Gold Bond Scheme: ಕಡಿಮೆ ಬೆಲೆಯಲ್ಲಿ ಸಿಗಲಿದೆ ಚಿನ್ನ, ಸರ್ಕಾರದಿಂದ ಹೊಸ ಯೋಜನೆ ಬಿಡುಗಡೆ.

Sovereign Gold Bond Scheme: ಚಿನ್ನ ಖರೀದಿ ಮಾಡುವುದು ಎಂದರೆ ಜನರಿಗೆ ಬಹಳ ಇಷ್ಟ ಎನ್ನಬಹುದು. ಆದರೆ ಇತ್ತೀಚಿನ ದಿನದಲ್ಲಿ ಚಿನ್ನ ಅಧಿಕ ಏರಿಕೆಯತ್ತ ಮುಖ ಮಾಡಿದೆ. ಚಿನ್ನ ಬಹು ಆಯಾಮಗಳಲ್ಲಿ ಉಪಯೋಗಕ್ಕೆ ಬರುವ ಅಮೂಲ್ಯ ವಸ್ತು.

ಆಭರಣದಿಂದ ಮೆರಗು ಪಡೆಯಬಹುದು. ಅಡವಿಟ್ಟು ಕಡಿಮೆ ಬಡ್ಡಿ ದರಕ್ಕೆ ಸಾಲ ಕೂಡ ಪಡೆಯಬಹುದು. ಈ ಕಾರಣದಿಂದ ಭಾರತದಲ್ಲಿ ಚಿನ್ನಕ್ಕೆ ಬಹು ಬೇಡಿಕೆ ಇದೆ ಎನ್ನಬಹುದು.

Gold will be available at a low price, a new scheme has been launched by the government.
Image Credit: economictimes.indiatimes

ಸರ್ಕಾರದಿಂದ ಸಾರ್ವಜನಿಕರಿಗಾಗಿ ಹೊಸ ಯೋಜನೆ
ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರುವ ಚಿನ್ನದ ಬೆಲೆ ಯಾವತ್ತಿಗೂ ಕಡಿಮೆ ಆಗುವುದಿಲ್ಲ, ಹೀಗಾಗಿ ಹೂಡಿಕೆಗೂ ಚಿನ್ನ ಹೇಳಿ ಮಾಡಿಸಿರುವಂತದ್ದು. ಇದೀಗ ಸರ್ಕಾರ ತುಸು ಕಡಿಮೆ ಬೆಲೆಗೆ ಚಿನ್ನವನ್ನು ಸಾರ್ವಜನಿಕರಿಗೆ ಮಾರುವ ಯೋಜನೆ ಹಾಕಿದೆ.

ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಿಡುಗಡೆ
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಮಾರ್ಚ್ 6 ಅಂದರೆ ಇಂದು ಆರಂಭಗೊಂಡಿದೆ. ಇದು ಸವರಿನ್ ಗೋಲ್ಡ್ ಬಾಂಡ್ 2022 23 ಯೋಜನೆಯ ನಾಲ್ಕನೇ ಸಾರಣಿಯಾಗಿದೆ.

If you invest in sovereign gold bond scheme, you will get gold at a lower price
Image Credit: mathrubhumi

ಇದು ಮಾರ್ಚ್ 10 ರ ವರೆಗೆ ಚಾಲನೆ ಇರಲಿದೆ. ಈ ಹಣಕಾಸು ವರ್ಷದಲ್ಲಿ ಅಂದರೆ 2023 ಮಾರ್ಚ್ 31 ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷಕ್ಕೆ ಇದು ಕೊನೆ ಸರಣಿಯ ಗೋಲ್ಡ್ ಬಂದ್ ಸ್ಕೀಮ್ ಆಗಿದೆ.

Join Nadunudi News WhatsApp Group

ಸರ್ಕಾರದಿಂದ ಬಿಡುಗಡೆಯಾದ ಹೊಸ ಸ್ಕೀಮ್
ಸರ್ಕಾರದಿಂದಲೇ ಬಿಡುಗಡೆಯಾಗಿರುವ ಗೋಲ್ಡ್ ಬಾಂಡ್ ಸ್ಕೀಮ್ ಇದು. ಈ ಹೊಸ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಪ್ರತೀ ಗ್ರಾಮ್ ಚಿನ್ನಕ್ಕೆ ಆರ್ ​ಬಿ ಐ 5,611 ರುಪಾಯಿ ನಿಗದಿ ಮಾಡಿದೆ. ಹಿಂದಿನ ಸರಣಿಯಲ್ಲಿ 5,409 ರುಪಾಯಿ ಇಸ್ಯು ಪ್ರೈಸ್ ಹಾಕಲಾಗಿತ್ತು.

Sovereign Gold Bond Scheme has been implemented by Central Government for the benefit of the people
Image Credit; Intsgaram

ವಿಶೇಷ ಎಂದರೆ ಆನ್​ಲೈನ್​ನಲ್ಲಿ ಈ ಸ್ಕೀಮ್ ಖರೀದಿಸಿ ಡಿಜಿಟಲ್ ಆಗಿ ಹಣ ಪಾವತಿ ಮಾಡುವ ಹೂಡಿಕೆದಾರರಿಗೆ ಪ್ರತೀ ಗ್ರಾಮ್​ಗೆ 50 ರೂ ಡಿಸ್ಕೌಂಟ್ ಆಫರ್ ಕೂಡ ಕೊಡಲಾಗಿದೆ. ಅಂದರೆ ಆನ್​ಲೈನ್ ಹೂಡಿಕೆದಾರರು ಪ್ರತೀ ಗ್ರಾಮ್ ಚಿನ್ನವನ್ನು 5,561 ರುಪಾಯಿಗೆ ಖರೀದಿಸಬಹುದು.

Join Nadunudi News WhatsApp Group