GPS Toll: ಇನ್ನುಮುಂದೆ ದೂರಕ್ಕೆ ಅನುಗುಣವಾಗಿ ಟೋಲ್ ಕಟ್ಟಿ, ಟೋಲ್ ಗೇಟ್ ನಲ್ಲಿ ಹೊಸ ತಂತ್ರಜ್ಞಾನ.
ಟೋಲ್ ಗೇಟ್ ನಲ್ಲಿ ಜಿಪಿಎಸ್ ಅಳವಡಿಸುವುದರ ಮೂಲಕ ವಾಹನ ಸವಾರರು ದೂರಕ್ಕೆ ಅನುಗುಣವಾಗಿ ಟೋಲ್ ಕಟ್ಟಬೇಕು.
GPS In Toll Plaza: ಇದೀಗ ದೇಶಾದ್ಯಂತ ಟೋಲ್ ಬೂತ್ ಗಳನ್ನೂ ತೆಗೆದುಹಾಕುವ ಸುದ್ದಿ ಹೊರ ಬಿದ್ದಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಬಹುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಟೋಲ್ ಸಂಗ್ರಹಕ್ಕೆ ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆ ಮತ್ತು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ.
ಟೋಲ್ ಸಂಗ್ರಹಕ್ಕಾಗಿ ವಾಹನಗಳಲ್ಲಿ ಜೆಪಿಎಸ್ ಅಳವಡಿಕೆ
ಟೋಲ್ ಸಂಗ್ರಹಕ್ಕಾಗಿ ವಾಹನಗಳಲ್ಲಿ ಜೆಪಿಎಸ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೆಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞರು ಸಲಹೆ ನೀಡಿದ್ದಾರೆ. ಸಾಧ್ಯವಾದರೆ ಅದನ್ನು ವಾಹನ ವಿಮೆಗೆ ಲಿಂಕ್ ಮಾಡಬೇಕು. ಅಂದರೆ ಜಿಪಿಎಸ್ ಅಳವಡಿಸಿದಾಗ ಮಾತ್ರ ವಾಹನಕ್ಕೆ ವಿಮೆ ಮಾಡಬೇಕು.
ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹಣೆ
ಟೋಲ್ ಸಂಗ್ರಹಣೆಯನ್ನು ಇನ್ನುಮುಂದೆ ಫಾಸ್ಟ್ಯಾಗ್ ಮೂಲಕ ಮಾಡಲಾಗುತ್ತದೆ. ಆದರೆ ಜಿಪಿಎಸ್ ಸಂಗ್ರಹಣೆ ಪ್ರಾರಂಭವಾದಾಗ ಎಲ್ಲ ಟೋಲ್ ಬೂತ್ ಗಳನ್ನೂ ತೆಗೆದುಹಾಕಬೇಕಾಗುತ್ತದೆ.
ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ವಾಹನದಲ್ಲಿ GPS ಅನ್ನು ಸ್ಥಾಪಿಸುವುದಿಲ್ಲ ಅಥವಾ ಟೋಲ್ ಅನ್ನು ತಪ್ಪಿಸಲು ಯಾವುದೇ ಬಟ್ಟೆ ಅಥವಾ ಕಾಗದದಿಂದ ನಂಬರ್ ಪ್ಲೇಟ್ ಅನ್ನು ಮುಚ್ಚಬಾರದು ಎಂದು NHAI ಜನರಿಗೆ ಮನವಿಯನ್ನ ಮಾಡಿಕೊಂಡಿದೆ.
ಜಿಪಿಎಸ್ ನ ಉಪಯೋಗ
ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ವೆ ನಲ್ಲಿ ಎಷ್ಟು ಕಿಲೋಮೀಟರ್ ಓಡಿದೆ ಎಂಬುದನ್ನು ಜಿಪಿಎಸ್ ಮೂಲಕ ಅಳೆಯಲಾಗುತ್ತದೆ. ನಂತರ ವಾಹನದ ನಂಬರ್ ಪ್ಲೇಟ್ ಅನ್ನು ಕ್ಯಾಮೆರಾಗಳ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ವಾಹನದಲ್ಲಿ ಯಾವ ಕಂಪನಿಯ ಫಾಸ್ಟ್ಯಾಗ್ ವ್ಯಾಲೆಟ್ ಅನ್ನು ಸ್ಥಾಪಿಸಲಾಗಿದೆ ಎಂಬುದನ್ನು ಇದು ಸಿಸ್ಟಮ್ ಗೆ ತಿಳಿಸುತ್ತದೆ. ಅದರ ನಂತರ ದೂರಕ್ಕೆ ಅನುಗುಣವಾಗಿ ಟೋಲ್ ಕಡಿತಗೊಳಿಸಲಾಗುತ್ತದೆ.