GP Loan: ತಿಂಗಳಿಗೆ 111 ರೂ EMI ನಲ್ಲಿ ಗೂಗಲ್ ಪೆ ಮೂಲಕ 15000 ರೂ ಸಾಲ ಪಡೆಯುವುದು ಹೇಗೆ, ಬಡ್ಡಿ ತುಂಬಾ ಕಡಿಮೆ.
Google Pay ಮೂಲಕ ಸಾಲ ಪಡೆಯುವ ವಿಧಾನ ಬಗ್ಗೆ ಮಾಹಿತಿ.
Google Pay Loan Facility: ಸದ್ಯ ದೇಶದಲ್ಲಿ UPI Application ಗಳು ಜನಸ್ನೇಹಿಯಾಗಿದೆ ಎಂದರೆ ತಪ್ಪಾಗಲಾರದು. ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ UPI Application ಗಳನ್ನೂ ಬಳಸುತ್ತಿದ್ದಾರೆ. UPI ತನ್ನ ಬಳಕೆದಾರರಿಗೆ ಹೆಚ್ಚಿನ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಬಳಕೆದಾರರು ಎಲ್ಲ ಸೌಲಭ್ಯಗಳಾ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು.
ಇದೀಗ ಜನಪ್ರಿಯ UPI ಅಪ್ಲಿಕೇಶನ್ ಆಗಿರುವ Google Pay ಇದೀಗ ತನ್ನ ಬಳಕೆದಾರರಿಗೆ ಮಹತ್ವದ ಸೌಲಭ್ಯವನ್ನು ನೀಡಲು ಮುಂದಾಗಿದೆ. ಬ್ಯಾಂಕ್ ಗಳು, ವಿವಿಧ ಹಣಕಾಸು ಸಂಸ್ಥೆಗಳು ನಿಮಗೆ ಸಾಲವನ್ನು ನೀಡುವುದು ತಿಳಿದಿರುವ ವಿಚಾರ. ಆದರೆ ಇದೀಗ ಗೂಗಲ್ ಪೆ ಕೂಡ ಸಾಲವನ್ನು ನೀಡಲು ಹೊಸ ಹೆಜ್ಜೆಯನ್ನು ಇಟ್ಟಿದೆ. ನೀವು ಗೂಗಲ್ ಪೆ ನ ಮೂಲಕ ಇನ್ನುಮುಂದೆ ಸಾಲವನ್ನು ಪಡೆಯಬಹುದಾಗಿದೆ. Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ತಿಂಗಳಿಗೆ 111 ರೂ EMI ನಲ್ಲಿ ಗೂಗಲ್ ಪೆ ಮೂಲಕ 15000 ರೂ. ಸಾಲ ಪಡೆಯಿರಿ
ಜನಪ್ರಿಯ UPI Application ಆದ Google Pay ಇದೀಗ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಸ್ಯಾಚೆಟ್ ಸಾಲವು ನ್ಯಾನೋ ಕ್ರೆಡಿಟ್ ಸಾಲದ ಒಂದು ರೂಪವಾಗಿದೆ. ಈ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಮೊಬೈಲ್ ನ ಮೂಲಕವೇ ಪಡೆಯಬಹುದಾಗಿದೆ.
ಗೂಗಲ್ ಪೆ ಸಧ್ಯ ಈ ಸ್ಯಾಚೆಟ್ ಸಾಲದಲ್ಲಿ ರೂ. 15000 ಸಾಲವನ್ನು ನೀಡುತ್ತದೆ. ನೀವು ಗೂಗಲ್ ಪೆ ನ ಮೂಲಕ 15,000 ರೂಪಾಯಿ ಸಾಲವನ್ನು ಪಡೆದರೆ ಮಾಸಿಕ 111 ರೂ. ಪಾವತಿಸಬೇಕಾಗುತ್ತದೆ. ತಿಂಗಳಿಗೆ 111 ರೂ. EMI ಪಾವತಿಸಿ ಗೂಗಲ್ ಪೆ ಮೂಲಕ 15000 ರೂ. ಸಾಲವನ್ನು ಪಡೆಯಬಹುದಾಗಿದೆ. ಐಸಿಐಸಿಐ, ಕೋಟಕ್ ಮಹೀಂದ್ರಾ, ಫೆಡರಲ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಗಳಂತಹ ನಾಲ್ಕು ಬ್ಯಾಂಕ್ ಗಳಲ್ಲಿ Goggle Pay ಸಾಲವನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ.
ಯುಪಿಐ ಕ್ರೆಡಿಟ್ ಲೈನ್
ಇನ್ನು ಗೂಗಲ್ ಪೆ 15000 ರೂ. ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ Credit Line ಅನ್ನು ಸಕ್ರಿಯಗೊಳಿಸಲಿದೆ. ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪಡೆಯಲು ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಈ ಸಾಲವನ್ನು ಪಡೆಯಬಹುದು.
ಗೂಗಲ್ ಇಂಡಿಯಾ ICICI ಬ್ಯಾಂಕ್ ಸಹಯೋಗದೊಂದಿಗೆ UPI ಮೇಲೆ ಕ್ರೆಡಿಟ್ ಲೈನ್‌ಗಳನ್ನು ಪ್ರಾರಂಭಿಸಿದೆ. ಇನ್ನು Axis ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಮಾಸಿಕ ಆದಾಯ ರೂ. 30,000 ಕ್ಕಿಂತ ಕಡಿಮೆ ಇರುವವರು ಈ ಸಾಲ ಸೌಲಭ್ಯವನ್ನು ಪಡೆಯಬಹುದು.