Government Profit: ಒಂದು ಫಾರ್ಚುನರ್ ಕಾರ್ ಮಾರಾಟವಾದರೆ ಸರ್ಕಾರಕ್ಕೆ ಸಿಗುವ ಹಣ ಎಷ್ಟು…? ನಿಜವಾದ ಕಾರ್ ಬೆಲೆ ಇಲ್ಲಿದೆ.

Toyota ಒಂದು ಕಾರ್ ಮಾರಾಟವಾದರೆ ಸರ್ಕಾರಕ್ಕೆ ಎಷ್ಟು ಲಾಭವಾಗಲಿದೆ.

Government Profit From Toyota Fortuner Car Sale: ಭಾರತೀಯ ಆಟೋ ವಲಯದಲ್ಲಿ ಈಗಾಗಲೇ ವಿವಿಧ ಮಾದರಿಯ ಕಾರ್ ಗಳು ಬಿಡುಗಡೆಯಾಗಿವೆ. ಅಟೋಮೊಬೈಲ್ ಮೊಬೈಲ್ ಮಾರುಕಟ್ಟೆಯಲ್ಲಿ Bharata ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಗಳು ವಿವಿಧ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಎಲ್ಲ ವಾಹನಗಳು ಉತ್ತಮ ಮಾರಾಟವನ್ನು ಕಾಣುತ್ತಿದೆ.

Government Profit From Toyota Fortuner Car Sale
Image Credit: Cartoq

ಕಂಪನಿಗಳು CAR ಮಾರಾಟ ಮಾಡಿದರೆ ಎಷ್ಟು ಲಾಭ ಪಡೆಯುತ್ತವೆ
ಸಾಮಾನ್ಯವಾಗಿ ಕಂಪನಿಗಳು ವಾಹನವನ್ನು ಮಾರಾಟ ಮಾಡಿದರೆ ತೆರಿಗೆ, ಆಮದು ಸುಂಕವನ್ನು ಪಾವತಿಸಬೇಕಾಗುತ್ತದೆ. ಸಾಕಷ್ಟು ಬಾರಿ ಕಂಪನಿಗಳು ಸರ್ಕಾರಕ್ಕೆ ತೆರಿಗೆ ಕಡಿತ, ಆಮದು ಸುಂಕವನ್ನು ಕಡಿತಗೊಳಿಸಲು ಮನವಿ ಮಾಡಿದೆ. ಏಕೆಂದರೆ ಈ ತೆರಿಗೆ ಪಾವತಿಯ ಕಾರಣ ಕಾರು ಮಾರಾಟ ಮಾಡಿದ ಕಂಪನಿಗಳಿಗೆ ಲಾಭ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ.

ಆದರೆ ಸರ್ಕಾರಕ್ಕೆ ಒಂದು ಕಾರ್ ಮಾರಾಟವಾದರೆ ಲಕ್ಷ ಲಕ್ಷ ಆದಾಯ ಲಭಿಸುತ್ತದೆ. Make In India ಯೋಜನೆಯಡಿ ಕಾರ್ ಉತ್ಪಾದಿಸಿ ಮಾರಾಟ ಮಾಡಿದರೆ ಅಟೋಮೊಬೈಲ್ ಕಂಪನಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಲಾಭ ಸಿಗಲಿದೆ. ಆದರೆ ವಿದೇಶದಿಂದ ಆಮದು ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ವಿತರಣೆ ಮಾಡಿದರೆ ಕಂಪನಿಗಳಿಗೆ ನಷ್ಟವೇ ಹೆಚ್ಚು. ಇದಕ್ಕೆ ಕಾರಣ ಹೆಚ್ಚಿನ ತೆರಿಗೆ ಪಾವತಿ.

