Google: ನಿಮ್ಮ ಖಾಸಗಿ ಇನ್ನುಮುಂದೆ ಗೂಗಲ್ ನಲ್ಲಿ ಲಭ್ಯ, ಈ ರೀತಿಯಾಗಿ ಗೂಗಲ್ ಮೂಲಕ ತಿಳಿಯಿಸಿ ನಿಮ್ಮ ಖಾಸಗಿ ಮಾಹಿತಿ.
ಗೂಗಲ್ ಬಳಕೆದಾರಿಗೆ ಮಹತ್ವದ ಮಾಹಿತಿ, ಹೊಸ ಸೌಲಭ್ಯ ಜಾರಿಗೆ ತಂದ ಗೂಗಲ್
Google Users:ಗೂಗಲ್ ಅನ್ನು ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಗೂಗಲ್(Google) ಮಾನವನ ಅವಿಭಾಜ್ಯ ಅಂಗವಾಗಿದೆ. ಗೂಗಲ್ ನಲ್ಲಿ ಯಾವ ವಿಷಯದ ಬಗ್ಗೆ ಬೇಕಾದರೂ ಮಾಹಿತಿ ತಿಳಿದುಕೊಳ್ಳಬಹುದು. ವ್ಯಕ್ತಿ, ಸ್ಥಳ ಇನ್ನಿತರ ವಿಷಯಗಳ ಬಗ್ಗೆ ಗೂಗಲ್ ನಲ್ಲಿ ಸುಲಭವಾಗಿ ಮಾಹಿತಿ ತಿಳಿಯಬಹುದು.
ಗೂಗಲ್ ಬಳಕೆದಾರಿಗೆ ಮಹತ್ವದ ಮಾಹಿತಿ
ಗೂಗಲ್ ನಲ್ಲಿ ಎಲ್ಲ ರೀತಿಯ ಮಾಹಿತಿಯನ್ನು ತಿಳಿಯಬಹುದು. ಸಣ್ಣ ಪದದ ಅರ್ಥದಿಂದ ಹಿಡಿದು ವ್ಯಕ್ತಿಯ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು. ಗೂಗಲ್ ತನ್ನ ಬಳಕೆದಾರರಿಗೆ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿದೆ. ಬಳಕೆದಾರರಿಗೆ ಗೂಗಲ್ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
ಸಾಮಾನ್ಯವಾಗಿ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಗೂಗಲ್ ನಲ್ಲಿ ನೀಡಿರುತ್ತಾರೆ.ನಿಮ್ಮ ವೈಯಕ್ತಿಕ ಮಾಹಿತಿಗಳು ಗೂಗಲ್ ನಲ್ಲಿ ಲಭ್ಯವಿದೆಯೇ ಎನ್ನುದನ್ನು ತಿಳಿದುಕೊಳ್ಳಲು ಇದೀಗ ಗೂಗಲ್ ಸಂಸ್ಥೆ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯನ್ನು ಮತ್ತಷ್ಟು ವಿಸ್ತರಿಸುದು ಗೂಗಲ್ ನ ಪ್ರಯತ್ನವಾಗಿದೆ. ಈ ಸರ್ಚ್ ಇಂಜಿನ್ ಸಂಸ್ಥೆಯಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ಹುಡುಕುವುದು ಮತ್ತು ತೆಗೆದುಹಾಕುವುದು ಸುಲಭವಾಗಿದೆ. ಇನ್ನುಮುಂದೆ ಇದಕ್ಕೆ ತ್ರಾಸದಾಯಕ ಹುಡುಕಾಟದ ಅವಶ್ಯಕತೆ ಇರುವುದಿಲ್ಲ.
ಇನ್ನುಮುಂದೆ ಗೂಗಲ್ ನಲ್ಲಿ ಹೊಸ ಸೌಲಭ್ಯ ಜಾರಿ
ನಿಮ್ಮ ವೈಯಕ್ತಿಕ ಮಾಹಿತಿ ಹುಡುಕಾಟದ ಕಾಲ ಮುಗಿದುಹೋಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಗೂಗಲ್ “ರಿಸಲ್ಟ್ಸ್ ಅಬೌಟ್ ಯೂ” (Results about you) ಡ್ಯಾಶ್ ಬೋರ್ಡ್ ಅನ್ನು ಮೊಬೈಲ್ ಹಾಗೂ ವೆಬ್ ಪ್ಲಾಟ್ ಫಾರಂ ನಲ್ಲಿ ಜಾರಿಗೊಳಿಸಿದೆ.
ಈ ಡ್ಯಾಶ್ ಬೋರ್ಡ್ ಹೆಚ್ಚು ಶಕ್ತಿಶಾಲಿಯಾಗಿದೆ. ನೀವು ಒಮ್ಮೆ ನಿಮ್ಮ ವಿವರಗಳನ್ನು ಹಾಕಿದರೆ ಸ್ವಯಂ ಚಾಲಿತವಾಗಿ ಹುಡುಕಾಟ ನೆಡೆಸಿ ನಿಮ್ಮ ಮಾಹಿತಿ ಒಳಗೊಂಡ ವೆಬ್ ಸೈಟ್ ಅನ್ನು ತೋರಿಸುತ್ತದೆ. ಹಾಗೆ ನೀವು ಪ್ರತಿ ವೆಬ್ ಸೈಟ್ ಗಳನ್ನೂ ಪರಿಶೀಲಿಸುವ ಮೂಲಕ ಮಾಹಿತಿಯನ್ನು ಸುಲಭವಾಗಿ ತೆಗೆದುಹಾಕಲು ಮನವಿ ನೀಡಬಹುದಾಗಿದೆ.
ಈಗ ನೀವು ನಿಮ್ಮ ವೈಯಕ್ತಿಕ ಮಾಹಿತಿಗಾಗಿ ಶ್ರಮ ಪಟ್ಟು ಹುಡುಕುವ ಅವಶ್ಯಕತೆ ಇಲ್ಲ, ಗೂಗಲ್ ನಿಮ್ಮ ವಿಳಾಸ, ಫೋನ್ ನಂಬರ್, ಅಹ್ಗೆ ಇ-ಮೇಲ್ ಆನ್ಲೈನ್ ಅಲ್ಲಿ ಕಂಡುಬಂದರೆ ತಕ್ಷಣ ನಿಮಗೆ ಸೂಚನೆ ನೀಡುತ್ತದೆ.