Government employees age determination: ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗೆ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಅದೇ ರೀತಿಯಲ್ಲಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ ವಯಸ್ಸು ನಿರ್ಧಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗದುಕೊಂಡಿದೆ. ಇನ್ನುಮುಂದೆ ಸರ್ಕಾರೀ ನೌಕರರು ತಮಗೆ ಬೇಕಾದ ಹಾಗೆ ವಯಸ್ಸನ್ನು ಬದಲಾವಣೆ ಮಾಡಿಕೊಳ್ಳುವ ಅವಕಾಶ ಇಲ್ಲ. ಸರ್ಕಾರಿ ನೌಕರರ ಜನ್ಮ ದಿನಾಂಕ (DOB) ಮತ್ತು ವಯಸ್ಸು ಬದಲಾವಣೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಹೊಸ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಹಾಗಾದರೆ ಸರ್ಕಾರೀ ನೌಕರರಿಗೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆಚ್ಚಿನ ಸರ್ಕಾರೀ ನೌಕರರು ಸೇವೆಗೆ ಸೇರುವ ಮುನ್ನ ಒಂದು ರೀತಿ ಮನಸ್ಥಿತಿ ಇದ್ದರೆ, ಸೇವೆಗೆ ಸೇರಿದ ಮೇಲೆ ಇನ್ನೊಂದು ರೀತಿಯ ಮನಸ್ಥಿತಿಯಲ್ಲಿ ಇರುತ್ತಾರೆ. ಸರ್ಕಾರೀ ಕೆಲಸಕ್ಕೆ ಸೇರಿದ ಮೇಲೆ ಹೆಚ್ಚು ದಿನ ಸೇವೆಯಲ್ಲಿ ಇದ್ದರೆ ಹೆಚ್ಚಿನ ಸಂಬಳ ಪಡೆಯಬಹುದು ಮತ್ತು ನಿವೃತ್ತಿ ವೇತನ ಕೂಡ ಹೆಚ್ಚಾಗಲಿದೆ ಎನ್ನುವ ಆಸೆಯಿಂದ ಅಫಿಡವಿಟ್ ಗಳನ್ನ ಕೊಟ್ಟು ತಮ್ಮ DOB (ಜನ್ಮ ದಿನಾಂಕ) ಬದಲಾವಣೆ ಮಾಡಿಕೊಳ್ಳುತ್ತಾರೆ. ಇದನ್ನು ತಡೆಯುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಹಳೆಯ ಕಾನೂನ್ನು ರದ್ದು ಮಾಡಿ, ಹೊಸ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.
ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತ ಪಡಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಇದ್ದ 1974 ರ ಕಾಯಿದೆಯನ್ನು ರದ್ದುಗೊಳಿಸಿ, ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತ ಮಾಡಿಕೊಳ್ಳುವ ವಿಧೇಯಕ 2026 ಅನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ ಎಂದು ಮೂಲಗಳಿದ ಮಾಹಿತಿ ತಿಳಿದುಬಂದಿದೆ. ಇದರಿಂದ ನೇರ ನೇಮಕಾತಿ (Direct recruitment) ಮೂಲಕ ಸರ್ಕಾರಿ ಸೇವೆ ಸೇರಿದ ನೌಕರರು ತಮ್ಮ ವಯಸ್ಸು ಹಾಗು ಜನ್ಮ ದಿನಾಂಕವನ್ನು ಬದಲಾಯಿಸಿಕೊಳ್ಳುವ ಅವಕಾಶ ಕೊನೆಯಾಗಲಿದೆ.
