Metro Rules: ಮೆಟ್ರೋ ಹತ್ತುವ ಎಲ್ಲರಿಗೂ ಸರ್ಕಾರದ ಹೊಸ ಸ್ಪಷ್ಟನೆ

ಮೆಟ್ರೋ ಹತ್ತುವ ಎಲ್ಲರಿಗೂ ಸರ್ಕಾರದ ಹೊಸ ಸ್ಪಷ್ಟನೆ

Foreign Youtuber Metro Viral Video: ನಾವು ಯಾವುದೇ ಬಸ್, ರೈಲು , ವಿಮಾನ ಪ್ರಯಾಣ ಮಾಡುವುದಾದರೂ ಟಿಕೆಟ್ ಪಡೆದೇ ಪ್ರಯಾಣ ಮಾಡಬೇಕು, ಅದರಲ್ಲೂ ಇಂದು ಸಾಮಾಜಿಕ ಜಾಲತಾಣಗಳು (Social media) ಮಿತಿ‌ಮೀರಿ ಬೆಳೆಯುತ್ತಿದೆ. ಅನೇಕ ವೆಬ್ ಬ್ಲಾಗರ್ ಮತ್ತು ಯೂಟ್ಯೂಬರ್ (youtuber) ಕೂಡ ಸೆಲೆಬ್ರಿಟಿಗಳ ಸ್ಥಾನಕ್ಕೆ ಬಂದು ತಲುಪಿದ್ದಾರೆ.

ಅದೇ ರೀತಿ ಯೂಟ್ಯೂಬರ್ ಗಳು ಅನೇಕ ಮಂದಿ ಇದ್ದರೂ ಟ್ರಾವೆಲರ್ ಹಾಗೂ ಫುಡ್ ಯೂಟ್ಯೂಬರ್ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ. ಆದರೆ ಇಂತಹದ್ದೆ ಒಂದು ಯೂಟ್ಯೂಬರ್ ಕಾನೂನು ಉಲ್ಲಂಘನೆ ಮಾಡಿ ಎಡವಟ್ಟನ್ನು ಮಾಡಿಕೊಂಡಿರುವ ದೃಶ್ಯ ಕೂಡ ವೈರಲ್(Viral) ಆಗಿದೆ, ಅದರೆ ಈ ಬಗ್ಗೆ ಟಿಕೆಟ್ ರಹಿತ ಪ್ರಯಾಣ ತಪ್ಪು ಎಂಬ ಸಂದೇಶ ಜನರಿಗೆ ತಿಳಿದಿದೆ

Metro Rules
Image Source; One India kannada

ಏನಾಯಿತು?

ವಿದೇಶಿ ಯೂಟ್ಯೂಬರ್ ಬೆಂಗಳೂರಿನ ಮೆಟ್ರೋ ಪ್ರಯಾಣದ ಕುರಿತಾಗಿ ಒಂದು ವೀಡಿಯೋ (video) ಅಪ್ಲೋಡ್ ಮಾಡಿದ್ದು ಸದ್ಯ ಆ ವೀಡಿಯೋ ಆತನಿಗೆ ಕಂಟಕ ತಂದಿದೆ. ತಮ್ಮ ಟ್ವಿಟ್ಟರ್ ಮತ್ತು ಇನ್ಸ್ ಸ್ಟಾ ಗ್ರಾಂ(Instagram) ಖಾತೆಯಲ್ಲಿ ಭಾರತದ ಮೆಟ್ರೋದಲ್ಲಿ ಪಯಣ ಎಂಬ ಟ್ಯಾಗ್ ಜೊತೆ ಪೋಸ್ಟ್ ಹಾಕಿದ್ದಾರೆ. ಶೀರ್ಷಿಕೆ ಅಡಿಯಲ್ಲಿ ವೀಡಿಯೋ ಕಂಡು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೀಡಿಯೋ ದಲ್ಲಿ ಏನಿದೆ?

Join Nadunudi News WhatsApp Group

ಈ ಒಂದು ವೀಡಿಯೋ ದಲ್ಲಿ ಆತ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಕ್ಕೆ ತೆರಳಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ಜಿಗಿದ್ದಿದ್ದಾರೆ ಬಳಿಕ ಟಿಕೆಟ್ ಕೂಡ ಕೊಳ್ಳದೆ ಪ್ರಯಾಣ ಮಾಡಿದ್ದಾರೆ.

Metro Rules
Image Source: Free Press

ಪ್ರಕರಣ ದಾಖಲು?

ಈ ಯೂಟ್ಯೂಬರ್ ವಿರುದ್ಧ ಜನರು ಟ್ಚಿಟ್ ಮಾಡಿದ್ದು ಇದೊಂದು ಅಮಾನುಷ ಘಟನೆ, ಭಾರತದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಪ್ರವೃತ್ತಿ ಬೆಳೆಯಲು ಬಿಡಬಾರದು. ಟಿಕೆಟ್ ರಹಿತ ಪ್ರಯಾಣ ಬೇರೆ ಅವರಿಗೆ ಕೆಟ್ಟ ಮಾರ್ಗದರ್ಶನ ನೀಡಿದಂತಾಗುವುದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೆಟ್ರೋ ಇಲಾಖೆಗೆ ಜನರು ದೂರಿದ್ದಾರೆ. ಹಾಗಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒಟ್ಟಾರೆಯಾಗಿ ಫೇಮಸ್ ಆಗಲು ಹೋಗಿ ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಪ್ರಾಕಾರವೇ ಶಿಕ್ಷೆ ವಿಧಿಸಲಾಗುವುದು ಎಂದು ಈ ಪ್ರಕರಣ ದಾಖಲಾಗಿದೆ. ಇನ್ನು ಮುಂದಾದರೂ ಈ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಆಗಿದೆ.

 

Join Nadunudi News WhatsApp Group