DA Hike 2024: ಸರ್ಕಾರೀ ನೌಕರರಿಗೆ ಶಿವರಾತ್ರಿ ಹಬ್ಬದ ಉಡುಗೊವ ನೀಡಿದ ಮೋದಿ, ಸಂಬಳದಲ್ಲಿ ಇಷ್ಟು ಹೆಚ್ಚಳ

ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್.

Govt Employees DA Hike Latest Update: ಪ್ರಸ್ತುತ ದೇಶದಲ್ಲಿ ಸಾಕಷ್ಟು ಸಮಯದಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಕೇಂದ್ರ ನೌಕರರು ತಮ್ಮ ತುಟ್ಟಿಭತ್ಯೆ ಹಾಗೂ ಪಿಂಚಣಿದಾರರು ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವಂತೆ ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ನೌಕರರ ಮನವಿಯ ಮೇರೆಗೆ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಲೇ ಇರುತ್ತದೆ. ಸದ್ಯ ಈಗ ಕೇಂದ್ರ ಸರ್ಕಾರ ಶಿವ ರಾತ್ರಿಯ ದಿನದಂತೆ ಸರ್ಕಾರೀ ನೌಕರರಿಗೆ ಸಂಬಳದ ಹೆಚ್ಚಳದ ಕುರಿತಂತೆ ಗುಡ್ ನ್ಯೂಸ್ ನೀಡಿದೆ.

Govt Employees DA Hike
Image Credit: Jagran

ಕೇಂದ್ರ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್
ನೌಕರರ ತುಟ್ಟಿಭತ್ಯೆ ಶೇ. 4 ರಷ್ಟು ಹೆಚ್ಚಿಸಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಇನ್ನು ನೌಕರರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಈವರೆಗೂ ಕೇಂದ್ರದಿಂದ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಪ್ರಸ್ತುತ 2024 ರಲ್ಲಿ ಕೇಂದ್ರ ಸರ್ಕರ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿದೆ. ನಿನ್ನೆಯಷ್ಟೇ ಮೋದಿ ಸರ್ಕಾರ ಮಹತ್ವದ ಸಭೆ ನಡೆಸಿ ನೌಕರರ ತುಟ್ಟಿಭಹತ್ಯೆ ಹೆಚ್ಚಲದ ಬಗ್ಗೆ ಘೋಷಣೆ ಹೊರಡಿಸಿದೆ. ಈ ಬಾರಿ ಕೇಂದ್ರದ ನಿರ್ಧಾರ ನೌಕರರಿಗೆ ಸಂತಸ ನೀಡಲಿದೆ.

ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಇದೀಗ ಮೋದಿ ಸರ್ಕಾರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು 46 ರಿಂದ 50 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ತುಟ್ಟಿ ಭತ್ಯೆಯನ್ನು ಜನವರಿ 1 ರಿಂದ ಜೂನ್ 30 2024 ರ ವರೆಗೆ ಹೆಚ್ಚಿಸಲಾಗಿದೆ.

Govt Employees DA Hike Latest Update
Image Credit: Oneindia

ಗುರುವಾರ ಮಾರ್ಚ್ 7, 2024 ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ, ತುಟ್ಟಿಭತ್ಯೆಯನ್ನು 46 ರಿಂದ 50 ಪ್ರತಿಶತಕ್ಕೆ ಹೆಚ್ಚಿಸಲು ನಿರ್ಧರಿಸಲಾಯಿತು. ಸರ್ಕಾರದ ಈ ನಿರ್ಧಾರದಿಂದ ಸುಮಾರು 49 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಹೋಳಿ ಮುನ್ನವೇ ಕೇಂದ್ರ ಸರ್ಕಾರ ತುಟ್ಟಿಭತ್ಯೆ ವಿಚಾರವಾಗಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group