G Pay Loan: ಗೂಗಲ್ ಪೆ ನಿಂದ 10 ನಿಮಿಷದಲ್ಲಿ 15,000 ರೂ ಲೋನ್ ಪಡೆಯಲು ಏನು ಮಾಡಬೇಕು, EMI ಕೇವಲ 111 ರೂ ಮಾತ್ರ.
ಗೂಗಲ್ ಪೇ ನಲ್ಲಿ ಸಾಲ ಸೌಲಭ್ಯ, ಸಾಲದ ಲಾಭ ಪಡೆಯುವ ಮಾರ್ಗಗಳು.
Google Pay Personal Loan Apply: ಇತ್ತೀಚಿನ ದಿನಗಳಲ್ಲಿ UPI ವಹಿವಾಟುಗಳು ಹೆಚ್ಚಾಗಿವೆ. ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ UPI ವಹಿವಾಟನ್ನು ಬಳಸುತ್ತಾರೆ. UPI ವಹಿವಾಟುಗಳು ಬಂದ ಮೇಲೆ ದೇಶದಲ್ಲಿ ನಗದು ವಹಿವಾಟು ಕಡಿಮೆ ಆಗುತ್ತಿದೆ ಎಂದರೆ ತಪ್ಪಾಗಲಾರದು.
ಇದೀಗ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ ಜನರಿಗೆ ಉತ್ತಮ ಸೇವೆಯನ್ನು ಪರಿಚಯಿಸಿದೆ. ಹೌದು ಇನ್ನುಮುಂದೆ ನೀವು ಗೂಗಲ್ ಪೇ (Google Pay) ಮೂಲಕ ನೀವು ಸಾಲ ಸೌಲಭ್ಯಗಳನ್ನು ಪಡೆಯಬಹುದು.
ಗೂಗಲ್ ಪೇ ನಲ್ಲಿ ಸಾಲ ಸೌಲಭ್ಯ
Google Pay ಇದೀಗ ವೈಯಕ್ತಿಕ ಸಾಲ ಪಡೆಯುವಲ್ಲಿ ಸಹಾಯವಾಗಲಿದೆ. G Pay ನ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಇದನ್ನು ಸ್ಯಾಚೆಟ್ ಲೋನ್ ಎಂದು ಕರೆಯಲಾಗುತ್ತದೆ. ಗೂಗಲ್ ಪೇ ಸಾಲ ನೀಡಲು DMI Finance ನೊಂದಿಗೆ ಕೈಜೋಡಿಸಿದೆ. Google Pay ಅನೇಕ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಗೂಗಲ್ ಪೆ ಸ್ಯಾಚೆಟ್ ಲೋನ್
ಪ್ರತಿದಿನ ವ್ಯಾಪಾರ ಮಾಡಲು ಮತ್ತು ದಿನನಿತ್ಯದ ಸಾಲವನ್ನು ಪಾವತಿಸಲು ಬಯಸುವವರಿಗೆ Google ನ ಈ ಸೇವೆಯು ತುಂಬಾ ಪ್ರಯೋಜನಕಾರಿಯಾಗಿದೆ. Google ಸಾಲ ನೀಡಲು ICICI, HDFC, Kotak Mahindra ಮತ್ತು ಫೆಡರಲ್ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
G Pay ಕಂಪನಿಯು ಸಣ್ಣ ವ್ಯಾಪಾರಿಗಳಿಗೆ 15,000 ರೂ. ಗಳಿಂದ ಪ್ರಾರಂಭವಾಗುವ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಇದರ ಮಾಸಿಕ ಕಂತು 111 ರೂಪಾಯಿ ಆಗಿದೆ. ವ್ಯಾಪಾರಿಗಳ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಪ್ರಸ್ತುತ, ಪೇಟಿಎಂ ಮತ್ತು ಇನ್ನಿತರ ದೊಡ್ಡ ಪಾವತಿ ಕಂಪನಿಗಳು ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸೇವೆಗಳನ್ನು ನೀಡುತ್ತಿವೆ.
ಸಾಲದ ಲಾಭ ಪಡೆಯುವ ಮಾರ್ಗಗಳು
*ಮೊದಲು Google Pay Business ಆಯ್ಕೆಗೆ ಭೇಟಿ ನೀಡಬೇಕು
*Loan ವಿಭಾಗಕ್ಕೆ ಹೋಗಿ ಮತ್ತು ಆಫರ್‌ಗಳ ಮೇಲೆ ಕ್ಲಿಕ್ ಮಾಡಬೇಕು
*ಸಾಲದ ಮೊತ್ತವನ್ನು ನಮೂದಿಸಬೇಕು
*ನಂತರ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ.
ಇಲ್ಲಿ ನೀವು KYC ಸೇರಿದಂತೆ ಕೆಲವು ಸುಲಭ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸಾಲವನ್ನು ಪಡೆಯಬಹುದು .ಸಣ್ಣಪುಟ್ಟ ವ್ಯಾಪಾರ ಮಾಡುವ ಜನರಿಗೆ ಈ ಲೋನ್ ಬಹಳ ಸಹಕಾರಿ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಸಾಕಷ್ಟು ಜನರು ಕಡಿಮೆ EMI ನಲ್ಲಿ ಗೂಗಲ್ ಪೆ ಲೋನ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಗೂಗಲ್ ಪೆ ನಲ್ಲಿ ಜನರು ತಿಂಗಳಿಗೆ 111 ರೂ EMI ಪಾವಲಿ ಮಾಡುವುದರ ಮೂಲಕ ಲೋನ್ ಪಡೆದುಕೊಳ್ಳಬಹುದು.