Privatisation: ದೇಶದ ಈ ಸರ್ಕಾರೀ ಬ್ಯಾಂಕುಗಳು ಖಾಸಗಿಯಾಗಲಿದೆ, ಬ್ಯಾಂಕ್ ಖಾತೆ ಇದ್ದವರಿಗೆ ಬಿಗ್ ಅಪ್ಡೇಟ್.

ಈ 12 ಬ್ಯಾಂಕುಗಳನ್ನ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಖಾಸಗಿಯಾಗಲಿದೆ.

Bank Privatisation In India: ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನ ಹೊಂದಿರುತ್ತಾರೆ ಮತ್ತು ಬ್ಯಾಂಕ್ ಖಾತೆ ಹೊಂದಿರದ ಮನುಷ್ಯ ಇಲ್ಲ ಎಂದು ಹೇಳಬಹುದು. ಸದ್ಯ RBI ಬ್ಯಾಂಕುಗಳಿಗೆ ಸಡಂಬಂಧಿಸಿದಂತೆ ಹಲವು ನಿಯಮಗಳನ್ನ ಈಗಾಗಲೇ ಜಾರಿಗೆ ತಂದಿದೆ ಮತ್ತು ಬ್ಯಾಂಕುಗಳು ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ನೀಡುತ್ತಿದೆ ಎಂದು ಹೇಳಬಹುದು. ಇದರ ನಡುವೆ ದೇಶದ ಹಲವು ಬ್ಯಾಂಕುಗಳು ಮರ್ಜ್ ಆಗಿದ್ದು ನಿಮಗೆಲ್ಲ ತಿಳಿದೇ ಇದೆ.

ಸರ್ಕಾರೀ ಬ್ಯಾಂಕುಗಳಿಗೆ ಹೋಲಿಸಿದರೆ ಕೆಲವು ಖಾಸಗಿ ಬ್ಯಾಂಕುಗಳು ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸುತ್ತಿದೆ ಎಂದು ಹೇಳಬಹುದು. ಸದ್ಯ RBI ಈಗ ಕೆಲವು ಸರ್ಕಾರೀ ಬ್ಯಾಂಕುಗಳನ್ನ ಖಾಸಗೀಕರಣ ಮಾಡುವ ಆಲೋಚನೆಯನ್ನ ಮಾಡಿದ್ದು ಸದ್ಯ ಅದರ ಕುರಿತು ಕೆಲವು ಮಾಹಿತಿಯನ್ನ ಹೊರಹಾಕಿದೆ.

 Bank Privatisation
Image Credit: Timesnowhindi

ಮರ್ಜ್ ಆಗಿದೆ ಹಲವು ಬ್ಯಾಂಕುಗಳು
ದೇಶದಲ್ಲಿ ಕೆಲವು ತಿಂಗಳುಗಳ ಹಿಂದೆ HDFC ಬ್ಯಾಂಕ್ ಮರ್ಜ್ ಆಗಿದ್ದು ಈಗ IDFC ಬ್ಯಾಂಕ್ ಮರ್ಜ್ ಆಗಲಿದೆ ಎಂದು ಹೇಳಲಾಗುತ್ತಿದೆ. ಖಾಸಗಿ ಬ್ಯಾಂಕುಗಳು ಜನರಿಗೆ ಉತ್ತಮವಾದ ಸೇವೆಯನ್ನ ನೀಡುತ್ತಿದ್ದು ಸದ್ಯ ಜನರು ಹೆಚ್ಚು ಹೆಚ್ಚು ಖಾಸಗಿ ಬ್ಯಾಂಕುಗಳಲ್ಲಿ ತಮ್ಮ ಖಾತೆಯನ್ನ ಮತ್ತು ಇತರೆ ವಹಿವಾಟು ಮಾಡುತ್ತಿದ್ದಾರೆ. ಇದರ ನಡುವೆ ಈಗ ಕೆಲವು ಸರ್ಕಾರೀ ಬ್ಯಾಂಕುಗಳು ಖಾಸಗೀಕರಣ ಆಗಲಿದೆ ಎಂದು ಹೇಳಲಾಗುತ್ತಿದ್ದು ಯಾವ ಬ್ಯಾಂಕುಗಳು ಖಾಸಗಿ ಆಗಲಿದೆ ಎಂದು ತಿಳಿಯೋಣ.

ಖಾಸಗೀಕರಣ ಆಗಲಿದೆ ದೇಶದ ಪ್ರತಿಷ್ಠಿತ ಬ್ಯಾಂಕುಗಳು
ಹೌದು ಸರ್ಕಾರೀ ಬ್ಯಾಂಕುಗಳ ಖಾಸಗೀಕರಣ ಮಾಡಲು ಈಗ RBI ಸಿದ್ಧತೆಯನ್ನ ಮಾಡಿದೆ ಎಂದು ಹೇಳಬಹುದು. ಇದರ ಕುರಿತಂತೆ ಸಮಿತಿ ರಚಿಸಲು ಚಿಂತನೆಯನ್ನ ಮಾಡಿದ್ದು ಬ್ಯಾಂಕುಗಳ ಪಟ್ಟಿಯನ್ನ ಸದಿದ್ದಮಾಡುವ ಜವಾಬ್ದಾರಿಯನ್ನು NITI ಆಯೋಗ ಮತ್ತು RBI ಗೆ ವಹಿಸಲಾಗಿದೆ. ಸಾರ್ವಜನಿಕ ಬ್ಯಾಂಕುಗಳಲ್ಲಿ ಹಲವು ವ್ಯಾಜ್ಯಗಳು ಇನ್ನು ಬಗೆಹರಿಯದ ಕಾರಣ ಅಂತಹ ಬ್ಯಾಂಕುಗಳನ್ನ ಖಾಸಗೀಕರಣ ಮಾಡುವ ತೀರ್ಮಾನವನ್ನ ಮಾಡಲಾಗಿದೆ ಮತ್ತು ಆ ಬ್ಯಾಂಕುಗಳ ಪಟ್ಟಿ ಮಾಡಲು NITI ಮತ್ತು RBI ಗೆ ಸಲಹೆ ನೀಡಲಾಗಿದೆ.

Bank Privatisation In India
Image Credit: Rightsofemployees

ಸಾರ್ವಜನಿಕ ಬ್ಯಾಂಕುಗಳ ಪಟ್ಟಿ 27 ರಿಂದ 12 ಕ್ಕೆ ಇಳಿಯಲಿದೆ
ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಮಾತನಾಡಿದ ದೇಶದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು ಬ್ಯಾಂಕುಗಳ ಖಾಸಗೀಕರಣದಿಂದ ಸಾರ್ವಜನಿಕ ಬ್ಯಾಂಕುಗಳ ಪಟ್ಟಿ 27 ರಿಂದ 12 ಕ್ಕೆ ಇಳಿಕೆ ಆಗಲಿದೆ ಎಂದು ಹೇಳಿದ್ದಾರೆ. RBI ಮತ್ತು NITI ನೀಡಿರುವ ಸಲಹೆಯ ಪ್ರಕಾರ ದೇಶದ 12 ಸರ್ಕಾರೀ ಬ್ಯಾಂಕುಗಳನ್ನ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

ಖಾಸಗಿಯಾಗದ 12 ಬ್ಯಾಂಕುಗಳು ಯಾವುದು
ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, UCO ಬ್ಯಾಂಕ್ ಗಳು ಖಾಸಗೀಕರಣ ಆಗಲ್ಲ ಮತ್ತು ಉಳಿದ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group