Google Super: ದೇಶದ ಜನರಿಗಾಗಿ Google Super App ಜಾರಿಗೆ ತಂದ ಮೋದಿ ಸರ್ಕಾರ, ಈ App ನ ವಿಶೇಷತೆ ಏನು…?

ಗೂಗಲ್ ಪರಿಚಯಿಸಿರುವ ಹೊಸ ಅಪ್ಲಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

Google Super App A: ಇತ್ತೀಚಿಗೆ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸಾಕಷ್ಟು ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಜನಸಾಮಾನ್ಯರಿಗೆ ಅನುಕೂಲವಾಗಲು ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಹೊಸ ಸೌಲಭ್ಯವನ್ನು ಕಂಡು ಹಿಡಿಯಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಯೋಜನೆಯನ್ನು ರೂಪಿಸುತ್ತಿದೆ ಎನ್ನಬಹುದು.

ಸದ್ಯ ಯೋಜನೆಗಳ ಲಾಭ ಪಡೆಯಲು ಹೊಸ ಸೇವೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜನಸಾಮಾನ್ಯರಿಗೆ ಸಹಾಯವಾಗಲು Google ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದೀಗ ಗೂಗಲ್ ಪರಿಚಯಿಸಿರುವ ಹೊಸ ಅಪ್ಲಿಕೇಶನ್ ಯಾವುದು? ಈ ಅಪ್ಲಿಕೇಶನ್ ನಿಂದ ಏನು ಪ್ರಯೋಜನವಾಗಲಿದೆ? ಎನ್ನುವ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು.

Google Super App A
Image Credit: Economictimes

ಜನರಿಗಾಗಿ ಹೊಸ App ಬಿಡುಗಡೆ ಮಾಡಿದ ನರೇಂದ್ರ ಮೋದಿ ಸರ್ಕಾರ
ಇದೀಗ ಕೇಂದ್ರ ಸರ್ಕಾರದ ಜನರಿಗಾಗಿ ಒಂದು ಸೂಪರ್ ಆಪ್ (super App A ) ಅನ್ನು ಪರಿಚಯಿಸಲು ಸಿದ್ಧವಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ಅವರು ಬಿಡುಗಡೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಗೂಗಲ್ ಈ ಅಪ್ಲಿಕೇಶನ್ ಅನ್ನು ರಚಿಸಿದೆ.

Google Super App A
ಈ ಸೂಪರ್ ಅಪ್ಲಿಕೇಶನ್ ಲಾಗಿನ್ ಮಾಡಲು, ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಈ ಅಪ್ಲಿಕೇಶನ್ ಜನರಿಗೆ ಸರ್ಕಾರದ ಯೋಜನೆಗಳು ಮತ್ತು ಇತರ ಸೇವೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ.

Join Nadunudi News WhatsApp Group

ಆಕ್ಸಿಸ್ ಮೈ ಇಂಡಿಯಾ ಮತ್ತು ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ ನ ವಿಶೇಷತೆ ಎಂದರೆ ಈ ಆಪ್ ವಾಯ್ಸ್ ಆಕ್ಟಿವೇಟೆಡ್ ಪರ್ಸನಲ್ ಅಸಿಸ್ಟೆಂಟ್ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ ವಿಶೇಷವಾಗಿ ಈ ಆಪ್ ಮೂಲಕ ನೀವು ಆಯುಷ್ಮಾನ್ ಭಾರತ್, ಕೃಷಿ, ಸರ್ಕಾರಿ ಯೋಜನೆಗಳು, ಉದ್ಯೋಗಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Google Super App A ಅಪ್ಲಿಕೇಶನ್ ನ ಪ್ರಯೋಜನಗಳೇನು..?
* ಈ ಅಪ್ಲಿಕೇಶನ್ ನ ಮೂಲಕ ನಮ್ಮ ಹತ್ತಿರದಲ್ಲಿ ಯಾವ ಆಯುಷ್ಮನ್ ಭಾರತ್ ಆಸ್ಪತ್ರೆಗಳಿವೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

*ರೈತರಿ ತಮ್ಮ ಬೆಳೆಗಳಿಗೆ ಎಲ್ಲಿ ಬೆಂಬಲ ಬೆಲೆ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯಬಹುದು.

*ಈನು ಈ ಅಪ್ಲಿಕೇಶನ್ ಎಲ್ಲ ಭಾಷೆಗಳಲ್ಲೂ ಲಭ್ಯವಿದ್ದು, ನೀವು 13 ಭಾಷೆಗಳಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸಬಹುದು.

Join Nadunudi News WhatsApp Group