Google Pixel: ಈ ಗೂಗಲ್ ಪಿಕ್ಸೆಲ್ ಮೊಬೈಲ್ ಮುಂದೆ ಬೇಡಿಕೆ ಕಳೆದುಕೊಂಡ iPhone 15, ಐಫೋನ್ ಗಿಂತ ಹೆಚ್ಚಿನ ಫೀಚರ್.
Google Pixel ನ ನೂತನ ಮಾದರಿ ಇತ್ತೀಚಿಗೆ ಬಿಡುಗಡೆಗೊಂಡ iPhone 15 ಗೆ ನೇರವಾಗಿ ಪೈಪೋಟಿ ನೀಡಲಿದೆ.
Google Pixel 8 and Google Pixel 8 Pro: Google ಕಂಪನಿ ತನ್ನ Google Pixel ಸರಣಿಯಲ್ಲಿ ವರ್ಷಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತದೆ. ಗೂಗಲ್ ನ ಈ ಪಿಕ್ಸೆಲ್ ಸರಣಿಯ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
Google Pixel ಮೊಬೈಲ್ ನ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಮಾದರಿಯ ಸ್ಮಾರ್ಟ್ ಫೋನ್ ಗಳು ಬೇಡಿಕೆ ಕಳೆದುಕೊಳ್ಳುತ್ತಿವೆ. ಸದ್ಯ Pixel ಸರಣಿಯಲ್ಲಿ ಮತ್ತೆ ಎರಡು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿವೆ. Google Pixel ನ ನೂತನ ಮಾದರಿ ಇತ್ತೀಚಿಗೆ ಬಿಡುಗಡೆಗೊಂಡ iPhone 15 ಗೆ ನೇರವಾಗಿ ಪೈಪೋಟಿ ನೀಡಲಿದೆ.
Google Pixel 8 and Google Pixel 8 Pro
ಸದ್ಯ ಮಾರುಕಟ್ಟೆಯಲ್ಲಿ Google Pixel 8 and Google Pixel 8 Pro ಸರಣಿಗಳು ಬಿಡುಗಡೆಗೆ ಸಜ್ಜಾಗಿದೆ. October 4 ರಂದು ಬಿಡುಗಡೆಯಾಗಲಿರುವ ಈ ಎರಡು ಮಾದರಿಯ ಬೆಲೆ ಮತ್ತು ಫೀಚರ್ ಸೋರಿಕೆಯಾಗಿದೆ. ಬಿಡುಗಡೆಗೂ ಮುನ್ನವೇ Pixel ಸರಣಿಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಸದ್ಯ Google Pixel 8 and Google Pixel 8 Pro ಸರಣಿಗಳ ಬೆಲೆ ಮತ್ತು ಫೀಚರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.
Google Pixel 8 Feature
Google Pixel 8 ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಸೆಕಂಡರಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು ಮುಂಭಾಗದಲ್ಲಿ ಕ್ಲಾರಿಟಿ ಸೆಲ್ಫಿಗಾಗಿ 10.5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಾಗೆಯೆ ಗೂಗಲ್ ಟೆನ್ಸರ್ ಜಿ 3 ಪ್ರೊಸೆಸರ್‌ನೊಂದಿಗೆ IP68 ರೇಟಿಂಗ್‌ನೊಂದಿಗೆ ಬರುತ್ತದೆ.
Google Pixel 8 Pro Feature
Google Pixel 8 Pro ನಲ್ಲಿ ಟ್ರಿಪ್ಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ಸೆಕಂಡರಿ ಕ್ಯಾಮರಾ ಹಾಗೆಯೆ 48 ಮೆಗಾಪಿಕ್ಸೆಲ್ ಮೂರನೇ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಮುಂಭಾಗದಲ್ಲಿ ಕ್ಲಾರಿಟಿ ಸೆಲ್ಫಿಗಾಗಿ 0.5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಾಗೆಯೆ ಗೂಗಲ್ ಟೆನ್ಸರ್ ಜಿ 3 ಪ್ರೊಸೆಸರ್ ನೊಂದಿಗೆ IP68 ರೇಟಿಂಗ್ ನೊಂದಿಗೆ ಬರುತ್ತದೆ.
Google Pixel ಸರಣಿಗಳ ಬೆಲೆ ಎಷ್ಟು ಗೊತ್ತಾ..?
ಇನ್ನು Google Pixel 8 ಹಾಗೂ 8 Pro ಮಾದರಿಯಲ್ಲಿ ನೀವು 6.2 ಡಿಸ್ಪ್ಲೇಯನ್ನು ಕಾಣಬಹುದಾಗಿದೆ. ಹಾಗೆಯೆ 120 Hz ರೆಫ್ರೆಷ್ ದರದೊಂದಿಗೆ ಬರಲಿದೆ. ಇನ್ನು Google Pixel 8 ಮಾದರಿಗೆ 65,000 ರಿಂದ 70,000 ರೂ. ಹಾಗೂ Google Pixel 8 Pro ಮಾದರಿಗಳು 90,000 ರಿಂದ 95,000 ರೂ. ಗಳಲ್ಲಿ ಲಭ್ಯವಾಗಲಿದೆ. ಈ ಎರಡು ಮಾದರಿಗಳು ಮಾರುಕಟ್ಟೆಯಲ್ಲಿ iPhone 15 ಗೆ ಬಾರಿ ಪೈಪೋಟಿ ನೀಡಲಿದೆ.