Google: ಸದ್ಯಕ್ಕೆ ಐಫೋನ್ ಖರೀದಿಸಬೇಡಿ ಬಡವರಿಗಾಗಿ ಬಂತು ಗೂಗಲ್ ನ ಕಡಿಮೆ ಬೆಲೆಯಾ ಬೊಂಬಾಟ್ ಫೋನ್
4950 mAh ಬ್ಯಾಟರಿ ಸಾಮರ್ಥ್ಯ ವನ್ನು ಹೊಂದಿದ ಗೂಗಲ್ ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ.
Google Pixel 8 Pro: ಆಪಲ್ ಕಂಪನಿಯಿಂದ ಐಫೋನ್ 15 ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಐಫೋನ್ 15(Iphone15) ಇದೆ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಗ್ರಾಹಕರು ಈ ಐಫೋನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಐಫೋನ್ ಬಿಡುಗಡೆಯಾಗಲಿದ್ದು, ಇದೀಗ ಈ ಬಗ್ಗೆ ಹೊಸ ಮಾಹಿತಿ ಒಂದು ಬಿಡುಗಡೆಯಾಗಿದೆ.
ಐಫೋನ್ 15 ಅನ್ನು ಕಂಪನಿ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ನಂತರ ಗೂಗಲ್ ತನ್ನ ಹೊಸ ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತದೆ ಎನ್ನಲಾಗುತ್ತಿದೆ. ಅಕ್ಟೊಬರ್ ನಲ್ಲಿ ಗೂಗಲ್ ಪಿಕ್ಸೆಲ್ 8(Google Pixel 8) ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೀಗ ಈ ಸ್ಮಾರ್ಟ್ ಫೋನ್ ನ ಮಾಹಿತಿ ಹೊರ ಬಿದ್ದಿದೆ.
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್ ಫೋನ್
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಫೋನ್ ಗೇಮಿಂಗ್ ಗೆ ಹೇಳಿ ಮಾಡಿಸಿದಂತಿದೆ. ಇನ್ನು ಈ ಸ್ಮಾರ್ಟ್ ಫೋನ್ ಎರಡು ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. 12 GB RAM ಮತ್ತು 128 GB ಸ್ಟೋರೇಜ್ ಮತ್ತು ಇನ್ನೊಂದು 12 GB RAM ಮತ್ತು 256 GB ಸ್ಟೋರೇಜ್ ಹೊಂದಿದೆ. ಬಳಕೆದಾರರು ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದು.
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್ ಫೋನ್
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್ ಫೋನ್ ಪ್ರಬಲ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು ಟೆಲಿಫೋಟೋ ಲೆನ್ಸ್ ನೊಂದಿಗೆ 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಈ ಸ್ಮಾರ್ಟ್ ಫೋನ್ ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ 4950 mAh ಬ್ಯಾಟರಿಯನ್ನು ಹೊಂದಿರುತ್ತದೆ. ಗೂಗಲ್ ಪಿಕ್ಸೆಲ್ 8 ರ ಬೆಲೆ 60,000 ರೂಪಾಯಿಗಿಂತ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ.