7th Pay: ದೀಪಾವಳಿ ಹಬ್ಬಕ್ಕೂ ಮುನ್ನವೇ ಸರ್ಕಾರೀ ನೌಕರರಿಗೆ ಸಿಹಿಸುದ್ದಿ, ಸಂಬಳದಲ್ಲಿ ಹೆಚ್ಚಳ, ಅಧಿಕೃತ ಘೋಷಣೆ.
ಸರ್ಕಾರೀ ನೌಕರರಿಗೆ DA ಮತ್ತು DR ಹೆಚ್ಚಳ ಆಗುವ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ.
Govt Employees DA And DR Hike: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ವೇತನದ ಹೆಚ್ಚಳದ (Govt Employees Salary Hike) ಸುದ್ದಿಗಳು ಬಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಸರ್ಕಾರೀ ನೌಕರರು ಈ ಬಾರಿ ವೇತನದ ಹೆಚ್ಚಳ ನಿರೀಕ್ಶೆಯಲ್ಲಿದ್ದಾರೆ. ಜುಲೈ ನಿಂದ ನೌಕರರ ವೇತನ ಹೆಚ್ಚಳವಾಗುವುದಾಗಿ ಸರ್ಕಾರ ಘೋಷಿಸಿದ್ದು, ಸದ್ಯ ಕೇಂದ್ರ ನೌಕರರಿಗೆ ಸರ್ಕಾರ ದೀಪಾವಳಿಯ ಉಡುಗೊರೆಯನ್ನು ನೀಡಲು ಮುಂದಾಗಿದೆ.
ದೀಪಾವಳಿಯ ಸಮಯದಲ್ಲಿ ಈ ಬಾರಿ ನೌಕರರ ವೇತನದ ಹೆಚ್ಚಳ ಆಗುವುದಂತೂ ಖಂಡಿತ. ಸದ್ಯ ನೌಕರ 7 ನೇ ವೇತನದ ಅಡಿ ಎಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಾಗಲಿದೆ? ತುಟ್ಟಿಭತ್ಯೆ ಹೆಚ್ಚಳವು ನೌಕರರ ಸಂಬಳದಲ್ಲಿ ಎಷ್ಟು ಏರಿಕೆಯಾಗಲಿದೆ? ಎನ್ನುವ ಪ್ರಶ್ನೆ ಉತ್ತರ ಇಲ್ಲಿದೆ.
ದೀಪಾವಳಿ ಹಬ್ಬಕ್ಕೂ ಮುನ್ನವೇ ಸರ್ಕಾರೀ ನೌಕರರಿಗೆ ಸಿಹಿಸುದ್ದಿ
ಸರ್ಕಾರೀ ನೌಕರರಿಗೆ ಶೇ. 4 ರಷ್ಟು DA ಮತ್ತು DR ಹೆಚ್ಚಳ ಆಗುವ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಈ ವೇತನ ಹೆಚ್ಚಳದ ನಂತರ ತುಟ್ಟಿಭತ್ಯೆ ಶೇ. 46 ತಲುಪಲಿದೆ. ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 46 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ.
ಇನ್ನು CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಇನ್ನುಮುಂದೆ 46% ತಲುಪಲಿದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಡಿಎ ಶೇ. 4 ರಷ್ಟು ಹೆಚ್ಚಳವಾದರೆ ನೌಕರರ ವೇತನ ತಿಂಗಳಿಗೆ ಎಷ್ಟು ಏರಿಕಯಾಗುತ್ತದೆ ಎಂದು ನೋಡೋಣ.
4 % DA ಹೆಚ್ಚಾದರೆ ಇಷ್ಟು ಹೆಚ್ಚಾಗಲಿದೆ ನೌಕರರ ವೇತನ
ನೌಕರರ ಮೂಲ ವೇತನ 18000 ರೂ. ಇದ್ದರೆ ಪ್ರಸ್ತುತ DA ಶೇ. 42 ರ ಅಡಿಯಲ್ಲಿ ಮಾಸಿಕ 7,560 ರೂ. ಪಡೆಯುತ್ತಿದ್ದಾರೆ ಆದರೆ ಹೊಸ ತುಟ್ಟಿಭತ್ಯೆ ಹೆಚ್ಚಳವಾದರೆ ಮಾಸಿಕ 8,280 ರೂ. ವೇತನ ಸಿಗಲಿದೆ. ಇನ್ನು ಶೇ. 46 ಪ್ರಮಾಣದಲ್ಲಿ DA ಹೆಚ್ಚಳವಾದರೆ ಮಾಸಿಕ 720 ರೂ. ಹಾಗೂ ವಾರ್ಷಿಕ 8,640 ರೂ. ಗಳನ್ನೂ ನೌಕರರು ಹೆಚ್ಚುವರಿಯಾಗಿ ಪಡೆಯಬಹುದು.
ಹಾಗೆಯೆ ನೌಕರರ ಮೂಲ ವೇತನ 56,900 ರೂ. ಇದ್ದರೆ ಪ್ರಸ್ತುತ DA ಶೇ. 42 ರ ಅಡಿಯಲ್ಲಿ ಮಾಸಿಕ 23,898 ರೂ. ಆದರೆ ಹೊಸ ತುಟ್ಟಿಭತ್ಯೆ ಹೆಚ್ಚಳವಾದರೆ ಮಾಸಿಕ 26,174 ರೂ. ವೇತನ ಸಿಗಲಿದೆ. ಇನ್ನು ಶೇ. 46 ಪ್ರಮಾಣದಲ್ಲಿ DA ಹೆಚ್ಚಳವಾದರೆ ಮಾಸಿಕ 2,276 ರೂ. ಹಾಗೂ ವಾರ್ಷಿಕ 27,312 ರೂ. ಗಳನ್ನೂ ನೌಕರು ಹೆಚ್ಚುವರಿಯಾಗಿ ಪಡೆಯಬಹುದು.