GP Loan 204: ಗೂಗಲ್ ಪೆ ಮೂಲಕ 1 ಲಕ್ಷ ರೂ ಸಾಲ ಪಡೆಯುವುದು ಹೇಗೆ…? ಯಾರು ಯಾರಿಗೆ ಸಿಗಲಿದೆ ಸಾಲ…?

Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ...?

Google Pay Loan Process: ಸದ್ಯ ಜನರು UPI ವ್ಹವತಿಗೆ ಹೊಂದಿಕೊಂಡಿದ್ದಾರೆ. UPI ಆಗಾಗ ಹೊಸ ಹೊಸ ಸೌಲಭ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಸದ್ಯ ಜನಪ್ರಿಯ UPI ಅಪ್ಲಿಕೇಶನ್ ಆಗಿರುವ Google Pay ಇದೀಗ ತನ್ನ ಬಳಕೆದಾರರಿಗೆ ಮಹತ್ವದ ಸೌಲಭ್ಯವನ್ನು ನೀಡಲು ಮುಂದಾಗಿದೆ. 

 ಬ್ಯಾಂಕ್ ಗಳು, ವಿವಿಧ ಹಣಕಾಸು ಸಂಸ್ಥೆಗಳು ನಿಮಗೆ ಸಾಲವನ್ನು ನೀಡುವುದು ತಿಳಿದಿರುವ ವಿಚಾರ. ಆದರೆ ಇದೀಗ ಗೂಗಲ್ ಪೆ ಕೂಡ ಸಾಲವನ್ನು ನೀಡಲು ಹೊಸ ಹೆಜ್ಜೆಯನ್ನು ಇಟ್ಟಿದೆ. ನೀವು ಗೂಗಲ್ ಪೆ ನ ಮೂಲಕ ಇನ್ನುಮುಂದೆ ಸಾಲವನ್ನು ಪಡೆಯಬಹುದಾಗಿದೆ. Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
Google Pay Loan
Image Credit: Zeenews

ಗೂಗಲ್ ಪೆ ಮೂಲಕ ಸಿಗಲಿದೆ 1 ಲಕ್ಷ ರೂ. ಸಾಲ
ಸಾಮಾನ್ಯವಾಗಿ ಯುಪಿಐ ಪೇಮೆಂಟ್ ಗಾಗಿ ಜನರು ವಿವಿಧ ಅಪ್ಲಿಕೇಶನ್ ಅನ್ನು ಬಳಸುತಾರೆ. ಅವುಗಳಲ್ಲಿ Google Pay ಕೂಡ ಒಂದಾಗಿದೆ. ಗೂಗಲ್ ಪೇ ಅನ್ನು ಕೇವಲ ಪೇಮೆಂಟ್ ಗೆ ಮಾತ್ರವಲ್ಲ ಸಾಲಕ್ಕೂ ಬಳಸಬಹುದಾಗಿದೆ. ಹೌದು, ಗೂಗಲ್ ಪೇ ತನ್ನ ಬಳಕೆದಾರರಿಗೆ ಬಹಳ ಸುಲಭವಾಗಿ ವಯಕ್ತಿಕ  ಸಾಲ ಸೌಲಭ್ಯವನ್ನು ನೀಡುತ್ತಿದೆ. Axis ಬ್ಯಾಂಕ್, HDFC ಬ್ಯಾಂಕ್ ಹಾಗು ಇತರ ಬ್ಯಾಂಕ್ ಗಳ ನಡುವೆ ಗೂಗಲ್ ಪೇ ಮಧ್ಯವರ್ತಿ ಆಗಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೆ ಗೂಗಲ್ ಪೇ ಮೂಲಕ 1,00,000 ಗಳ ವರೆಗೂ ಸಾಲ ಪಡೆಯಬಹುದು. ಯಾವುದೇ ಅಡಮಾನ ದಾಖಲೆ ಇಲ್ಲದೇ ಈ ಸಾಲವನ್ನು ನೀವು ಬಹಳ ಸುಲಭವಾಗಿ ಪಡೆಯಬಹುದಾಗಿದೆ.

ಯಾರು ಯಾರಿಗೆ ಸಿಗಲಿದೆ ಸಾಲ…?
ಗೂಗಲ್ ಪೇ ವಯಕ್ತಿಕ ಸಾಲ ಪಡೆಯಲು ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು ಹಾಗು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರುವುದು ಕಡ್ಡಾಯ ಆಗಿದೆ. 750 ಕ್ಕಿಂತ ಹೆಚ್ಚಿನ Credit Score ನೀವು ಹೊಂದಿದ್ದರೆ ಒಂದೇ ಕ್ಲಿಕ್ ಅಲ್ಲಿ ನಿಮಗೆ ಸಾಲ ದೊರೆಯುತ್ತದೆ. ಹಾಗು ನೀವು ಸಾಲ ಪಡೆಯುವಾಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಫೋನ್ ನಂಬರ್, ಇಮೈಲ್ ID ಹಾಗು ಬ್ಯಾಂಕ್ ನ IFSC ಕೋಡ್ ಮೊದಲಾದ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

Google Pay Loan Latest Update
Image Credit: Neuzn

ಗೂಗಲ್ ಪೆ ಮೂಲಕ 1 ಲಕ್ಷ ರೂ. ಸಾಲ ಪಡೆಯುವುದು ಹೇಗೆ…?
•ಮೊದಲು ನೀವು ನಿಮ್ಮ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು,

•ನೀವು ಸ್ವಲ್ಪ ಸ್ಕ್ಯಾಲ್ ಡೌನ್ ಮಾಡಿದರೆ ಲೋನ್ ಎನ್ನುವ ಆಯ್ಕೆ ಕಾಣಿಸುತ್ತದೆ ಇದನ್ನು ಕ್ಲಿಕ್ ಮಾಡಿ ಪೇಜ್ ಓಪನ್ ಆಗುತ್ತದೆ.

Join Nadunudi News WhatsApp Group

•ಅದರಲ್ಲಿ ಸಾಲದ ಮಾಹಿತಿ ಹಾಗು EMI ಇನ್ನಿತರ ಮಾಹಿತಿ ಕಾಣಿಸುತ್ತದೆ, ನಂತರ ಕಂಟಿನ್ಯೂ ಎಂದು ಕ್ಲಿಕ್ ಮಾಡಿ ಈಗ ನೀವು ಈ ಸಾಲ ಪಡೆಯಲು ಅರ್ಹರಾಗಿದ್ದರೆ ಅದರ ಬಗ್ಗೆ ಮಾಹಿತಿ ಲಭ್ಯ ಆಗುತ್ತದೆ.

•ಕೊನೆಗೆ ನಿಮ್ಮ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿ ನೇರವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

•ತಕ್ಷಣವೇ ನಿಮ್ಮ ಖಾತೆಗೆ ನಿಮ್ಮ ಸಾಲದ ಹಣ ವರ್ಗಾವಣೆ ಆಗುತ್ತದೆ.

Join Nadunudi News WhatsApp Group