Loan Facility: ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಿಗಲಿದೆ 15000 ರೂ, ಗೂಗಲ್ ಪೆ ಬಳಸುವವರಿಗೆ ಹೊಸ ಯೋಜನೆ.

ಗೂಗಲ್ ಪೇ ಮೂಲಕ ನೀವು ಸಾಲ ಸೌಲಭ್ಯಗಳನ್ನು ಪಡೆಯಬಹುದು.

Google Pay Loan Facility: ಇತ್ತೀಚಿನ ದಿನಗಳಲ್ಲಿ UPI ವಹಿವಾಟುಗಳು ಹೆಚ್ಚಾಗಿವೆ. UPI ವಹಿವಾಟುಗಳಲ್ಲಿ ಇತ್ತೀಚಿಗೆ ಸಾಕಷ್ಟು ಸೌಲಭ್ಯಗಳನ್ನು ಕೂಡ ಪರಿಚಯಿಸಲಾಗಿದೆ. ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ UPI ವಹಿವಾಟುಗಳು ಚಾಲ್ತಿಯಲ್ಲಿವೆ.

ಇದೀಗ Google Pay ಇನ್ನಷ್ಟು ಸೌಲಭ್ಯವನ್ನು ನೀಡಲಿದೆ. ಇನ್ನುಮುಂದೆ ನೀವು ಗೂಗಲ್ ಪೇ ಮೂಲಕ ನೀವು ಸಾಲ ಸೌಲಭ್ಯಗಳನ್ನು ಪಡೆಯಬಹುದು.

Google Pay Loan Facility
Image Credit: Marathimadhun

ಗೂಗಲ್ ಪೇ ನಲ್ಲಿ ಸಾಲ ಸೌಲಭ್ಯ
ಗೂಗಲ್ ಪೇ ಇದೀಗ ವೈಯಕ್ತಿಕ ಸಾಲ ಪಡೆಯುವಲ್ಲಿ ಸಹಾಯವಾಗಲಿದೆ. ಗೂಗಲ್ ಪೇ ನ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಈ ಮೂಲಕ ಗೂಗಲ್ ಪೇ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಗೂಗಲ್ ಪೇ ಸಾಲ ನೀಡಲು DMI Finance ನೊಂದಿಗೆ ಕೈಜೋಡಿಸಿದೆ. Google Pay ಅನೇಕ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗೂಗಲ್ ಪೆ ನಿಂದ 15,000 ಸಾಲ ಸೌಲಭ್ಯ
ಗೂಗಲ್ ಪೆ ಕಂಪನಿಯು ಸಣ್ಣ ವ್ಯಾಪಾರಿಗಳಿಗೆ 15,000 ರೂ. ಗಳಿಂದ ಪ್ರಾರಂಭವಾಗುವ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಇದರ ಮಾಸಿಕ ಕಂತು 111 ರೂಪಾಯಿ ಆಗಿದೆ. ವ್ಯಾಪಾರಿಗಳ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ವೈಯಕ್ತಿಕ ಸಾಲಗಳ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಕಂಪನಿಯು ಆಕ್ಸಿಸ್ ಬ್ಯಾಂಕಿನೊಂದಿಗೆ (Axis Bank) ಪಾಲುದಾರಿಕೆ ಹೊಂದಿದೆ. ಪ್ರಸ್ತುತ, ಪೇಟಿಎಂ ಮತ್ತು ಇನ್ನಿತರ ದೊಡ್ಡ ಪಾವತಿ ಕಂಪನಿಗಳು ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸೇವೆಗಳನ್ನು ನೀಡುತ್ತಿವೆ.

Join Nadunudi News WhatsApp Group

Join Nadunudi News WhatsApp Group