Government Profit latest update
Image Credit: Cartoq

Toyota Fortuner Car ಟೊಯೋಟಾ ಫಾರ್ಚುನರ್
ಭಾರತೀಯ ತೆರಿಗೆ ಪಾವತಿಯಲ್ಲಿ ಕಾರಿನ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಭಾರತೀಯ ಆಟೋ ಮೊಬೈಲ್ ಕಂಪನಿಗಳು ಹೆಚ್ಚಿನ ಮಾರಾಟ ಕಂಡುಕೊಂಡರು ಕೂಡ ಲಾಭದ ಪ್ರಮಾಣ ತೆರಿಗೆ ಕಾರಣ ಕಡಿಮೆ ಇರುತ್ತದೆ. ಇನ್ನು ಭಾರತೀಯ ಆಟೋ ವಲಯದಲ್ಲಿ Toyota Car ಹೆಚ್ಚಿನ ಬೇಡಿಕೆ ಪಡೆದಿದೆ. ಈ Toyota ಒಂದು ಕಾರ್ ಮಾರಾಟವಾದರೆ ಸರ್ಕಾರಕ್ಕೆ ಎಷ್ಟು ಲಾಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಒಂದು ಟೊಯೋಟಾ ಫಾರ್ಚುನರ್ ಕಾರ್ ಮಾರಾಟವಾದರೆ ಸರ್ಕಾರ ಸಿಗುವ ಲಾಭ ಎಷ್ಟು..?
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ Toyota Fortuner Car ನ ಬೆಲೆ 44,27,000 ರೂ. ಆಗಿದೆ. ಈ Toyota Fortuner Car ಮಾರಾಟವಾದರೆ ಸರ್ಕಾರ ಲಕ್ಷ ಲಕ್ಷ ಆದಾಯ ಪಡೆಯುತ್ತದೆ. ಫಾರ್ಚುನರ್ ಕಾರಿನ ಉತ್ಪಾದನಾ ವೆಚ್ಚ 26.67 ಲಕ್ಷ ರೂಪಾಯಿ. ಈ ಕಾರು ಮಾರಾಟಕ್ಕೆ ಸಿದ್ಧವಾದಾಗ ಇದರ ಮೇಲೆ ಶೇಕಡಾ 28 ರಷ್ಟು GST ಸೇರಿಕೊಳ್ಳಲಿದೆ. ಈ ವೇಳೆ ಕಾರಿನ ಬೆಲೆ 34,13,760 ರೂಪಾಯಿ ಆಗಲಿದೆ.

Join Nadunudi News WhatsApp Group

Government Profit From Toyota Fortuner Car Sale
Image Credit: Theprint

ಇದರ ಜೊತೆಗೆ ಶೇ. 22 ಸೆಸ್ ತೆರಿಗೆ ಸೇರಿಕೊಂಡಾಗ ಕಾರಿನ ಬೆಲೆ 41,64,787 ರೂ. ಆಗಲಿದೆ. ಇದಾದ ಬಳಿಕ ರಿಜಿಸ್ಟ್ರ್ಶನ್, ಗ್ರೀನ್ ಸೆಸ್ ಮೊತ್ತ ಇವೆಲ್ಲವೂ ಸೇರಿ ಕಾರಿನ ಬೆಲೆ 44,27,000 ರೂ. ತಲುಪುತ್ತದೆ. GST , SES, Registration ,Green sess ಮೂಲಕ ಸರ್ಕಾರ ಒಂದು Toyota Fortuner Car ಮಾರಾಟದಿಂದ ಸುಮಾರು 18 ಲಕ್ಷ ಹಣ ಪಡೆಯುತ್ತದೆ.

ಇನ್ನು ಕಂಪನಿಯು Toyota Fortuner Car ಮಾರಾಟದ ಎಲ್ಲ ವೆಚ್ಚವನ್ನು ಭರಿಸಿ ನಂತರ 45 ರಿಂದ 50 ಸಾವಿರ ಲಾಭ ಪಡೆಯುತ್ತದೆ. ಇನ್ನು ಟೊಯೋಟಾ ಕಾರ್ ದೆಲಾರ್ಸ್ ಒಂದು ಕಾರ್ ಮಾರಾಟವಾದರೆ 1 ಲಕ್ಷ ರೂ. ಲಾಭವನ್ನು ಪಡೆಯುತ್ತಾರೆ.

Join Nadunudi News WhatsApp Group