GPF, PF Interest Rate: PF ಹಣ ಪಡೆಯುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಬಡ್ಡಿದರ ನಿಗದಿ

ಕೇಂದ್ರದಿಂದ ಜಿಪಿಎಫ್, ಪಿಎಫ್ ಬಡ್ಡಿ ದರ ಘೋಷಣೆ

GPF, PF Interest Rate New Update: ಸದ್ಯ ಸರ್ಕಾರೀ ನೌಕರರು ವೇತನ ಹೆಚ್ಚಳದ ಖುಷಿಯಲ್ಲಿದ್ದಾರೆ. ನೌಕರರ ವೇತನ ಯಾವ ಹೆಚ್ಚಾಗುತ್ತದೆ ಎನ್ನುವ ಬಗ್ಗೆ ಸರಕಾರ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಡಿಸಿಲ್ಲ. ವೇತನ ಹೆಚ್ಚಳದ ಜೊತೆಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಕೂಡ ನೌಕರರ ಬೇಡಿಕೆಯಾಗಿದೆ.

ಆದಷ್ಟು ಬೇಗ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದ ನೌಕರರಿಗೆ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. ಸದ್ಯ ಕೇಂದ್ರ ಸರ್ಕಾರ ಜಿಪಿಎಫ್, ಪಿಎಫ್ ಬಡ್ಡಿದರದ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

GPF, PF Interest Rate New Update
Image Credit: Times Now News

ಕೇಂದ್ರದಿಂದ ಜಿಪಿಎಫ್, ಪಿಎಫ್ ಬಡ್ಡಿ ದರ ಘೋಷಣೆ
ಹಣಕಾಸು ಸಚಿವಾಲಯವು ಜುಲೈ-ಸೆಪ್ಟೆಂಬರ್ ತಿಂಗಳ ಸಾಮಾನ್ಯ ಭವಿಷ್ಯ ನಿಧಿ (GPF) ಮತ್ತು ಇತರೆ ರೀತಿಯ ಭವಿಷ್ಯ ನಿಧಿ ಯೋಜನೆಗಳ ಬಡ್ಡಿದರಗಳನ್ನು ಪ್ರಕಟಿಸಿದೆ. ಜುಲೈ 3, 2024 ರ ನಿರ್ಣಯದಲ್ಲಿ, “2024-2025 ವರ್ಷಕ್ಕೆ, ಸಾಮಾನ್ಯ ಭವಿಷ್ಯ ನಿಧಿ ಮತ್ತು ಇತರ ರೀತಿಯ ನಿಧಿಗಳಿಗೆ ಚಂದಾದಾರರ ಕ್ರೆಡಿಟ್ ಮೇಲಿನ ಸಂಗ್ರಹಣೆಯು ಜುಲೈ 1, 2024 ರಿಂದ ಸೆಪ್ಟೆಂಬರ್ 30, 2024 ರವರೆಗೆ 7.1% ದರದಲ್ಲಿ ಬಡ್ಡಿಯನ್ನು ಹೊಂದಿರುತ್ತದೆ ಎಂದು ಘೋಷಿಸಲಾಗಿದೆ. ಹೊಸ ಬಡ್ಡಿದರಗಳು ಜುಲೈ 1 ರಿಂದ ಜಾರಿಗೆ ಬರಲಿದೆ.

ಜುಲೈ 1 ರಿಂದ ಬಡ್ಡಿದರಗಳು ಎಷ್ಟಿರುತ್ತದೆ….?
2024 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ GPF ಮೇಲಿನ ಬಡ್ಡಿ ದರವು 7.1% ಆಗಿರುತ್ತದೆ. ಇನ್ನು 2024 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ 7.1% ಬಡ್ಡಿದರಗಳನ್ನು ಗಳಿಸುವ ಫಂಡ್‌ ಗಳು ಈ ಕೆಳಗಿನಂತಿವೆ.

1. ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸೇವೆಗಳು)

Join Nadunudi News WhatsApp Group

2. ಕೊಡುಗೆ ಭವಿಷ್ಯ ನಿಧಿ (ಭಾರತ)

3. ಅಖಿಲ ಭಾರತ ಸೇವಾ ಭವಿಷ್ಯ ನಿಧಿ

4. ರಾಜ್ಯ ರೈಲ್ವೆ ಭವಿಷ್ಯ ನಿಧಿ

5. ಸಾಮಾನ್ಯ ಭವಿಷ್ಯ ನಿಧಿ (ರಕ್ಷಣಾ ಸೇವೆಗಳು)

6. ಭಾರತೀಯ ಆರ್ಡಿನೆನ್ಸ್ ಇಲಾಖೆ ಭವಿಷ್ಯ ನಿಧಿ

GPF, PF Interest Rate
Image Credit: Moneycontrol

Join Nadunudi News WhatsApp Group