DA Arrears: ಸರ್ಕಾರೀ ನೌಕರರ ಖಾತೆಗೆ ಜಮಾ ಆಗಲಿದೆ 30,864 ರೂ, ಕೇಂದ್ರದಿಂದ ಇನ್ನೊಂದು ಸಿಹಿಸುದ್ದಿ.
ಈ ದಿನದಂದು ಸರ್ಕಾರೀ ನೌಕಾರರ ಖಾತೆಗೆ ಜಮಾ ಆಗಲಿದೆ ಭಾಕಿ ಇರುವ DA ಹಣ.
Govt Employees DA Arrears: ಸದ್ಯ ದೇಶದಲ್ಲಿ ದೀಪಾವಳಿಯ ಉಡುಗೊರೆಯಾಗಿ ಕೇಂದ್ರ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ. ಶೇ. 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಹೊರಡಿಸಿದೆ. ಅಕ್ಟೋಬರ್ ತಿಂಗಳ ವೇತನದ ಜೊತೆಗೆ ಶೇ. 4ರಷ್ಟು ಹೆಚ್ಚುವರಿ ತುಟ್ಟಿ ಭತ್ಯೆಯನ್ನು ನೀಡಲಾಗಿದೆ.
ಹೊಸ ತುಟ್ಟಿಭತ್ಯೆಯನ್ನು ವರ್ಷದ ದ್ವಿತೀಯಾರ್ಧಕ್ಕೆ ಜಾರಿಗೊಳಿಸಲಾಗಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ 3 ತಿಂಗಳ ಬಾಕಿಯನ್ನು ಕೂಡ ನೀಡಲಾಗಿದೆ. ಆದರೆ ನೌಕರರಿಗೆ ಎಷ್ಟು DA ಬಾಕಿ ಹಣ ತಲುಪಬೇಕಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ನೌಕರಿಗೆ DA ಬಾಕಿ ಹಣ ತಲುಪಬೇಕಿದೆ
ಎಲ್ಲಾ ಕೇಂದ್ರ ನೌಕರರು ಮತ್ತು ಪಿಂಚಣಿದಾರರು 3 ತಿಂಗಳ ಬಾಕಿಯ ಲಾಭವನ್ನು ಪಡೆದಿದ್ದಾರೆ. ಹೊಸ ವೇತನ ಶ್ರೇಣಿಯಲ್ಲಿ, ತುಟ್ಟಿಭತ್ಯೆಯನ್ನು ಪೇ ಬ್ಯಾಂಡ್ ಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. 1 ನೇ ಹಂತದಲ್ಲಿರುವ ಉದ್ಯೋಗಿಗಳ ಗ್ರೇಡ್ ಪೇ 1,800 ರೂ. ಇದರಲ್ಲಿ ಮೂಲ ವೇತನ 18,000 ರೂ. ಆಗಿದೆ. ಇದಲ್ಲದೇ ಪ್ರಯಾಣ ಭತ್ಯೆ (TA) ಕೂಡ ಇದಕ್ಕೆ ಸೇರ್ಪಡೆಯಾಗಿದೆ. ಇದಾದ ನಂತರವೇ ಹಣಕಾಸಿನ ಬಾಕಿಯನ್ನು ನಿರ್ಧರಿಸಲಾಗುತ್ತದೆ.
ಸರ್ಕಾರೀ ನೌಕರರ ಖಾತೆಗೆ ಜಮಾ ಆಗಲಿದೆ 30864 ರೂ.
7 ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ನೌಕರರ ವೇತನವನ್ನು ಹಂತ 1 ರಿಂದ ಹಂತ 18 ರ ವರೆಗೆ ವಿವಿಧ ದರ್ಜೆಯ ವೇತನಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಗ್ರೇಡ್ ಪೇ ಮತ್ತು ಪ್ರಯಾಣ ಭತ್ಯೆಯ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಹಂತ 1 ರಲ್ಲಿ, ಕನಿಷ್ಠ ವೇತನವು ರೂ 18,000 ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ವೇತನವು ರೂ 56,900 ಆಗಿದೆ. ಹಾಗೆಯೆ ಹಂತ 2 ರಿಂದ 14 ರ ವರೆಗಿನ ದರ್ಜೆಯ ವೇತನದ ಪ್ರಕಾರ ವೇತನವು ಬದಲಾಗುತ್ತದೆ.
ಆದರೆ ಹಂತ-15, 17, 18 ರಲ್ಲಿ ಗ್ರೇಡ್ ಪೇ ಇಲ್ಲ. ಇಲ್ಲಿ ವೇತನ ನಿಗದಿಯಾಗಿದೆ. ಹಂತ-15 ರಲ್ಲಿ ಕನಿಷ್ಠ ಮೂಲ ವೇತನವು ರೂ. 1,82,200 ಆಗಿದ್ದರೆ, ಗರಿಷ್ಠ ವೇತನವು ರೂ 2,24,100 ಆಗಿದೆ. ಹಂತ-17 ರಲ್ಲಿ ಮೂಲ ವೇತನವನ್ನು 2,25,000 ರೂ. ಗಳಿಗೆ ನಿಗದಿಪಡಿಸಲಾಗಿದೆ. ಅದರಂತೆಯೇ ಹಂತ-18 ರಲ್ಲಿಯೂ ಸಹ ಮೂಲ ವೇತನವನ್ನು 2,50,000 ರೂ. ಆಗಿ ನಿಗದಿಪಡಿಸಲಾಗಿದೆ. ಮೂಲ ವೇತನ 2,50,000 ಲೆಕ್ಕಾಚಾರದಲ್ಲಿ ಜುಲೈನಲ್ಲಿ ರೂ. 10,288, ಆಗಸ್ಟ್ ನಲ್ಲಿ ರೂ. 10,288, ಸೆಪ್ಟೆಂಬರ್ ನಲ್ಲಿ ರೂ. 10,288 DA ಬಾಕಿ ಇದ್ದು, ಒಟ್ಟಾಗಿ 30,864 ರೂ. DA ಬಾಕಿ ಇದೆ.