಸಣ್ಣ ಮೌಲ್ಯದ ವಹಿವಾಟುಗಳೊಂದಿಗೆ ಬ್ಯಾಂಕ್ ಸ್ಟೇಟ್ ಮೆಂಟ್ ಗಳು ಅಥವಾ ಪಾಸ್ ಬುಕ್ ಗಳನ್ನೂ ಡಿಕ್ಲರ್ ಮಾಡಲು ಯುಪಿಐ ಲೈಟ್ ಸಹಾಯವಾಗಲಿದೆ. ಗೂಗಲ್ ಪೇನಲ್ಲಿ ಯುಪಿಐ ಲೈಟ್ ಬಳಕೆಯು ಬಳಕೆದಾರರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಿದೆ. ಬಳಕೆದಾರರು ಮುಂದಿನ ದಿನಗಳಲ್ಲಿ ಯುಪಿಐ ಲೈಟ್ ನ ಲಾಭವನ್ನು ಪಡೆಯಬಹುದು.

Image Credit: Itpro

ಯುಪಿಐನಲ್ಲಿ ಯಾವುದೇ ಪಿನ್ ಹಾಕುವ ಅಗತ್ಯ ಇಲ್ಲ
ಗೂಗಲ್ ಪೇ ತನ್ನ ಬಳಕೆದಾರರಿಗೆ ಯುಪಿಐ ಲೈಟ್ ಫೀಚರ್ ಅನ್ನು ಪರಿಚಯಿಸಿದೆ.ಯುಪಿಐ ಲೈಟ್ ನ ಮೂಲಕ ಬಳಕೆದಾರರು ಪಿನ್ ಅನ್ನು ನಮೂದಿಸದೆಯೇ ತಮ್ಮ ಯುಪಿಐ ಲೈಟ್ ಖಾತೆಯಿಂದ 200 ರೂ. ಗಿಂತ ಕಡಿಮೆ ಮೌಲ್ಯದ ಪಾವತಿಗಳನ್ನು ಮಾಡಬಹುದಾಗಿದೆ.

ಇನ್ನು ಗೂಗಲ್ ಪೇನಲ್ಲಿನ ಯುಪಿಐ ಲೈಟ್ ಎಲ್ಲಾ ಪ್ರಮುಖ ಬ್ಯಾಂಕ್ ಗಳು ಬೆಂಬಲಿಸಿದ್ದು, ದೇಶದಾದ್ಯಂತ ಎಲ್ಲಾ ಯುಪಿಐ ವ್ಯಾಪಾರಿಗಳು ಮತ್ತು ಕ್ಯೂಆರ್ ಕೋಡ್ ಗಳಲ್ಲಿ ಸ್ವೀಕರಿಸಲಾಗಿದೆ ಎಂದು ಗೂಗಲ್ ಪೇ ಹೇಳಿಕೊಂಡಿದೆ.

ಗೂಗಲ್ ಪೆನಲ್ಲಿ ಯುಪಿಐ ಲೈಟ್ ಬಳಸುವ ವಿಧಾನ
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಮೇಲೆ ಕ್ಲಿಕ್ ಮಾಡಿದರೆ UPI ಲೈಟ್ ಆಯ್ಕೆ ಕಾಣಿಸುತ್ತದೆ. ಯುಪಿಐ ಲೈಟ್ ಪೇ ಪಿನ್ ಫ್ರೀ ಮೇಲೆ ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಬೇಕು.

Image Credit: Moneycontrol

ಹಣವನ್ನು ಸೇರಿಸಲು ಯುಪಿಐ ಲೈಟ್ ಅನ್ನು ಬೆಂಬಲಿಸುವ ಅರ್ಹ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು. ನೀವು UPI ಪಿನ್ ನಮೂದಿಸಿದ ತಕ್ಷಣ UPI Lite ಖಾತೆಯನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ. ಗೂಗಲ್ ಪೇ ನಲ್ಲಿ ನೀವು ಕೇವಲ ಒಂದು ಯುಪಿಐ ಲೈಟ್ ಖಾತೆಯನ್ನು ಮಾತ್ರ ರಚಿಸಬಹಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in