7th Pay: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, 7 ನೇ ವೇತನ ಆಯೋಗದ ಬಗ್ಗೆ ಮಹತ್ವದ ತೀರ್ಮಾನ.
ರಾಜ್ಯದ ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿಗೊಳಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
7th Pay Commission: ರಾಜ್ಯ ಸರ್ಕಾರೀ ನೌಕರರಿಗೆ ಇತ್ತೀಚಿಗೆ ಸರ್ಕಾರ ಸಿಹಿ ಸುದ್ದಿ ನೀಡುತ್ತಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ ಸರ್ಕಾರೀ ನೌಕರರಿಗೆ 7 ನೇ ವೇತನ ಆಯೋಗದ ಕುರಿತು ಸಿಹಿ ಸುದ್ದಿ ನೀಡಿದ್ದಾರೆ.
ಈ ಹಿಂದೆ ಸರ್ಕಾರ ಜುಲೈ ನಲ್ಲಿ ವೇತನ ಹೆಚ್ಚಳ ಮಾಡುವ ಕುರಿತು ಘೋಷಣೆ ಹೊರಡಿಸಿತ್ತು. ಇದೀಗ ರಾಜ್ಯದ ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿಗೊಳಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಇನ್ನು ನೌಕರರಿಗೆ 7 ನೇ ವೇತನ ಜಾರಿಗೊಳಿಸುವ ಕುರಿತು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. 6 ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ, ಸರ್ಕಾರೀ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ದಿನಾಂಕ ಜುಲೈ 1 2017 ರಿಂದಲೇ ಜಾರಿಗೊಳಿಸುವಂತೆ ಪರಿಸ್ಕರಿಸಲಾಗುತ್ತಿದೆ ಎಂದಿದ್ದಾರೆ.
ದಿನಾಂಕ 1 – 03 – 2023 ರ ಆದೇಶದಲ್ಲಿ ದಿನಾಂಕ 1 -04 -2023 ರಿಂದ ಜಾರಿಗೆ ಬರುವಂತೆ ಮೂಲ ವೇತನದಲ್ಲಿ ಶೇ. 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ. ಅದರಂತೆ ರಾಜ್ಯ ಸರ್ಕಾರದ ವೇತನ ಶ್ರೇಣಿಯಲ್ಲಿರುವ ಸಮಸ್ತ ಸರ್ಕಾರೀ ನೌಕರರು ಮತ್ತು ನಿವೃತ್ತಿ ವೇತನದಾರರು ಮಧ್ಯಂತರ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದಿದ್ದಾರೆ.
ಇನ್ನು ರಾಜ್ಯ ಸರ್ಕಾರೀ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗುತ್ತದೆ. ಆದ್ದರಿಂದ 7 ನೇ ರಾಜ್ಯ ವೇತನಾ ಆಯೋಗವು ಸಲ್ಲಿಸಬಹುದಾದ ಶಿಫಾರಸ್ಸುಗಳನ್ನು ರಾಜ್ಯ ಆರ್ಥಿಕ ಸ್ಥಿತಿಗತಿಗಳ ಬೆಳಕಿನಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ.
ಇನ್ನು ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.