DA And HRA Update: ಸರ್ಕಾರೀ ನೌಕರರ DA ಮತ್ತು ಬಾಡಿಗೆ ಭತ್ಯೆ ಮತ್ತೆ ಇಷ್ಟು ಹೆಚ್ಚಳ, ಹೊಸ ವರ್ಷಕ್ಕೆ 2 ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ
ಹೊಸ ವರ್ಷಕ್ಕೆ ಸರ್ಕಾರೀ ನೌಕರರ DA ಜೊತೆಗೆ HRA ಕೂಡ ಹೆಚ್ಚಳ
Govt Employees DA And HRA Hike 2024: ಹೊಸ ವರ್ಷದ ಆರಂಭ ಸರ್ಕಾರೀ ನೌಕರರಿಗೆ ಹೆಚ್ಚಿನ ಶುಭ ಸುದ್ದಿಯನ್ನು ನೀಡುತ್ತಿದೆ. ಹೊಸ ವರ್ಷದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳ, ಹಳೆಯ ಪಿಂಚಣಿ ಘೋಷಣೆ, HRA ಘೋಷಣೆ, ತೆರಿಗೆ ವಿನಾಯಿತಿ ಸೇರಿದಂತೆ ಇನ್ನಿತರ ಅಪ್ಡೇಟ್ ಗಳು ಹೊರಬೀಳಲಿದೆ. ಇನ್ನು ಸರ್ಕಾರೀ ನೌಕರರು ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಸದ್ಯ ಸರ್ಕಾರೀ ನೌಕರರಿಗೆ ಹೊಸ ವರ್ಷದಲ್ಲಿ ಸರ್ಕಾರ ಎರಡು ಬಂಪರ್ ಉಡುಗೊರೆಯನ್ನು ನೀಡಲು ಮುಂದಾಗಿದೆ.
ಹೊಸ ವರ್ಷಕೆ ಸರ್ಕಾರೀ ನೌಕರರಿಗೆ ಎರಡು ಬಿಗ್ ಗಿಫ್ಟ್
ಕೇಂದ್ರ ನೌಕರರಿಗೆ ಈ ಹೊಸ ವರ್ಷ ಬಹಳ ವಿಶೇಷವಾಗಿರಲಿದೆ. ಹೊಸ ವರ್ಷದಲ್ಲಿ ನೌಕರರು ತುಟ್ಟಿಭತ್ಯೆ ಉಡುಗೊರೆಯನ್ನು ಪಡೆದುಕೊಂಡರೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಲಿದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಅರ್ಧ ವಾರ್ಷಿಕ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಸರ್ಕಾರವು ಮತ್ತೊಮ್ಮೆ ತುಟ್ಟಿ ಭತ್ಯೆಯನ್ನು 4 ಪ್ರತಿಶತದಷ್ಟು ಹೆಚ್ಚಿಸಿದರೆ ಕೇಂದ್ರ ನೌಕರರ ಭತ್ಯೆ ಶೇಕಡಾ 50 ಆಗಿರುತ್ತದೆ.
ಸರ್ಕಾರೀ ನೌಕರರ DA ಜೊತೆಗೆ HRA ಕೂಡ ಹೆಚ್ಚಳ
ಜೊತೆಗೆ ಕೇಂದ್ರ ನೌಕರರ HRA ಕೂಡ ಹೆಚ್ಚಾಗುತ್ತದೆ. ಒಂದೊಮ್ಮೆ ಸರ್ಕಾರಿ ನೌಕರರ DA ಮತ್ತು HRA ಎರಡು ಕೂಡ ಹೆಚ್ಚಾದರೆ ಸರ್ಕಾರೀ ನೌಕರರ ವೇತನದಲ್ಲಿ ಬಾರಿ ಪ್ರಮಾಣದ ಏರಿಕೆ ಆಗಲಿದೆ. ಇನ್ನು HRA ಮೊತ್ತವು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತದೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ಯೋಗಿಗಳು ಮಾತ್ರ HRA ಪ್ರಯೋಜನವನ್ನು ಪಡೆಯುತ್ತಾರೆ.
ಉದಾಹರಣೆಗೆ, ಶ್ರೇಣಿ-I ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಶ್ರೇಣಿ-II ಅಥವಾ ಶ್ರೇಣಿ-III ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗಿಂತ ಹೆಚ್ಚಿನ HRA ಅನ್ನು ಪಡೆಯುತ್ತಾರೆ. ತುಟ್ಟಿಭತ್ಯೆ ಶೇಕಡಾ 50 ಇರುವಾಗ HRA ಅನ್ನು ಪರಿಷ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ AICPI ಸೂಚ್ಯಂಕದ ಅರ್ಧ-ವಾರ್ಷಿಕ ಕಾರ್ಯಕ್ರಮದ ಅಡಿಯಲ್ಲಿ DA ದರವನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. 2023 ರಲ್ಲಿ ಒಟ್ಟು 8% DA ಹೆಚ್ಚಳ ಮಾಡಲಾಗಿದೆ. ಇನ್ನು 2024 ರ ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಸರ್ಕಾರೀ ನೌಕರರ DA ಮತ್ತು HRA ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸಲಿದೆ.