7th Pay: 7 ನೇ ವೇತನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾಕ್, ಬೇಸರದ ಸುದ್ದಿ ನೀಡಿದ ಸರ್ಕಾರ.

7 ನೇ ವೇತನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾಕ್

7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಕೂಡ 7 ನೇ ವೇತನ ಆಯೋಗ ವರದಿ ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರೀ ನೌಕರರು ಈಗಲೂ ಯೋಚಯಿಸುತ್ತಲೇ ಇದ್ದಾರೆ. ಯಾವಾಗ 7 ನೇ ವೇತನ ಆಯೋಗ ವರದಿ ಜಾರಿಯಾಗುತ್ತದೆ ಎನ್ನುವ ಕುತೂಹಲದಲ್ಲಿ ನೌಕರರು ದಿನದೂಡುತ್ತಿದ್ದಾರೆ ಎನ್ನಬಹುದು.

ಇನ್ನು ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ 7 ನೇ ವೇತನದ ಬಗ್ಗೆ ಘೋಷಣೆ ಹೊರಡಿಸಲಾಗುತ್ತದೆ ಎಂದು ಈ ಹಿಂದೆ ಸರ್ಕಾರ ಹೇಳಿಕೆ ನೀಡುತ್ತು. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಸಾಕಷ್ಟು ದಿನ ಕಳೆದಿದೆ. ಸದ್ಯ ರಾಜ್ಯ ಸರ್ಕಾರ 7 ನೇ ವೇತನ ವರದಿ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಸರ್ಕಾರ ಈ ನಿರ್ಧಾರ ಸರ್ಕಾರೀ ನೌಕರರಿಗೆ ಬೇಸರ ನೀಡಲಿದೆ.

7th Pay Latest Update
Image Credit: abplive

7 ನೇ ವೇತನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ (ಜುಲೈ 04) ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಅದರಂತೆ ಕೆಲ ದಿನಗಳ ಹಿಂದೆಯಷ್ಟೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರ್ಕಾರಿ ನೌಕರರ ಸಂಘದ ನಿಯೋಗ ಭೇಟಿ ಮಾಡಿತ್ತು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಳನೇ ವೇತನ ಆಯೋಗ ಜಾರಿ ಕುರಿತು ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ 7ನೇ ವೇತನ ಆಯೋಗ ಜಾರಿಯಾಗಲಿದೆ ಎಂದು ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಈಗ ಮತ್ತೆ ಬೇಸರ ತಂದಿದೆ.

ಬೇಸರದ ಸುದ್ದಿ ನೀಡಿದ ಸರ್ಕಾರ
ಲೋಕಸಭೆಯ ನೀತಿ ಸಂಹಿತೆ ಜಾರಿಯಾದ ನಂತರ ಏಳನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಸರ್ಕಾರಿ ನೌಕರರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ಲೋಕಸಭೆಯಲ್ಲಿ ನೀತಿ ಸಂಹಿತೆ ಹಿಂಪಡೆದಿದ್ದು, ನೀತಿ ಸಂಹಿತೆ ಹಿಂಪಡೆದ ಬಳಿಕ ನಡೆಯುತ್ತಿರುವ ಮೂರನೇ ಸಚಿವರ ಒಮ್ಮತದ ಸಭೆ ಇದಾಗಿದೆ. ಈ ಸಭೆಯಲ್ಲಿ 7 ನೇ ವೇತನ ಜಾರಿಯ ಬಗೆ ಚರ್ಚೆ ಮಾಡದಿರುವುದು ಸರಕಾರಿ ನೌಕರರಿಗೆ ಬೇಸರ ನೀಡಿದೆ ಎನ್ನಬಹುದು.  ಸರ್ಕಾರೀ ನೌಕರರ 7 ನೇ ವೇತನ ಜಾರಿಯ ಕನಸಿಗೆ ಸರ್ಕಾರ ಈ ಬಾರಿ ಕೊಡ ತಣ್ಣೀರೆರೆಚಿದೆ ಎನ್ನಬಹುದು.

Join Nadunudi News WhatsApp Group

Govt Employees 7th Pay Update
Image Credit: Informalnewz

Join Nadunudi News WhatsApp Group