Ads By Google

Toll System: ಟೋಲ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ, ಇನ್ಮುಂದೆ ಎಷ್ಟು ದೂರ ಹೋಗುತ್ತಿರೋ ಅಷ್ಟು ಟೋಲ್.

GPS Based Tolling System

Image Source: India Today

Ads By Google

GPS Based Tolling System: ಸದ್ಯ ದೇಶದಲ್ಲಿ ಅನೇಕ ರೀತಿಯ ರಸ್ತೆ ಸಂಚಾರ ನಿಯಮಗಳು ಜಾರಿಯಾಗುತ್ತಿದೆ. ಇನ್ನು ರಸ್ತೆಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ನಿವಾರಣೆಗಾಗಿ ಕೂಡ ಕೇಂದ್ರ ಸರ್ಕ್ರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು Toll ಪಾವತಿಸುವುದು ಅಗತ್ಯವಾಗಿರುತ್ತದೆ. ಈಗಾಗಲೇ ದೇಶದಲ್ಲಿ Toll ಪಾವತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಾಗಿದೆ.

Toll ಪಾವತಿಗಾಗಿ ವಿವಿಧ ತಂತ್ರಜ್ಞಾನಗಳನ್ನು ಕೂಡ ಬಳಸಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ Toll ಸಂಗ್ರಹಣೆಗಾಗಿ GPS ಆಧಾರಿತ ಟೋಲ್ ಸಂಗ್ರಹಣಾ ವ್ಯವಸ್ಥೆಯನ್ನು ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್ ನಿಯಮದಲ್ಲಿ ಬಾರಿ ಬದಲಾವಣೆ ಆಗಲಿದೆ.

Image Credit: Karnataka Times

ಟೋಲ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ
ಹೆದ್ದಾರಿಯಲ್ಲಿನ  Toll ಸಂಗರ್ಹಣಾ ವ್ಯವಸ್ಥೆಯನ್ನು ಬದಲಾಯಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವರಾದ Nitin Gadkari ಅವರು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ GPS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಲು ಸರಕಾರ ಶೀಘ್ರವೇ ಟೆಂಡರ್ ನೀಡಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಿದ GPS Based Tolling System ಯಶಸ್ವಿಯಾಗಿದೆ ಎಂದು Gadkari ಹೇಳಿದರು.

ಇನ್ಮುಂದೆ ಎಷ್ಟು ದೂರ ಹೋಗುತ್ತಿರೋ ಅಷ್ಟು ಟೋಲ್
GPS ಆಧಾರಿತ Toll ಸಂಗ್ರಹಣಾ ವ್ಯವಸ್ಥೆ ಜಾರಿಯಾದರೆ ಇನ್ನುಮುಂದೆ Toll ಸಂಗ್ರಹಣೆಯಿಂದಾಗಿ Traffic ಸಮಸ್ಯೆ ಎದುರಾಗುವುದಿಲ್ಲ. GPS ಆಧಾರಿತ Toll ಸಂಗ್ರಹಣಾ ವ್ಯವಸ್ಥೆ ಜಾರಿಯಾದರೆ ಚಾಲಕರು ಕ್ರಮಿಸುವ ದೂರಕ್ಕೆ ಅನುಗುಣವಾಗಿ Toll ಶುಲ್ಕವನ್ನು ವಿಧಿಸಲಾಗುತ್ತದೆ.

ಕೆಲವೊಮ್ಮೆ ಸಂಪೂರ್ಣ ದೂರವನ್ನು ಕ್ರಮಿಸದಿದ್ದರೂ, ಸಂಪೂರ್ಣ Toll ಮೊತ್ತವನ್ನು ಪಾವತಿಸಬೇಕಾಗುತ್ತದೆ. GPS ಆಧಾರಿತ ಟೋಲಿಂಗ್ ವ್ಯವಸ್ಥೆ ಅಳವಡಿಕೆಯಿಂದ ವಾಹನಗಳಲ್ಲಿ ಅಳವಡಿಸಿರುವ GPS ಮೂಲಕ ನೀವು ಎಷ್ಟು ದೂರ ಪ್ರಯಾಣಿಸಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರರ್ಥ ನೀವು ಎಲ್ಲಿಯೂ ವಾಹನವನ್ನು ನಿಲ್ಲಿಸುವ ಅಗತ್ಯವಿಲ್ಲ. ನೀವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ Toll ಪಾವತಿಸಬೇಕಾಗುತ್ತದೆ.

Image Credit: Mashable

GPS ಆಧಾರಿತ ಟೋಲ್ ವ್ಯವಸ್ಥೆ
ಇನ್ನು GPS ಆಧಾರಿತ Toll ವ್ಯವಸ್ಥೆಯಲ್ಲಿ ANPR (Automated Number Plate Reader) ಕ್ಯಾಮರಾಗಳನ್ನೂ ಬಳಸಲಾಗುತ್ತದೆ. ಇನ್ನು ANPR ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ.

ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಗಳನ್ನು ಇರಿಸಲಾಗುತ್ತದೆ. ಈ GPS ಸಿಸ್ಟಮ್ ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕ್ಯಾಶ್ ಇದ್ದರೆ ನೀವು ಸುಲಭವಾಗಿ ಟೋಲ್ ಪಾವತಿಸಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in