Retirement Age: ಸರ್ಕಾರೀ ನೌಕರರ ನಿವೃತ್ತಿ ವಯಸ್ಸಿನ ಮೇಲೆ ಮಹತ್ವದ ಘೋಷಣೆ ಮಾಡಿದ ಕೇಂದ್ರ, ನಿಟ್ಟುಸಿರು ಬಿಟ್ಟ ನೌಕರರು.

ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸಿನ ಬದಲಾವಣೆಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Government Employees Retirement Age: ಕೇಂದ್ರ ಸರ್ಕಾರ (Central Govt) ಇತ್ತೀಚಿಗೆ ಹೊಸ ಹೊಸ ಘೋಷಣೆಯನ್ನು ಹೊರಡಿಸುತ್ತಿದೆ. ಸರ್ಕಾರ ಕೇಂದ್ರ ನೌಕರರಿಗೆ ವಿವಿಧ ಸೌಲಭ್ಯಗಳ ಜೊತೆಗೆ ಹೊಸ ನಿಯಮಗಳನ್ನು ಕೂಡ ಜಾರಿಗೊಳಿಸುತ್ತಿದೆ. ಇನ್ನು ಕೇಂದ್ರ ನೌಕರರಿಗೆ ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಈಗಾಗಲೇ ಅಪ್ಡೇಟ್ ನೀಡಿದೆ.

ನೌಕರರ ವೇತನ ಹೆಚ್ಚಳದ ವಿಚಾರವಾಗಿ ಸರ್ಕಾರ ಸಾಕಷ್ಟು ಬಾರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದಿನ ತಿಂಗಳಿನಲ್ಲಿ ತುಟ್ಟಿಭತ್ಯೆ ಶೇ. 4 ರಷ್ಟು ಏರಿಕೆಯಾಗುವ ಬಗ್ಗೆ ಕೂಡ ಸರ್ಕಾರ ಘೋಷಣೆ ಹೊರಡಿಸಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಹಳೆಯ ಪಿಂಚಣಿ ಜಾರಿಯ ಬಗ್ಗೆ ಕೂಡ ಸುದ್ದಿ ಲಭಿಸಿದೆ. ಇನ್ನು ಸರ್ಕಾರೀ ನೌಕರರ ನಿವೃತ್ತಿ ವಯಸ್ಸಿನ ಹೆಚ್ಚಳದ ಬಗ್ಗೆ ಕೂಡ ಸುದ್ದಿಗಳು ವೈರಲ್ ಆಗಿದ್ದವು.

Government Employees Retirement Age
Image Credit: Adaderana

ಸರ್ಕಾರೀ ನೌಕರರ ನಿವೃತ್ತಿ ವಯಸ್ಸು ಬದಲಾವಣೆ (Government Employees Retirement Age)
ಸದ್ಯದಲ್ಲೇ ಸರ್ಕಾರೀ ನೌಕರರ ನಿವೃತ್ತಿ ವಯಸ್ಸು ಹೆಚ್ಚಳವಾಗುತ್ತದೆ ಎನ್ನುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸಿನ ಬದಲಾವಣೆಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರೀ ನೌಕರರ ನಿವೃತ್ತಿ ವಯಸ್ಸಿನ ನಿಯಮವನ್ನು ಬದಲಾಯಿಸುವ ಬಗ್ಗೆ ಸಂಸತ್ತಿನಲ್ಲಿ ನಿನ್ನೆ ಚರ್ಚಿಸಲಾಗಿದೆ. ಸರ್ಕಾರೀ ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸಬೇಕು ಅಥವಾ ಕಡಿಮೆ ಮಾಡಬೇಕೋ ಎನ್ನುವ ಬಗ್ಗೆ ಸಂಸತ್ತಿನಲ್ಲಿ ನಿನ್ನೆ ಚರ್ಚಿಸಲಾಗಿದೆ.

ನಿವೃತ್ತಿ ವಯಸ್ಸು ಬದಲಾಯಿಸುವ ಪ್ರಸ್ತಾಪವಿಲ್ಲ
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ನಿಯಮ 56 (ಜೆ) ಅಡಿಯಲ್ಲಿ ಕಡ್ಡಾಯ ನಿವೃತ್ತಿ ಪಡೆದ ನೌಕರರ ಸಂಖ್ಯೆಯನ್ನು ಸಹ ಸಂಸತ್ತಿನಲ್ಲಿ ಚರ್ಚಿಸಲಾಗಿದೆ.

Change in retirement age of government employees
Image Credit: Economictimes

ಇನ್ನು ಕೇಂದ್ರ ಸರ್ಕಾರೀ ನೌಕರರ ನಿವೃತ್ತಿ ವಯಸ್ಸು ಬದಲಾಯಿಸುವ ಯಾವುದೇ ಪ್ರಸ್ತಾಪವು ಪರಿಗಣನೆಯಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರೀ ನೌಕರರು ಈ ಹಿಂದೆ ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೋ ಅದೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲಿದ್ದಾರೆ. ನಿವೃತ್ತಿ ವಯಸ್ಸಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group