ಇತ್ತೀಚಿಗೆ ಸರ್ಕಾರೀ ನೌಕರರು ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ವಿಷಯ ಕೇಳಿಬರುತ್ತಿದೆ. ಹೆಚ್ಚು ದಿನಗಳ ಕಾಲ ಸೇವೆಯಲಿದ್ದು ಹೆಚ್ಚಿನ ಸಂಬಳ ಪಡೆಯಬಹುದು. ಅಷ್ಟೇ ಮಾತ್ರವಲ್ಲದೆ ವಯಸ್ಸು ಬದಲಾವಣೆ ಮಾಡಿಕೊಂಡರೆ ನಿವೃತ್ತಿ ವೇತನ ಕೂಡ ಹೆಚ್ಚಾಗಲಿದೆ ಎನ್ನುವ ಆಸೆಯಿಂದ ಕೆಲವು ನೌಕರರು ತಮ್ಮ ವಯಸ್ಸು ಹಾಗು ಜನ್ಮ ದಿನಾಂಕವನ್ನು ಬದಲು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಳೆಯ ಕಾನೂನನ್ನು ತೆಗೆದು ಹಾಕಿ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.
ಹೊಸ ಕಾಯಿದೆಯ ನಿಯಮದ ಪ್ರಕಾರ, ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತ ಮಾಡಿಕೊಳ್ಳುವ ವಿಧೇಯಕ 2026 ರಲ್ಲಿ ಒಮ್ಮೆ ಸರ್ಕಾರಿ ಸೇವೆಗೆ ಸೇರಿದ ನಂತರ ನೌಕರರು ತಮ್ಮ ತಮ್ಮ ವಯಸ್ಸು ಹಾಗು ಜನ್ಮ ದಿನಾಂಕವನ್ನು ಬದಲಾಯಿಸಿಕೊಳ್ಳುವುದಕ್ಕೆ ನಿಷೇಧ ಹೇರಲಾಗುತ್ತದೆ. ಯಾವುದೇ ಕೋರ್ಟ್ ಅಥವಾ ಪ್ರಾಧಿಕಾರದ ಮುಂದೆ ಮನವಿ ಮಾಡಿಕೊಳ್ಳುವುದಕ್ಕೂ ಅವಕಾಶ ಇರುವುದಿಲ್ಲ. ನೇಮಕಾತಿ ಆದೇಶವಾದ ಬಳಿಕ ಡ್ಯೂಟಿ ರೀಪೋರ್ಟ್ ಮಾಡಿಕೊಳ್ಳುವಾಗ ಕೂಡ ವಯಸ್ಸು ಹಾಗು ಜನ್ಮ ದಿನಾಂಕದ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೇಲಾಧಿಕಾರಿಗಳು ಹಳೆಯ ದಿನಾಂಕವನ್ನೇ ನಮೂದಿಸುವುದು ಕಡ್ಡಾಯವಾಗಿದೆ.
ಹೊಸ ನಿಯಮವು ಸರ್ಕಾರೀ ನೌಕರಕ್ಕೆ ಆಗುವ ವಂಚನೆಯನ್ನು ತಡೆಗಟ್ಟುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದರೆ ಈ ನಿಯಮ ಇನ್ನೂ ಕೂಡ ಅಧಿಕೃತವಾಗಿ ಜಾರಿಗೆ ಬಾರದೆ ಇರುವ ಕಾರಣ ನೌಕರರು ಭಯಪಡುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್ ವಯಸ್ಸು ಬದಲಾವಣೆಯನ್ನು ನಿವೃತ್ತಿಯ ಹೊಸರಲ್ಲಿ ಮಾತ್ರ ಅನುಮತಿಸದಂತೆ ತೀರ್ಪು ನೀಡಿದೆ. ಆದರೆ ಈ ಹೊಸ ವಿಧೇಯಕವು ಇದನ್ನು ಮತ್ತಷ್ಟು ಬಲಪಡಿಸುತ್ತದೆ. ಇನ್ನು ಈ ವಿಧೇಯಕವು ಇನ್ನೂ ಕರಡು ಹಂತದಲ್ಲಿದೆ. ಸರ್ಕಾರವು ಅಧಿಕೃತವಾಗಿ ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೊಳಿಸಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

