India Pension: 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದ 4 ಯೋಜನೆ ಬಿಡುಗಡೆ, ಇಂದೇ ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯಿರಿ.
ಈ ನಾಲ್ಕು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಪಿಂಚಣಿ ಪಡೆದುಕೊಳ್ಳಬಹುದು.
Best 4 Government Pension Scheme: ಕೇಂದ್ರ ಸರ್ಕಾರ (Central Government) ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಪರಿಚಯಿಸುತ್ತಿದೆ. ದೇಶದ ಬಡ ಜನರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸಣ್ಣ ಉಳಿತಾಯ ಯೋಜನೆಯನ್ನು ಬಿಡುಗಡೆ ಮಾಡಿದೆ. ಜನರು ತಮ್ಮ ಬಳಿ ಇರುವ ಹಣವನ್ನು ಉಳಿತಾಯ ಮಾಡಲು ಬಯಸಿದರೆ ಸರ್ಕಾರ ಸಾಕಷ್ಟು ಯೋಜನೆಗಳು ಅವರ ಆಯ್ಕೆಯಲ್ಲಿದೆ.
ಕಡಿಮೆ ಹೂಡಿಕೆಯ ಮೂಲಕ ಹೆಚ್ಚಿನ ಲಾಭ ಗಳಿಸುವ ಯೋಜನೆಗಳು ಸಾಕಷ್ಟಿದೆ. ಇದೀಗ ಕೇಂದ್ರ ಸಾರ್ಕಾರ ಪರಿಚಯಿಸಿರುವ ನಾಲ್ಕು ಲಾಭದಾಯಕ ಯೋಜನೆಗಳ ಬಗ್ಗೆ ವಿವರವನ್ನು ತಿಳಿಯೋಣ. ಯಾವ ಯಾವ ಯೋಜನೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಪ್ರಮಾಣದ ಲಾಭವನ್ನು ಪಡೆಯಬಹುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
1. ರಾಷ್ಟೀಯ ಪಿಂಚಣಿ ಯೋಜನೆ
ಕೇಂದ್ರ ಸರ್ಕಾರ ಹಲವು ರೀತಿಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ರಾಷ್ಟೀಯ ಪಿಂಚಣಿ ಯೋಜನೆ ಕೂಡ ಒಂದಾಗಿದೆ. ಇನ್ನು 60 ವರ್ಷ ಮೇಲ್ಪಟ್ಟವರು ಈ ಯೋಜನೆಯಡಿಯಲ್ಲಿ ಮಾಸಿಕ ಪಿಂಚಣಿಯನ್ನು ಪಡೆಯಬಹುದು. ನಿವೃತ್ತಿಯ ಉಳಿತಾಯ ಉತ್ತಮ ಹೂಡಿಕೆಯ ಯೋಜನೆಯಾಗಿದೆ. ಇನ್ನು ನೀವು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಜಿಸುತ್ತಿದೆ ಈ ಪಿಂಚಣಿ ಯೋಜನೆ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ.
2. ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ
ಹಿರಿಯ ನಾಗರಿಕರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿಯನ್ನು ಪಡೆಯಬಹುದು. ಬಿಪಿಎಲ್ ವರ್ಗದಲ್ಲಿರುವವರು 60 ರಿಂದ 70 ವರ್ಷದೊಳಗಿನವರಿಗೆ ಸ್ಟೈಫಂಡ್ ಆಗಿ 300 ರೂ. ಮತ್ತು 80 ವರ್ಷ ವಯಸ್ಸಿನಲ್ಲಿ 500 ರೂ. ಪಾವತಿಸಲಾಗುತ್ತದೆ.
3. ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.
4. ವರಿಷ್ಠ ಬಿಮಾ ಯೋಜನೆ
ಭಾರತೀಯ ಜೀವ ವಿಮೆ ಈ ವರಿಷ್ಠ ಬಿಮಾ ಯೋಜನೆಯನ್ನು ನೀಡುತ್ತದೆ. ಒಮ್ಮೆ ನಿರ್ಧಿಷ್ಟ ಮೊತ್ತವನ್ನು ಪಾವತಿಸಿದರೆ ಎಲ್ ಐಸಿ ನಿಮಗೆ ನಿರ್ಧಿಷ್ಟ ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಇನ್ನು 15 ವರ್ಷದ ಹೂಡಿಕೆಯ ನಂತರ ಹೂಡಿಕೆದಾರರು ಪಿಂಚಣಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.